Swapan Shastra: ನೀವೂ ಕನಸಿನಲ್ಲಿ ಮಂಗಗಳನ್ನು ವಿಚಿತ್ರ ಭಂಗಿಗಳಲ್ಲಿ ನೋಡುತ್ತೀರಾ?

Meaning of Seeing Monkey in Dream: ರಾತ್ರಿಯಲ್ಲಿ ಕನಸಿನಲ್ಲಿ ಕೋತಿಗಳನ್ನು ವಿಚಿತ್ರ ಭಂಗಿಯಲ್ಲಿ ನೋಡುತ್ತೀರಾ. ಹೌದು ಎಂದಾದರೆ, ಆ ವಿಚಿತ್ರ ಭಂಗಿಗಳ ಮೂಲಕ  ನಿಮಗೆ ಮುಂಬರುವ ಸಮಯದ ಬಗ್ಗೆ ನೀಡುತ್ತಿರುವ ಎಚ್ಚರಿಕೆ ಏನು ಎಂದು ಅರ್ಥಮಾಡಿಕೊಳ್ಳಿ.   

Written by - Yashaswini V | Last Updated : May 25, 2022, 09:25 AM IST
  • ಕೋತಿಯನ್ನು ಅಂದರೆ ಮಂಗಗಳನ್ನು ಹನುಮಾನ್ ಜಿಯ ಸಂಕೇತವೆಂದು ಪರಿಗಣಿಸಲಾಗಿದೆ
  • ಅಂದರೆ ನಿಮ್ಮ ಕನಸಿನಲ್ಲಿ ಮಂಗನನ್ನು ಕಂಡರೆ ಹನುಮಂತನನ್ನು ಕಂಡಂತೆ ಎಂದು ಹೇಳಲಾಗುತ್ತದೆ
  • ಕನಸಿನಲ್ಲಿ ಕಾಣುವ ಮಂಗ ನಿಮ್ಮ ಮುಂಬರುವ ಭವಿಷ್ಯದ ಕೆಲವು ದೊಡ್ಡ ರಹಸ್ಯಗಳನ್ನು ತಿಳಿಸಲಿದೆ
Swapan Shastra: ನೀವೂ ಕನಸಿನಲ್ಲಿ ಮಂಗಗಳನ್ನು ವಿಚಿತ್ರ ಭಂಗಿಗಳಲ್ಲಿ ನೋಡುತ್ತೀರಾ?  title=
Monkey in Dream

ಕನಸಿನಲ್ಲಿ ಕೋತಿಯನ್ನು ನೋಡುವುದರ ಅರ್ಥ:  ಮಲಗಿರುವಾಗ ಕನಸು ಕಾಣುವುದು ಸಹಜ. ಆ ಕನಸಿನಲ್ಲಿ ನಾವು ಆಗಾಗ್ಗೆ ವಿಚಿತ್ರವಾದ ವಿಷಯಗಳನ್ನು ನೋಡುತ್ತೇವೆ. ಮರುದಿನ ಬೆಳಗ್ಗೆ ಎದ್ದಾಗ ಆ ಕನಸಿನ ಬಗ್ಗೆ ಯೋಚಿಸುತ್ತಲೇ ಇರುತ್ತೇವೆ ಆದರೆ ಅದರ ಅರ್ಥ ಗೊತ್ತಾಗುವುದಿಲ್ಲ. ಸ್ವಪ್ನ ಶಾಸ್ತ್ರದಲ್ಲಿ ಅವುಗಳ ಬಗ್ಗೆ ವಿವರಿಸಲಾಗಿದೆ. ಕನಸಿನಲ್ಲಿ ಮಂಗಗಳನ್ನು ನೋಡುವುದರ ಅರ್ಥ ಮತ್ತು ಅದರಲ್ಲಿ ಅಡಗಿರುವ ಭವಿಷ್ಯದ ಚಿಹ್ನೆಗಳನ್ನು ಸಹ ವಿವರಿಸಲಾಗಿದೆ. ಈ ಲೇಖನದಲ್ಲಿ ಕನಸಿನಲ್ಲಿ ಕೋತಿಯನ್ನು ನೋಡುವುದರ ಅರ್ಥವೇನೆಂದು ತಿಳಿಯೋಣ...

ಮೊದಲನೆಯದಾಗಿ, ಕೋತಿಯನ್ನು ಅಂದರೆ ಮಂಗಗಳನ್ನು ಹನುಮಾನ್ ಜಿಯ ಸಂಕೇತವೆಂದು ಪರಿಗಣಿಸಲಾಗಿದೆ. ಅಂದರೆ ನಿಮ್ಮ ಕನಸಿನಲ್ಲಿ ಮಂಗ ಕಂಡರೆ ಹನುಮಂತನನ್ನು ಕಂಡಂತೆ. ಅಂತಹ ಪರಿಸ್ಥಿತಿಯಲ್ಲಿ, ಕನಸಿನಲ್ಲಿ ಕಾಣುವ ಕೋತಿಯ ಭಂಗಿಯಲ್ಲಿ ನಿಮ್ಮ ಮುಂಬರುವ ಭವಿಷ್ಯದ ಕೆಲವು ದೊಡ್ಡ ರಹಸ್ಯಗಳನ್ನು ಮರೆಮಾಡಲಾಗಿದೆ. ಆ ರಹಸ್ಯಗಳು ಏನೆಂದು ತಿಳಿಯೋಣ. 

ನೀವೂ ಕನಸಿನಲ್ಲಿ ಮಂಗಗಳನ್ನು ವಿಚಿತ್ರ ಭಂಗಿಗಳಲ್ಲಿ ನೋಡುತ್ತೀರಾ... ಹಾಗಿದ್ದರೆ, ನಿಮ್ಮ ಕನಸಿನಲ್ಲಿ ಕೋತಿ ಯಾವ ಭಂಗಿಯಲ್ಲಿ ಕಂಡರೆ ಏನನ್ನು ಸೂಚಿಸಲಿದೆ ಎಂದು ತಿಳಿಯಿರಿ.
ಕೋತಿಯು ಕೋಪದಿಂದ ಕೆಂಪು ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತಿರುವ ದೃಶ್ಯ:

ನಿಮ್ಮ ಕನಸಿನಲ್ಲಿ ಕೋತಿಯನ್ನು ಕೋಪದಲ್ಲಿ ನೋಡಿದರೆ, ಅದು ದುರದೃಷ್ಟದ ಸಂಕೇತವಾಗಿದೆ. ಅಂತಹ ಕನಸನ್ನು ನೋಡಿದರೆ ನಿಮಗೆ ಏನಾದರೂ ಅಶುಭ ಸಂಭವಿಸಲಿದೆ ಎಂದರ್ಥ. ಇದು ನಿಮ್ಮ ಯಾವುದೇ ಹಣಕಾಸಿನ ನಷ್ಟ, ಮನೆಯಲ್ಲಿ ತೊಂದರೆ, ಕೌಟುಂಬಿಕ ಕಲಹ ಅಥವಾ ಮಾಡುವ ಕೆಲಸದಲ್ಲಿ ಸಿಲುಕಿಕೊಳ್ಳುವುದು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Astrology Tips: ನಿಮ್ಮ ದೇವರ ಮನೆಯಿಂದ ಇಂದೇ ಈ 5 ವಸ್ತುಗಳನ್ನು ತೆಗೆಯಿರಿ

ಕನಸಿನಲ್ಲಿ ಸಂತೋಷವಾಗಿರುವ ಕೋತಿಯನ್ನು ನೋಡಿದರೆ:
ಕನಸಿನಲ್ಲಿ ಕೋತಿ ಸಂತೋಷವಾಗಿರುವುದನ್ನು ನೋಡುವುದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಅಂತಹ ಕನಸು ಕಂಡರೆ ನೀವು ಕೆಲವು ಉತ್ತಮ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದರ್ಥ. ನೀವು ವ್ಯಾಪಾರ ಅಥವಾ ಉದ್ಯೋಗದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಯಾರೊಂದಿಗಾದರೂ ಹಳೆಯ ಪೈಪೋಟಿ ಕೊನೆಗೊಳ್ಳಬಹುದು. ನೀವು ಸಮಾಜದಲ್ಲಿ ಸ್ಥಾನ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. 

ಮಂಗಗಳು ಹಿಂಡಿನಲ್ಲಿ ಆಡುತ್ತಿರುವ ದೃಶ್ಯ:
ಕನಸಿನಲ್ಲಿ ಅನೇಕ ಬಾರಿ ಮಂಗಗಳ ಹಿಂಡು ಒಟ್ಟಿಗೆ ತಿನ್ನುವುದು ಅಥವಾ ಆಡುವುದು ಕಂಡುಬರುತ್ತದೆ. ಈ ರೀತಿಯ ಕನಸನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕುಟುಂಬದವರಿಗೆ ಸಂತೋಷದ ಸುದ್ದಿ ಸಿಗಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಅಲ್ಲದೆ, ಕುಟುಂಬದಲ್ಲಿ ತಲೆದೂರಿರುವ ಕ್ಲೇಶ ಮತ್ತು ಅಶಾಂತಿ ಈಗ ಕೊನೆಗೊಳ್ಳುತ್ತದೆ. ಅಷ್ಟೇ ಅಲ್ಲ, ಈ ರೀತಿಯ ಕನಸನ್ನು ನೋಡುವುದು ಆರ್ಥಿಕ ಲಾಭವನ್ನು ಸಹ ಸೂಚಿಸುತ್ತದೆ. 

ಇದನ್ನೂ ಓದಿ- Vastu Tips for Purse: ಪರ್ಸ್ ನಲ್ಲಿ ದೇವರ ಚಿತ್ರ ಇಟ್ಟುಕೊಳ್ಳುವ ಅಭ್ಯಾಸ ನಿಮಗೂ ಇದೆಯೇ ? ಹಾಗಿದ್ದರೆ ಹುಷಾರಾಗಿರಿ ..!

ಕನಸಿನಲ್ಲಿ ಕೋತಿಗಳು ತಿನ್ನುವುದನ್ನು ನೋಡುವುದರ ಅರ್ಥ:
ನಿಮ್ಮ ಕನಸಿನಲ್ಲಿ ಮಂಗಗಳು ಏನನ್ನಾದರೂ ತಿನ್ನುವುದನ್ನು ನೀವು ನೋಡಿದರೆ, ಅದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ, ಕೋತಿಗಳು ಆಹಾರವನ್ನು ತಿನ್ನುವುದನ್ನು ನೋಡುವುದು ಮುಂದಿನ ದಿನಗಳಲ್ಲಿ ನೀವು ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂಬುದರ ಸಂಕೇತವಾಗಿದೆ. ಇದು ಆರ್ಥಿಕ ನಷ್ಟ ಅಥವಾ ಪ್ರತಿಷ್ಠೆಯ ನಷ್ಟ, ಯಾವುದಾದರೂ ಆಗಿರಬಹುದು ಎಂದು ಹೇಳಲಾಗುತ್ತದೆ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News