ನವದೆಹಲಿ: ಕಿಡ್ನಿ ಸ್ಟೋನ್(Kidney Stones) ಸಮಸ್ಯೆ ಇಂದು ಸಾಮಾನ್ಯವಾಗಿದೆ. ಕಳಪೆ ಜೀವನಶೈಲಿಯಿಂದಾಗಿ ದೇಶದಲ್ಲಿ ಇದರ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಅನೇಕ ಬಾರಿ ಈ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಸಹಿಸಲಾರದಷ್ಟು ನೋವು ಉಂಟಾಗುತ್ತದೆ. ಈ ರೀತಿಯ ಸಮಸ್ಯೆ ಉಂಟಾಗಬಾರದು ಎಂದರೆ ಕೆಲವು ವಿಷಯಗಳ ನಮಗೆ ಅರಿವು ಇರಬೇಕು.


COMMERCIAL BREAK
SCROLL TO CONTINUE READING

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಅನೇಕರು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲ ಆಹಾರ ಪದಾರ್ಥ(Kidney Stone Diet)ಗಳನ್ನು ಸೇವಿಸಿ ಆರೋಗ್ಯವನ್ನು ಮತ್ತಷ್ಟು ಕೆಡಿಸಿಕೊಳ್ಳುತ್ತಾರೆ. ಮೂತ್ರಪಿಂಡದಲ್ಲಿ ಕಲ್ಲು ಇರುವುದು ಗೊತ್ತಾದ ತಕ್ಷಣ ಅದರಿಂದ ಪಾರಾಗಲು ಆರೋಗ್ಯಕರ ಆಹಾರ ಸೇವಿಸಬೇಕು. ಇಲ್ಲದಿದ್ದರೆ ಅದು ನಿಮಗೆ ದೊಡ್ಡ ತೊಂದರೆಯನ್ನುಂಟು ಮಾಡುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ.  


ಇದನ್ನೂ ಓದಿ: Summer Food: ಬೇಸಿಗೆ ಕಾಲದಲ್ಲಿ ನಿಮ್ಮ ಡಯಟ್ ನಲ್ಲಿರಲಿ ಈ 5 ಆಹಾರಗಳು, ಯಾವತ್ತು ಫಿಟ್ನೆಸ್ ನಿಮ್ಮದಾಗಿರುತ್ತದೆ


ಪಾಲಕ್ ಸೇವಿಸಬೇಡಿ


ಕಿಡ್ನಿ ಸ್ಟೋನ್ ರೋಗಿಗಳು ಪಾಲಕ್ ತರಕಾರಿಯಿಂದ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಪಾಲಕ್(Kidney Stone Food) ದಲ್ಲಿ ಆಕ್ಸಲೇಟ್ ಇದ್ದು, ಇದು ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಸಂಗ್ರಹಿಸುತ್ತದೆ. ಇದರಿಂದ ನಿಮ್ಮ ಮೂತ್ರವು ಸರಾಗವಾಗಿ ಹೋಗಲು ಸಾಧ್ಯವಾಗುವುದಿಲ್ಲ. ಇದು ಮುಂದೆ ನಿಮಗೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ಮೂತ್ರಪಿಂಡದಲ್ಲಿ ಕಲ್ಲು ಹೊಂದಿರುವ ರೋಗಿಗಳು ಪಾಲಕ್ ಸೇವಿಸಬಾರದು. ಒದು ವೇಳೆ ಸೇವಿಸಿದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಚಾಕೊಲೇಟ್ ತಿನ್ನುವುದನ್ನು ತಪ್ಪಿಸಬೇಕು


ಕಿಡ್ನಿ ಸ್ಟೋನ್ ರೋಗಿಗಳಿಗೆ ಚಾಕೊಲೇಟ್ ಸಹ ಮಾರಕವಾಗಬಹುದು. ಇದನ್ನು ತಿಂದರೆ ಕಿಡ್ನಿ(Kidney) ಗಾತ್ರ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಏಕೆಂದರೆ ಇದರಲ್ಲಿ ಆಕ್ಸಲೇಟ್ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆಯಿಂದ ಬಳಲುತ್ತಿದ್ದರೆ ಚಾಕೊಲೇಟ್ ತಿನ್ನುವುದನ್ನು ತಪ್ಪಿಸುವುದು ಉತ್ತಮ.


ಇದನ್ನೂ ಓದಿ: Skin Care Tips: ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಬೆಳ್ಳುಳ್ಳಿ ಮೊಗ್ಗು


ಟೊಮೇಟೊದಿಂದ ದೂರವಿರಿ


ಟೊಮೇಟೊ ಕೂಡ ಕಿಡ್ನಿ ಸ್ಟೋನ್(Kidney Stone) ರೋಗಿಗಳಿಗೆ ಒಳ್ಳೆಯದಲ್ಲ. ವರದಿಗಳ ಪ್ರಕಾರ, ಟೊಮೇಟೊದಲ್ಲಿ ಕೂಡ ಆಕ್ಸಲೇಟ್ ಪ್ರಮಾಣವೂ ಅಧಿಕವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಿಡ್ನಿ ಸ್ಟೋನ್ ರೋಗಿಗಳು ಟೊಮೇಟೊಗಳನ್ನು ಸೇವಿಸಬಾರದು. ಒಂದು ವೇಳೆ ಸೇವಿಸಿದರೂ ಅದರ ಕಾಳುಗಳನ್ನು ತೆಗೆದು ತಿನ್ನಬೇಕು.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.