ನಿಮ್ಮ ಅದೃಷ್ಟ ಸರಿಯಾಗಿಲ್ಲ ಎಂದರೆ ಆಗಬೇಕಾದ ಕೆಲಸಗಳೂ ಹಾಳಾಗುತ್ತವೆ. ಎಲ್ಲದಕ್ಕೂ ಅದೃಷ್ಟ, ಹಣೆಬರಹ ಸರಿಯಾಗಿರಬೇಕು ಎಂದು ದೊಡ್ಡವರು ಹೇಳುತ್ತಾರೆ. ನಸೀಬು ಸರಿ ಇಲ್ಲ ಎಂದರೆ ಶ್ರೀಮಂತನೂ ತಿರುಕನಾಗುತ್ತಾನೆ ಎನ್ನುವ ಮಾತನ್ನು ನೀವೀಗಾಗಲೇ ಕೇಳಿರಬಹುದು. ಅಂದಹಾಗೆ ನಿಮ್ಮಅದೃಷ್ಟ ಸರಿ ಇಲ್ಲ ಎಂದು ನಿಮ್ಮ ಬಗ್ಗೆ ಭಾವಿಸಿದ್ದರೆ ಈ ಜ್ಯೋತಿಷ್ಯ ಕ್ರಮಗಳನ್ನು ಅನುಸರಿಸಿ. ಇದರಿಂದ ನಿಮ್ಮ ಅದೃಷ್ಟವು ಹಾದಿಗೆ ಬರುತ್ತದೆ. ಆ ಕ್ರಮಗಳನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಕ್ರಮಗಳನ್ನು ಅಳವಡಿಸಿಕೊಂಡರೆ, ನಿಮಗೆ ಅದೃಷ್ಟ ಒಲಿಯುತ್ತದೆ: ನೀವು ಜ್ಯೋತಿಷ್ಯ(Astrology)ವನ್ನು ನಂಬುವುದಾದರೆ ನಿಮ್ಮ ಯಶಸ್ಸಿನ ಬಗ್ಗೆ ನೀವು ಎಂದಿಗೂ ಹೆಮ್ಮೆ ಪಡಬೇಡಿ. ಬದಲಾಗಿ, ಪ್ರತಿಯೊಂದು ಸಾಧನೆಯನ್ನು ದೇವರ ಅನುಗ್ರಹ ಎಂದು ಭಾವಿಸಿ. ಇದಲ್ಲದೆ ಬಡವರಿಗೆ ಮತ್ತು ದುರ್ಬಲರಿಗೆ ಸಹಾಯ ಮಾಡಬೇಕು. ಹಸಿವಿನಿಂದ ಬಳಲುತ್ತಿರುವ ನಿರ್ಗತಿಕ ಜನರಿಗೆ ಆಹಾರವನ್ನು ನೀಡಬೇಕು. ನಿಮ್ಮ ಕೈಲಾದಷ್ಟು ದಾನ - ಧರ್ಮವನ್ನು ಮಾಡಿ ಇದರಿಂದ ಮತ್ತಷ್ಟು ಅದೃಷ್ಟ ನಿಮ್ಮೊಂದಿಗೆ ಸಾಗುತ್ತದೆ.


Shani Amavasye: ಈ ವಾರದಲ್ಲಿದೆ ಶನಿ ಅಮವಾಸ್ಯೆ.! ಶನಿದೇವರನ್ನು ಪ್ರಸನ್ನಗೊಳಿಸಿ


ಪ್ರತಿದಿನ ಹೀಗೆ ಮಾಡಿ: ಜ್ಯೋತಿಷ್ಯದ ಪ್ರಕಾರ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಎರಡೂ ಅಂಗೈಗಳನ್ನು ಕೆಲವು ನಿಮಿಷಗಳ ಕಾಲ ನೋಡಿ. ಅದಕ್ಕೂ ಮುನ್ನ ಮೂರು ಬಾರಿ ಪರಸ್ಪರ ಅಂಗೈಗಳನ್ನು ತಿಕ್ಕಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ, ಸರಸ್ವತಿ(Culture) ಹಾಗೂ ವಿಷ್ಣುವಿನ ಕೃಪೆಗೆ ನೀವು ಪಾತ್ರರಾಗುತ್ತೀರಿ. ಅಂಗೈನಲ್ಲಿ ಈ ಮೂರೂ ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗಿದೆ. ಬೆಳಗ್ಗೆ ಎದ್ದಕೂಡಲೇ ಈ ಮೂವರನ್ನು ನೆನೆಯುವುದರಿಂದ ನಿಮ್ಮ ದಿನದ ಆರಂಭ ಚೆನ್ನಾಗಿರುತ್ತದೆ.


ಜ್ಯೋತಿಷ್ಯ ಪ್ರಕಾರ, ದೇವರ ಮನೆಯಲ್ಲಿರುವ ಮೂರ್ತಿ, ಫೋಟೊ(Photo)ಗಳನ್ನು ಪ್ರತಿದಿನ ತಾಜಾ ಹೂವುಗಳಿಂದ ಅಲಂಕರಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ದೇವರು ಮತ್ತು ದೇವತೆಗಳು ಸಂತಸಗೊಂಡು ಅದೃಷ್ಟ ಒಲಿಯುವಂತೆ ಮಾಡುತ್ತಾರೆ ಎಂದು ನಂಬಲಾಗಿದೆ. ಇರುವೆಗಳಿಗೆ ಪ್ರತಿದಿನ ಸಕ್ಕರೆಯನ್ನು ನೀಡಿ. ಇದರಿಂದ ನಿಮ್ಮ ಪಾಪ ಕಾರ್ಯಗಳು ನಾಶವಾಗಿ ದೇವರ ಅನುಗ್ರಹದಿಂದ ನೀವು ಪಾಪಗಳಿಂದ ಪರಿಹಾರವನ್ನು ಪಡೆದುಕೊಳ್ಳುತ್ತೀರಿ.


Mahashivaratri 2021 : ಶಿವರಾತ್ರಿ ದಿನ ಈ ನಾಲ್ಕು ಹೊತ್ತು ಮಹಾದೇವನ ಪೂಜಿಸಿ.! ಪೂಜಾಫಲ ನೋಡಿ


ಮೀನಿಗೆ ಆಹಾರವನ್ನು ನೀಡಿ: ಜ್ಯೋತಿಷ್ಯದ ಪ್ರಕಾರ ನದಿ, ಕೊಳ, ಕಲ್ಯಾಣಿಗಳಿಗೆ ಹೋಗಿ ಮೀನು(Fish)ಗಳಿಗೆ ಹಿಟ್ಟಿನ ಉಂಡೆಗಳನ್ನು ನಿಯಮಿತವಾಗಿ ನೀಡಿದರೆ ನಿಮ್ಮ ಗುರಿಗಳನ್ನು ತಲುಪುವ ಮಾರ್ಗ ಸುಲಭವಾಗುತ್ತದೆ. ನಿಮ್ಮ ಯವ್ವನವು ಮರುಕಳಿಸುತ್ತದೆ. ಯಾವ ವ್ಯಕ್ತಿಯು ಈ ರೀತಿ ಮಾಡುತ್ತಾನೋ ಅಂತಹ ವ್ಯಕ್ತಿಗೆ ಕೆಲವೇ ದಿನಗಳಲ್ಲಿ ಅದೃಷ್ಟವು ಪ್ರಾಪ್ತಿಯಾಗುತ್ತದೆ.


ಅದೃಷ್ಟವು ನಿಮ್ಮ ಕೈಹಿಡಿಯುತ್ತಿಲ್ಲವೆಂದು ನೀವು ಭಾವಿಸಿದರೆ ಆಗ ನೀವು ಈ ಮೇಲಿನ ಕ್ರಮಗಳನ್ನು ಅಥವಾ ಪರಿಹಾರಗಳನ್ನು ತೆಗೆದುಕೊಳ್ಳಬಹುದು. ಇದು ನಿಮ್ಮಲ್ಲಿ ಅದೃಷ್ಟವನ್ನು ಹೆಚ್ಚಿಸುತ್ತದೆ. ಮತ್ತು ನಿಮ್ಮ ಬಾಳು ಬೆಳಗಲು ಆರಂಭವಾಗುತ್ತದೆ.


Daily Horoscope: ದಿನಭವಿಷ್ಯ 10-03-2021 Today astrology


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.