How To Maintain Energy In Body: ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನಶೈಲಿಯಲ್ಲಿ ಆರೋಗ್ಯದ ಕಡೆ ಗಮನ ಹರಿಸುವುದು ಸ್ವಲ್ಪ ಕಷ್ಟವೇ ಸರಿ. ಜನರು ತಮ್ಮ ದಿನನಿತ್ಯದ ಕೆಲಸದಲ್ಲಿ ಎಷ್ಟು ನಿರತರಾಗಿರುತ್ತಾರೆ ಎಂದರೆ ಅವರಿಗೆ ತಮ್ಮ ಶರೀರದ ಕಡೆಗೆ ಗಮನ ಹರಿಸಲೂ ಕೂಡ ಸಮಯವಿರುವುದಿಲ್ಲ. ದಿನವಿಡೀ ನಮ್ಮ ದೈಹಿಕ ಶಕ್ತಿಯ ಮಟ್ಟದಲ್ಲಿ ಸಾಕಷ್ಟು ಏರಿಳಿತಗಳಿದ್ದರೂ, ಕೆಲ ಕೆಲಸಗಳನ್ನು ದಿನನಿತ್ಯ ಮಾಡುವುದರಿಂದ ಅವು ದೇಹದ ಆಂತರಿಕ ಶಕ್ತಿಯನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತವೆ. ಇನ್ನೋದೆದೆ ನೀವು ನಿರಂತರವಾಗಿ ದಣಿಯುತ್ತಿದ್ದರೆ, ಖಂಡಿತವಾಗಿಯೂ ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಹಾಗಾದರೆ ಯಾವ ಕೆಲಸಗಳನ್ನು ಪ್ರತಿನಿತ್ಯ ಮಾಡುವುದನ್ನು ನಾವು ತಪ್ಪಿಸಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಮರೆತೂ ಕೂಡ ಈ ಕೆಲಸಗಳನ್ನು ನಿತ್ಯ ಮಾಡಬೇಡಿ
ಮದ್ಯಪಾನ

ಹೆಚ್ಚಿನ ಜನರು ತೊಂದರೆಯಾದಾಗ ಮದ್ಯಪಾನ ಮಾಡಲು ಪ್ರಾರಂಭಿಸುತ್ತಾರೆ. ಇದನ್ನು ಮಾಡುವುದರಿಂದ ಸ್ವಲ್ಪ ಸಮಯದವರೆಗೆ ನಿಮಗೆ ಒತ್ತಡದಿಂದ ಮುಕ್ತಿ ಸಿಗಬಹುದು. ಆದರೆ ಇದು ನಿಮ್ಮ ದೇಹದ ಆಂತರಿಕ ಶಕ್ತಿಗೆ ಸಾಕಷ್ಟು ಹಾನಿಯನ್ನು ತಲುಪಿಸುತ್ತದೆ. ಆಲ್ಕೋಹಾಲ್ ದೇಹಕ್ಕೆ ವಿಷದಂತಿದೆ ಮತ್ತು ಅದನ್ನು ತೊಡೆದುಹಾಕಲು ಇಡೀ ದೇಹದ ಶಕ್ತಿಯು ಕೆಲಸ ಮಾಡುತ್ತದೆ. ಆದ್ದರಿಂದ, ನೀವು ಪ್ರತಿದಿನ ಆಲ್ಕೊಹಾಲ್ ಸೇವಿಸುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು.

ನಕಾರಾತ್ಮಕ ವಿಷಯವನ್ನು ವೀಕ್ಷಿಸುವುದು
ಹಲವು ಬಾರಿ ಜನರು ಟೈಮ್ ಪಾಸ್ ಮಾಡಲು ಏನನ್ನಾದರೂ ವೀಕ್ಷಿಸಲು ಪ್ರಾರಂಭಿಸುತ್ತಾರೆ. ಆದರೆ, ಇಂತಹ ಸಂದರ್ಭದಲ್ಲಿ ಋಣಾತ್ಮಕ ವಿಷಯ ನೋಡುವುದರಿಂದ ನಿಮ್ಮ ದೇಹದ ಆಂತರಿಕ ಶಕ್ತಿ ಪ್ರಭಾವಿತಗೊಳ್ಳುತ್ತದೆ, ಅಷ್ಟೇ ಅಲ್ಲ, ನಕಾರಾತ್ಮಕ ವಿಷಯಗಳನ್ನು ನೋಡುವುದರಿಂದ ನಿಮ್ಮ ಮನಸ್ಸನ್ನು ಉದ್ವಿಗ್ನಗೊಳ್ಳುತ್ತದೆ. ಹೀಗಾಗಿ ಋಣಾತ್ಮಕ ಕಂಟೆಂಟ್ ಅನ್ನು ಆದಷ್ಟು ತಪ್ಪಿಸಿ.


ಇದನ್ನೂ ಓದಿ-Vastu Tips: ಮನೆಯಲ್ಲಿ ತಪ್ಪಾದ ದಿಕ್ಕಿನಲ್ಲಿ ಇರಿಸಿದ ಟಿವಿ ಧನ ಹಾನಿಗೆ ಕಾರಣ, ಇಲ್ಲಿದೆ ಸರಿಯಾದ ದಿಕ್ಕಿನ ಮಾಹಿತಿ

ಸುಳ್ಳು ಹೇಳುವುದು
ನಾವು ಯಾರಿಗಾದರೂ ಸುಳ್ಳು ಹೇಳಿದಾಗ ಅಥವಾ ಯಾವುದೇ ರೀತಿಯ ಅಪ್ರಾಮಾಣಿಕತೆಯನ್ನು ಮಾಡಿದಾಗ, ಅದು ನಮ್ಮ ಮನಸ್ಸಿನ ಮೇಲೆ ಒಂದು ಭಾರವನ್ನು ಹೇರುತ್ತದೆ, ಅದು ನಮ್ಮ ದೇಹದ ಆಂತರಿಕ ಶಕ್ತಿಯನ್ನು ಕುಗ್ಗಿಸುವ ಕೆಲಸ ಮಾಡುತ್ತದೆ. ಸುಳ್ಳನ್ನು ಅರಗಿಸಲು ನಮ್ಮ ದೇಹಕ್ಕೆ ಸಾಮಾನ್ಯಕ್ಕಿಂತ ಹೆಚ್ಚಿನ ಶಕ್ತಿಯ ಅಗತ್ಯವಿದೆ, ಹೀಗಾಗಿ ಸಣ್ಣ ಪುಟ್ಟ ವಿಷಯಗಳ ಮೇಲೆ ಸುಳ್ಳು ಹೇಳುವುದನ್ನು ತಪ್ಪಿಸಿ.


ಇದನ್ನೂ ಓದಿ-Chanakya Niti: ಮಹಿಳೆಯರು ಈ ಕಾರಣಗಳಿಂದ ತಮ್ಮ ಜೀವನದಲ್ಲಿ ಅತಿಯಾದ ನಷ್ಟ ಅನುಭವಿಸುತ್ತಾರೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.