Weight Loss Drink: ತೂಕ ಇಳಿಕೆಯ ವಿಷಯಕ್ಕೆ ಬಂದಾಗ, ನೀವು ಎಲ್ಲಾ ರೀತಿಯ ಪರಿಹಾರಗಳನ್ನು ಪ್ರಯತ್ನಿಸಬೇಕು. ಕೆಲವು ನಿಮಗೆ ಲಾಭದಾಯಕವೆಂದು ಸಾಬೀತಾದರೆ, ಕೆಲವು ವಿಫಲ ಕೂಡ ಸಾಬೀತಾಗಬಹುದು. ಆದರೆ ಚಯಾಪಚಯ ಕ್ರಿಯೆಯ ವೇಗವು ಕೂಡ ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದರ  (Health News In Kannada) ಜೊತೆಗೆ ನೀವು ಏನು ಸೇವಿಸುತ್ತಿರುವಿರಿ ಅಥವಾ ಕುಡಿಯುತ್ತಿರುವಿರಿ ಎಂಬುದರ ಬಗ್ಗೆಯೂ ಗಮನ ಹರಿಸುವುದು ತುಂಬಾ ಮುಖ್ಯ. ರಾತ್ರಿಯಲ್ಲಿ ಪಾನೀಯಗಳನ್ನು ಕುಡಿಯುವುದು ನಮ್ಮ ದೇಹದ ಚಯಾಪಚಯ ದರವನ್ನು ಹೆಚ್ಚಿಸಲು ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲು ನೀವು ರಾತ್ರಿಯ ಹೊತ್ತು ಶುಂಠಿ-ಲವಂಗ ನೀರನ್ನು ತೆಗೆದುಕೊಳ್ಳಬಹುದು.


COMMERCIAL BREAK
SCROLL TO CONTINUE READING

ಶುಂಠಿ-ಲವಂಗ ನೀರನ್ನು ಹೇಗೆ ತಯಾರಿಸಬೇಕು?
ಇದಕ್ಕಾಗಿ ಮೊದಲು ಶುಂಠಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. 3-4 ಬಾರಿ ಶುದ್ಧ ನೀರಿನಿಂದ ತೊಳೆಯಿರಿ. ಈಗ ಶುಂಠಿ ಮತ್ತು ಲವಂಗವನ್ನು  ತೆಳುವಾಗಿ ಕತ್ತರಿಸಿ. ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ 10-12 ಲವಂಗ, ಪುದೀನ ಎಲೆಗಳು, ಕತ್ತರಿಸಿದ ಶುಂಠಿ ಮತ್ತು ಲವಂಗವನ್ನು ಹಾಕಿ. ಜೊತೆಗೆ 2 ಗ್ಲಾಸ್ ನೀರು ಸೇರಿಸಿ ಮತ್ತು ಪ್ಯಾನ್ ಅನ್ನು ಮುಚ್ಚಿ. 10 ನಿಮಿಷಗಳ ಕಾಲ ನೀರನ್ನು ಕುದಿಸಿ. ನಿಮ್ಮ ಶುಂಠಿ-ಲವಂಗ ನೀರು ಸಿದ್ಧವಾಗಿದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ನೀರನ್ನು ಚಹಾದಂತೆ ಕುಡಿಯಿರಿ.


ಇದನ್ನೂ ಓದಿ-ಡಿಟಾಕ್ಸ್ ಡೈಯಟ್ ನಿಂದ ತೂಕ ಇಳಿಕೆ ಮಾಡಿಕೊಳ್ಳುವ ವಿಧಾನ ಎಷ್ಟೊಂದು ಸರಿ!


ಶುಂಠಿ-ಲವಂಗ ನೀರಿನ ಪ್ರಯೋಜನಗಳು
ವಿಟಮಿನ್ ಸಿ ಸಮೃದ್ಧವಾಗಿರುವ ಈ ವಿಶೇಷ ರೀತಿಯ ನೀರಿನಲ್ಲಿ ನಿಂಬೆಯನ್ನು ಸಹ ನೀವು ಬಳಸಬಹುದು. ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಇದಲ್ಲದೆ, ಲವಂಗವನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ. ಲವಂಗದ ಕಟುವಾದ ರುಚಿಯು ನೋಯುತ್ತಿರುವ ಗಂಟಲು ಕಿರಿಕಿರಿಯಿಂದ ಸಾಕಷ್ಟು ಪರಿಹಾರ ನೀಡುತ್ತದೆ. ಇದರಿಂದ ಮೆಟಾಬಾಲಿಸಂ ಕೂಡ ಉತ್ತೆಜನಗೊಂಡು, ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ನೀರಿನಲ್ಲಿ ಬಳಸುವ ಶುಂಠಿಯು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹಸಿವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಪುದೀನ ಎಲೆಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮವಾಗಿಡುತ್ತವೆ, ಏಕೆಂದರೆ ರಂಜಕ, ಕ್ಯಾಲ್ಸಿಯಂ ಮತ್ತು ಅನೇಕ ವಿಧದ ವಿಟಮಿನ್ಗಳು ಅದರಲ್ಲಿ ಕಂಡುಬರುತ್ತವೆ.


ಇದನ್ನೂ ಓದಿ-ನೀವು ಮಾಡುವ ಈ ಕೆಲಸಗಳು ನಿಮ್ಮ ಆಂತರಿಕ ದೈಹಿಕ ಶಕ್ತಿಯನ್ನು ಕುಗ್ಗಿಸುತ್ತವೆ ಎಚ್ಚರ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.