ಈ ಎರಡು ವಿಚಾರಗಳ ಬಗ್ಗೆ ಎಚ್ಚರ ವಹಿಸಿದರೆ ಸಾಕು ಸದಾ ಆರೋಗ್ಯವಾಗಿರುತ್ತದೆ ಹೃದಯ ..!
Healthy Heart Tips: ಹೃದಯವನ್ನು ಸದೃಢವಾಗಿಡಲು ಬಯಸಿದರೆ, ಕೆಟ್ಟ ಆಹಾರ ಪದ್ಧತಿಯನ್ನು ಬದಲಾಯಿಸುವುದು ಮುಖ್ಯ, ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು.
ಬೆಂಗಳೂರು : Healthy Heart Tips: ಹೃದಯ ನಮ್ಮ ದೇಹದ ಬಹು ಮುಖ್ಯ ಅಂಗ. ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆ, ಹೃದಯಾಘಾತ ಎನ್ನುವುದನ್ನು ದಿನ ಬೆಳಗಾದರೆ ಕೇಳುತ್ತಿರುತ್ತೇವೆ. ಅದೆಷ್ಟೋ ಜನ ಈ ಹೃದಯದ ಸಮಸ್ಯೆಯಿಂದಲೇ ಅತಿ ಚಿಕ್ಕ ವಯಸ್ಸಿನಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.
ಇದಕ್ಕಾಗಿ ಬಹಳ ಪರಿಶ್ರಮ ಪಡಬೇಕಿಲ್ಲ. ಹೌದು, ನಿಮ್ಮ ಹೃದಯವನ್ನು ಸದೃಢವಾಗಿಡಲು ಬಯಸಿದರೆ ಬಗ್ಗೆ ನಿಮ್ಮ ಆಹಾರ ಪದ್ದತಿಯ ಬಗ್ಗೆ ಕಾಳಜಿ ವಹಿಸಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಈ ಎರಡು ವಿಷಯಗಳ ಬಗ್ಗೆ ಗಮನ ಹರಿಸಿದರೆ ಹೃದಯ ಸದಾ ಆರೋಗ್ಯವಾಗಿರುತ್ತದೆ. ನಮ್ಮ ಆಹಾರ ಪದ್ಧತಿ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಆಹಾರವನ್ನು ಸೇವಿಸಬೇಕು ಮತ್ತು ವ್ಯಾಯಾಮ ಮಾಡಬೇಕಾಗುತ್ತದೆ.
ಇದನ್ನೂ ಓದಿ : Men Health Tips: ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಪುರುಷರು ಈ ಡ್ರೈ ಫ್ರೂಟ್ಸ್ ಸೇವಿಸಿ!
ಹೃದಯಾಘಾತಕ್ಕೆ ಇದೂ ಒಂದು ಕಾರಣ :
ನಿಯಮಿತ ವ್ಯಾಯಾಮ, ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ಹರಿಸದಿರುವುದು ಹೃದಯಾಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಹಾಗಿದ್ದರೆ ಹೃದಯದ ಆರೋಗ್ಯಕ್ಕೆ ಏನನ್ನು ತಿನ್ನಬೇಕು ?
ಆರೋಗ್ಯಕರ ಹೃದಯಕ್ಕೆ ಆರೋಗ್ಯಕರ ಆಹಾರ ಅಗತ್ಯ :
ಮೊದಲನೆಯದಾಗಿ, ನಿಮ್ಮ ಆಹಾರಕ್ರಮವನ್ನು ಬದಲಾಯಿಸಿ ಮತ್ತು ಆರೋಗ್ಯಕರ ಹೃದಯಕ್ಕಾಗಿ ಆರೋಗ್ಯಕರ ಆಹಾರವನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ವಯಸ್ಸು ಯಾವುದೇ ಇರಲಿ, ಆರೋಗ್ಯಕರ ಆಹಾರವು ಆರೋಗ್ಯಕರ ಹೃದಯಕ್ಕೆ ಬಹಳ ಮುಖ್ಯ. ತರಕಾರಿಗಳು, ಹಣ್ಣುಗಳ ಹೆಚ್ಚಿನ ಸೇವನೆ ಅಗತ್ಯ. ಇದೇ ವೇಳೆ ಜಂಕ್-ಫುಡ್ ಮತ್ತು ಮಾಂಸದ ಸೇವನೆ ಸೀಮಿತವಾಗಿದ್ದರೆ ಒಳ್ಳೆಯದು. ಇದಲ್ಲದೆ, ಸಾಕಷ್ಟು ನೀರನ್ನು ಸೇವಿಸುವುದು ಸಹ ಬಹಳ ಮುಖ್ಯ.
ಇದನ್ನೂ ಓದಿ : Sugar Control ಗಾಗಿ ಈ ಎಲೆಯನ್ನು ಬಳಸಿ, ಇಂದೇ ನಿಮ್ಮ ಆಹಾರದಲ್ಲಿ ಇದನ್ನು ಶಾಮೀಲುಗೊಳಿಸಿ
ಒಂದೇ ರೀತಿಯ ದಿನಚರಿ ಇರಲಿ :
ಒಂದೇ ರೀತಿಯ ದಿನಚರಿಯನ್ನು ಅನುಸರಿಸಲು ಪ್ರಯತ್ನಿಸಿ. ಪದೇ ಪದೇ ದಿನಚರಿಯನ್ನು ಬದಲಾಯಿಸುವುದು ಕೂಡಾ ಹೃದಯದ ಮೇಲೆ ಪರಿಣಾಮ ಬೀರುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.