Summer Food: ಬೇಸಿಗೆ ಕಾಲದಲ್ಲಿ ನಿಮ್ಮ ಡಯಟ್ ನಲ್ಲಿರಲಿ ಈ 5 ಆಹಾರಗಳು, ಯಾವತ್ತು ಫಿಟ್ನೆಸ್ ನಿಮ್ಮದಾಗಿರುತ್ತದೆ

What To Eat In Summer - ಹಗಲಿನಲ್ಲಿ ಈಗ ಬಿಸಿಲಿನ ತಾಪ ಕಾಡಲಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಈಗ ನೀವು ನಿಮ್ಮ ಆಹಾರ ಶೈಲಿಯನ್ನು ಋತುವಿಗೆ ಅನುಗುಣವಾಗಿ ಬದಲಾಯಿಸಬೇಕಾಗಿದೆ. ಬೇಸಿಗೆಯಲ್ಲಿ ನೀವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Feb 25, 2022, 08:30 PM IST
  • ಮೊಸರು ಬೇಸಿಗೆಯಲ್ಲಿ ಜೀರ್ಣಕ್ರಿಯೆಯನ್ನುವಾಗಿಡುತ್ತದೆ.
  • ನಿಂಬೆ-ಪುದೀನ ನೀರಿನಿಂದ ಯಕೃತ್ತಿನ ಶುದ್ಧೀಕರಣ
  • ಕಲ್ಲಂಗಡಿ ಹೊಟ್ಟೆಯನ್ನು ತಂಪಾಗಿಸುತ್ತದೆ.
Summer Food: ಬೇಸಿಗೆ ಕಾಲದಲ್ಲಿ ನಿಮ್ಮ ಡಯಟ್ ನಲ್ಲಿರಲಿ ಈ 5 ಆಹಾರಗಳು, ಯಾವತ್ತು ಫಿಟ್ನೆಸ್ ನಿಮ್ಮದಾಗಿರುತ್ತದೆ title=
What To Eat In Summer (File Photo)

Summer Diet: ದಿನದಿಂದ ದಿನಕ್ಕೆ ಚಳಿ ಕಡಿಮೆಯಾಗುತ್ತಿದ್ದು, ಹಗಲಿನಲ್ಲಿ ಈಗ ಬಿಸಿಲಿನ ತಾಪ ಕಾಡಲಾರಂಭಿಸಿದೆ. ಕೆಲವೇ ದಿನಗಳಲ್ಲಿ, ಈ ಶಾಖವು ಜನರನ್ನು ಬೆವರುವಂತೆ ಮಾಡಲಿದೆ ಮತ್ತು ಅನೇಕ ರೋಗಗಳನ್ನು ಉಂಟುಮಾಡಲಿದೆ. ಇಂತಹ ಪರಿಸ್ಥಿತಿಯಲ್ಲಿ, ಈಗ ನಿಮ್ಮ ಆಹಾರ ಶೈಲಿ ಬದಲಾಯಿಸುವುದು ಅನಿವಾರ್ಯತೆ ಇದೆ.

ಬೇಸಿಗೆಯಲ್ಲಿ, ನಿರ್ಜಲೀಕರಣ (Dehyderation), ಚರ್ಮದ ಸೂಕ್ಷ್ಮತೆ (Skin Alergy) ಮತ್ತು ಜೀವಸತ್ವಗಳಂತಹ ಖನಿಜಗಳ ಕೊರತೆಯಂತಹ ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತವೆ. ಅವುಗಳನ್ನು ಎದುರಿಸಲು, ನಿಮ್ಮ ಆಹಾರದ ತಟ್ಟೆಯಲ್ಲಿ (Summer Diet) ರಸಭರಿತವಾದ ಹಣ್ಣುಗಳು, ತರಕಾರಿಗಳು ಮತ್ತು ಮೊಸರಿನಂತಹ ಆರೋಗ್ಯಕರ (Health Tips) ಆಹಾರಗಳನ್ನು ನೀವು ಸೇರಿಸಿಕೊಳ್ಳಬೇಕು. ಬೇಸಿಗೆಯಲ್ಲಿ ನೀವು ಯಾವ ಪದಾರ್ಥಗಳನ್ನು ತಿನ್ನುವ ಮೂಲಕ ನಿಮ್ಮ ಫಿಟ್ನೆಸ್ ಕಾಯ್ದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊಸರು (Yogurt) ಬೇಸಿಗೆಯಲ್ಲಿ ಜೀರ್ಣಕ್ರಿಯೆಯನ್ನು ಉತ್ತಮವಾಗಿಡುತ್ತದೆ
ಪ್ರೋಟೀನಾಂಶಗಳಿಂದ ಸಮೃದ್ಧವಾಗಿರುವ ಮೊಸರು (Yogurt) ಬೇಸಿಗೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿರುವ ಪ್ರೋಟೀನ್ ನಿಮ್ಮ ಹಸಿವನ್ನು ಶಾಂತವಾಗಿರಿಸುತ್ತದೆ. ಹೀಗಾಗಿ ಇದು ನಿಮ್ಮನ್ನು ಉಪ್ಪು ಮತ್ತು ಹೆಚ್ಚಿನ ಕ್ಯಾಲೋರಿ ತಿಂಡಿಗಳನ್ನು ತಿನ್ನುವುದನ್ನು ತಡೆಯುತ್ತದೆ. ಇದರಿಂದ ನಿಮಗೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ  ಬ್ಯಾಕ್ಟೀರಿಯಾ ಪ್ರೋಬಯಾಟಿಕ್‌ಗಳು ಸಹ ಲಭಿಸುತ್ತವೆ.

ನಿಂಬೆ(Lime) -ಪುದೀನ (Mint) ನೀರಿನಿಂದ ಯಕೃತ್ತಿನ ಶುದ್ಧೀಕರಣ
ಬೇಸಿಗೆಯ ಆಹಾರದಲ್ಲಿ, ಗಂಟಲು ಹೆಚ್ಚಾಗಿ ಒಣಗುತ್ತದೆ ಮತ್ತು ಬಾಯಾರಿಕೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಂಬೆ ರಸದೊಂದಿಗೆ ಫಿಲ್ಟರ್ ಮಾಡಿದ ಒಂದು ಗ್ಲಾಸ್ ಪುದೀನ ನೀರು ಅದ್ಭುತಗಳನ್ನು ನೀಡುತ್ತದೆ. ಇದು ಯಕೃತ್ತನ್ನು ಶುದ್ಧೀಕರಿಸುತ್ತದೆ ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು  ಬಲಪಡಿಸುತ್ತದೆ.

ಕಲ್ಲಂಗಡಿ (Watermelon) ಹೊಟ್ಟೆಯನ್ನು ತಂಪಾಗಿಸುತ್ತದೆ
ಕಲ್ಲಂಗಡಿ ಅತ್ಯುತ್ತಮ ಬೇಸಿಗೆ ಹಣ್ಣು. ಇದು ನಿಮ್ಮ ಹೊಟ್ಟೆಯನ್ನು ತಂಪಾಗಿರಿಸುತ್ತದೆ ಮತ್ತು ನೀರಿನ ಕೊರತೆಯನ್ನು ನೀಗಿಸುತ್ತದೆ. ನೀರು ಹೇರಳವಾಗಿರುವ ಕಾರಣ ಇದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಕಲ್ಲಂಗಡಿಯಲ್ಲಿ ಲೈಕೋಪೀನ್ ಕೂಡ ಇದೆ, ಇದು ಚರ್ಮದ ಕೋಶಗಳನ್ನು ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ.

ಇದನ್ನೂ ಓದಿ-Honey Benefits : ಕೆಮ್ಮು - ನೆಗಡಿಗೆ ಮನೆ ಮದ್ದು ಜೇನು ತುಪ್ಪ : ಅದನ್ನು ಹೀಗೆ ಬಳಸಿ

ಕಿತ್ತಳೆಯಲ್ಲಿ (Orange) ಪೊಟ್ಯಾಸಿಯಮ್ ಸಮೃದ್ಧವಾಗಿದೆ
ಕಿತ್ತಳೆಯಲ್ಲಿ ಪೊಟ್ಯಾಸಿಯಮ್ ಹೇರಳವಾಗಿ ಕಂಡುಬರುತ್ತದೆ. ಬೇಸಿಗೆಯ ಆಹಾರದಲ್ಲಿ ಈ ಪೋಷಕಾಂಶವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಸುಮಾರು ಶೇ. 80 ರಷ್ಟು ನೀರನ್ನು ಹೊಂದಿರುತ್ತದೆ ಮತ್ತು ಇದು ಸ್ನಾಯು ಸೆಳೆತವನ್ನು ನಿವಾರಿಸುತ್ತದೆ.

ಇದನ್ನೂ ಓದಿ-High BP ಇದ್ದರೆ ಕೇವಲ ಉಪ್ಪು ಕಡಿಮೆ ತಿಂದರೆ ಸಾಲದು, ಈ ಐದು ಆಹಾರ ವಸ್ತುಗಳಿಂದ ದೂರವಿರಿ

ದೀರ್ಘಕಾಲದ ಕಾಯಿಲೆಗಳಲ್ಲಿ ಟೊಮೆಟೊ (Tomato) ಪ್ರಯೋಜನಕಾರಿಯಾಗಿದೆ
ಟೊಮ್ಯಾಟೋಸ್ ಆಂಟಿ-ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಟೊಮ್ಯಾಟೋ ಲೈಕೋಪೀನ್‌ನಂತಹ ಪ್ರಯೋಜನಕಾರಿ ಫೈಟೊಕೆಮಿಕಲ್‌ಗಳನ್ನು ಒಳಗೊಂಡಿರುತ್ತವೆ, ಇದು ದೀರ್ಘಕಾಲದ ಕಾಯಿಲೆಗಳನ್ನು, ವಿಶೇಷವಾಗಿ ಕ್ಯಾನ್ಸರ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ನಾವು ಅದನ್ನು ಕಚ್ಚಾ ಕೂಡ ಸೇವಿಸಬಹುದು.

ಇದನ್ನೂ ಓದಿ-Milk Drinking : ನಿಂತು ಅಥವಾ ಕುಳಿತು ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News