Herbal Teas Benefits: ಕೆಲವರು ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಿದರೆ, ಇನ್ನೂ ಕೆಲವರು ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಅದರಲ್ಲೂ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಬೆಡ್ ಟೀ (Bed Tea) ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಆದರೆ, ನೀವು ಸಾಧಾರಣವಾಗಿ ಹಾಲಿನಿಂದ ತಯಾರಿಸಿದ ಚಹಾ ಸೇವಿಸುವುದಕ್ಕಿಂತ ಕೆಲವು ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ಚಹಾ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ (Tea on an empty stomach) ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಉಂಟಾಗಬಹುದು. ಆದರೆ, ಹಾಲಿನ ಚಹಾ (Milk Tea) ಬದಲಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಎಂದರೆ ಹರ್ಬಲ್ ಟೀ ಕುಡಿಯುವುದು ನಿಮಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅಂತಹ ಚಹಾಗಳು ಯಾವುವೆಂದರೆ... 


ದಾಲ್ಚಿನ್ನಿ ಚಹಾ (Cinnamon Tea): 
ಭಾರತೀಯ ಅಡುಗೆ ಮನೆಯಲ್ಲಿ ಪ್ರಮುಖ ಮಸಾಲೆಯಾಗಿರುವ ದಾಲ್ಚಿನ್ನಿಯಿಂದ ಚಹಾ ತಯಾರಿಸಿ ಕುಡಿಯುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನಕಾರಿ ಆಗಿದೆ. 


ಇದನ್ನೂ ಓದಿ- ತ್ವಚೆಯ ಕಾಂತಿ ಕಾಪಾಡಲು ಐಶ್ವರ್ಯ ರೈ ಬಳಸುವುದು ಮನೆಯಲ್ಲಿಯೇ ತಯಾರಿಸುವ ಈ ಫೇಸ್ ಪ್ಯಾಕ್ ಅಂತೆ!ನೀವೂ ಒಮ್ಮೆ ಟ್ರೈ ಮಾಡಿ !


ಫೆನ್ನೆಲ್ ಚಹಾ (Fennel Tea): 
ಫೆನ್ನೆಲ್ ಅಥವಾ ಸೋಂಪಿನಿಂದ ತಯಾರಿಸಿದ ಚಹಾ ಕೂಡ ಆರೋಗ್ಯಕ್ಕೆ ಒಳ್ಳೆಯದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಫೆನ್ನೆಲ್ ಚಹಾ ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ,  ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ವರದಾನವಿದ್ದಂತೆ ಎಂದು ಹೇಳಲಾಗುತ್ತದೆ. 


ಅರಿಶಿನದ ಚಹಾ (Turmeric Tea): 
ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನದಿಂದ ಟೀ ತಯಾರಿಸಿ ಕುಡಿಯುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. 


ಹೈಬಿಸ್ಕಸ್ ಚಹಾ (Hibiscus Tea): 
ಹೈಬಿಸ್ಕಸ್ ಎಂದರೆ ದಾಸವಾಳದಿಂದ ಮಾಡಲ್ಪಟ್ಟ ಚಹಾ ಪುಡಿಯಿಂದ ತಯಾರಿಸಿದ ಚಹಾ ಕುಡಿಯುವುದರಿಂದ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿ ಆಗಿದೆ. ಅಲ್ಲದೆ, ಇದು ಕೂದಲಿಗೂ ಕೂಡ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 


ಇದನ್ನೂ ಓದಿ- Weight Loss In Summer: ಬೇಸಿಗೆಯಲ್ಲಿ ಈ 3 ಆಹಾರಗಳಿಂದ ಬೊಜ್ಜಿನ ಸಮಸ್ಯೆಗೆ ಹೇಳಿ ಬೈ! ಬೈ!


ಶುಂಠಿ ಚಹಾ (Ginger Tea): 
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.