Vastu Shastra Rule: ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಟಿ.ವಿ ಇರುತ್ತದೆ. ಕೆಲವರು ಲಿವಿಂಗ್ ರೂಮಿನಲ್ಲಿ ಟಿವಿ ಇರಿಸಿದರೆ, ಇನ್ನು ಕೆಲವರು ಬೆಡ್ ರೂಮಿನಲ್ಲಿ. ಆದರೆ ನಿಮ್ಮ ಮನೆಯಲ್ಲಿ ಅಳವಡಿಸಲಾಗಿರುವ ಟಿವಿ ಆರ್ಥಿಕ ಸಮಸ್ಯೆಗಳನ್ನೂ ಉಂಟುಮಾಡುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ವಾಸ್ತು ಶಾಸ್ತ್ರದ ಪ್ರಕಾರ ಟಿವಿಯನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಇರಿಸದಿದ್ದರೆ, ಅದು ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.
ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಇರುವ ಚಿಕ್ಕ ಮತ್ತು ದೊಡ್ಡ ವಸ್ತುಗಳ ದಿಕ್ಕು ಮತ್ತು ಸ್ಥಳಗಳ ಕುರಿತು ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ವಸ್ತುಗಳನ್ನು ಕ್ರಮಬದ್ಧವಾಗಿ ಇಡುವುದರಿಂದ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ ಮತ್ತು ವಾಸ್ತು ದೋಷಗಳನ್ನು ಅದು ನಿವಾರಿಸುತ್ತದೆ.
ಟಿವಿ ಬಗ್ಗೆ ಹೇಳುವುದಾದರೆ, ವಾಸ್ತುವಿನಲ್ಲಿ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಟಿವಿಯನ್ನು ಇರಿಸಲು ಸರಿಯಾದ ದಿಕ್ಕಿನ ಬಗ್ಗೆಯೂ ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಟಿವಿಯನ್ನು ಯಾವ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಇಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.
ವಾಸ್ತು ಪ್ರಕಾರ ಟಿವಿಯನ್ನು ಈ ರೀತಿ ಇರಿಸಿ
>> ವಾಸ್ತು ಶಾಸ್ತ್ರದ ಪ್ರಕಾರ ಟಿವಿಯನ್ನು ಮನೆಯ ಆಗ್ನೇಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಟಿವಿ ಇರಿಸಿಕೊಳ್ಳಲು ಈ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ ಧನಾತ್ಮಕ ಶಕ್ತಿಯು ಈ ದಿಕ್ಕಿನಲ್ಲಿ ಹರಡುತ್ತದೆ.
>> ಟಿವಿ ನೋಡುವಾಗ ನಿಮ್ಮ ಮುಖವು ಪೂರ್ವಕ್ಕೆ ಇರುವಂತೆ ಟಿವಿಯನ್ನು ಇರಿಸಿ.
>> ಟಿವಿಯನ್ನು ಆದಷ್ಟು ಸ್ವಚ್ಛವಾಗಿಡಿ. ಟಿವಿಯ ಮೇಲೆ ಕೊಳೆಅಥವಾ ಧೂಳು ಸಂಗ್ರಹವಾಗಲು ಬಿಡಬೇಡಿ. ಇದು ನಕಾರಾತ್ಮಕತೆಗೆ ಕಾರಣವಾಗಬಹುದು.
>> ಟಿವಿಯನ್ನು ಮನೆಯ ಪ್ರವೇಶ ದ್ವಾರದ ಮುಂದೆ ಇಡಬಾರದು. ಇದರಿಂದಾಗಿ ಕುಟುಂಬದಲ್ಲಿ ಸದಾ ಕಲಹದ ವಾತಾವರಣ ಇರುತ್ತದೆ.
ಇದನ್ನೂ ಓದಿ-Chanakya Niti : ಯಾರನ್ನಾದರೂ ನಂಬುವ ಮುನ್ನ ನೆನಪಿರಲಿ ಚಾಣಕ್ಯನ ಈ ನೀತಿಗಳು!
ಮಲಗುವ ಕೋಣೆಯಲ್ಲಿ ಟಿವಿ ಇರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
>> ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಟಿವಿ ಹಾಕಬಾರದು. ಆದರೆ ನಿಮ್ಮ ಮಲಗುವ ಕೋಣೆಯಲ್ಲಿ ಟಿವಿ ಇದ್ದರೆ, ನೀವು ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
>> ಮಲಗುವ ಕೋಣೆಯಲ್ಲಿ ನೀವು ಟಿವಿಯನ್ನು ವೀಕ್ಷಿಸದಿದ್ದಾಗ, ಅದರ ಸ್ಕ್ರೀನ್ ಮುಚ್ಚಿಡಿ. ಮಲಗುವ ಕೋಣೆಯಲ್ಲಿ ಟಿವಿ ಸ್ಕ್ರೀನ್ ತೆರೆದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
>> ಟಿವಿ ಇರಿಸಬೇಕಾದ ಪ್ರಸಂಗ ಎದುರಾದರೆ ಮಲಗುವ ಕೊನೆಯ ಆಗ್ನೇಯ ಕೋನದಲ್ಲಿ ಟಿವಿ ಇರಿಸಿ. ಇದರಲ್ಲಿ ಯಾವುದೇ ತಪ್ಪಿಲ್ಲ.
>> ಮಲಗುವ ಕೋಣೆಯಲ್ಲಿ ಸ್ಥಾಪಿಸಲಾದ ಟಿವಿ ಕೋಣೆಯ ಮಧ್ಯಭಾಗದಲ್ಲಿ ಇರಬಾರದು ಎಂಬುದನ್ನು ಮರೆಯಬೇಡಿ. ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ.
ಇದನ್ನೂ ಓದಿ-Budh Margi: 2023 ಪ್ರಾರಂಭವಾದ ತಕ್ಷಣ ಈ ರಾಶಿಯ ಜನರು ಇದ್ದಕ್ಕಿದ್ದಂತೆ ಬಹಳ ಹಣ ಗಳಿಸುತ್ತಾರೆ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.