Shani Amavasye: ಈ ವಾರದಲ್ಲಿದೆ ಶನಿ ಅಮವಾಸ್ಯೆ.! ಶನಿದೇವರನ್ನು ಪ್ರಸನ್ನಗೊಳಿಸಿ

ಶನಿ ಅಮವಾಸ್ಯೆ ದಿನ ಅಶ್ವತ್ಥ ವೃಕ್ಷಕ್ಕೆ  ಪೂಜೆ ಸಲ್ಲಿಸುವುದರಿಂದ ಉತ್ತಮ ಫಲ ಸಿಗುತ್ತದೆ. ಅಶ್ವತ್ಥ ಮರದಲ್ಲಿ ಬ್ರಹ್ಮ, ವಿಷ್ಣು  ಮತ್ತು ಮಹೇಶ್ವರ ಈ ತ್ರಿಮೂರ್ತಿಗಳು ನೆಲೆಸಿರುತ್ತಾರೆ ಎಂದು ನಂಬಲಾಗುತ್ತದೆ. ಆ ದಿನ ಅಶ್ವತ್ಥ ವೃಕ್ಷಕ್ಕೆ ಪೂಜೆ ಮಾಡಿ ದೀಪ ಬೆಳಗುವುದರಿಂದ ಶನಿದೋಷದಿಂದ ಮುಕ್ತರಾಗಬಹುದಂತೆ.

Written by - Ranjitha R K | Last Updated : Mar 10, 2021, 10:02 AM IST
  • ಶನಿವಾರದ ದಿನ ಅಮವಾಸ್ಯೆ ತಿಥಿ ಬಂದರೆ ಆ ದಿನವನ್ನು ಶನಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ.
  • ಅಂದು ವಿಶೇಷ ಪೂಜೆ ಅರ್ಚನೆ ಮಾಡಿದರೆ ಶನಿ ದೇವರು ಸಂತೃಪ್ತರಾಗುತ್ತಾರೆ
  • ಶನಿದೇವರನ್ನು ಪ್ರಸನ್ನಗೊಳಿಸಲು ಶನಿ ಅಮವಾಸ್ಯೆ ಅತ್ಯಂತ ಪ್ರಶಸ್ತ ದಿನ
Shani Amavasye: ಈ ವಾರದಲ್ಲಿದೆ ಶನಿ ಅಮವಾಸ್ಯೆ.! ಶನಿದೇವರನ್ನು ಪ್ರಸನ್ನಗೊಳಿಸಿ title=
ಶನಿದೇವರನ್ನು ಪ್ರಸನ್ನಗೊಳಿಸಲು ಶನಿ ಅಮವಾಸ್ಯೆ ಅತ್ಯಂತ ಪ್ರಶಸ್ತ ದಿನ (file photo)

ಬೆಂಗಳೂರು : ಒಂದು ವೇಳೆ ಶನಿವಾರದ (Saturday) ದಿನ ಅಮವಾಸ್ಯೆ ತಿಥಿ ಬಂದರೆ ಆ ದಿನವನ್ನು ಶನಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಈ ವಾರ ಮಾರ್ಚ್ 13 ರಂದು ಶನಿವಾರದ ದಿನವೇ ಅಮವಾಸ್ಯೆಯೂ ಆಗಿದೆ. ಹಾಗಾಗಿ, ಅದು ಶನಿ ಅಮವಾಸ್ಯೆ. ಶನಿದೇವರನ್ನು (Lord Shani) ಪ್ರಸನ್ನಗೊಳಿಸಲು ಶನಿ ಅಮವಾಸ್ಯೆ ಅತ್ಯಂತ ಪ್ರಶಸ್ತ ದಿನ ಎಂದು ಹೇಳಲಾಗುತ್ತದೆ.  ಅಂದು ವಿಶೇಷ ಪೂಜೆ ಅರ್ಚನೆ ಮಾಡಿದರೆ ಶನಿ ದೇವರು (Shani Dev) ಸಂತೃಪ್ತರಾಗುತ್ತಾರೆ ಮತ್ತು ಶನಿದೇವರ ವಕ್ರ ದೃಷ್ಟಿಯಿಂದ ಪಾರಾಗಬಹುದು ಎಂಬುದು ಆಸ್ತಿಕರ ನಂಬಿಕೆ. 

ಮಾಚ್ 13 ರಂದು ಶನಿ ಅಮವಾಸ್ಯೆ :
ಮಾರ್ಚ್ 13 ಕ್ಕೆ ಫಲ್ಗುಣ ಮಾಸದ ಅಮವಾಸ್ಯೆ ಇದೆ. ಅದು ಶನಿವಾರವೇ (Saturday) ಬಂದಿದೆ. ಹಾಗಾಗಿ ಮಾರ್ಚ್ 13 ರಂದು ಶನಿ ಅಮವಾಸ್ಯೆ (Shani Amavasye) ಆಗಿರುತ್ತದೆ. ಇದನ್ನು ಶನಿ ಅಮವಾಸ್ಯೆ ಅಥವಾ ಫಲ್ಗುಣ ಅಮವಾಸ್ಯೆ ಈ ಎರಡೂ ಹೆಸರುಗಳಿಂದ ಕರೆಯಬಹುದು. 
ಶನಿ ಅಮವಾಸ್ಯೆ ದಿನ : 13, ಮಾರ್ಚ್ 2021, ಶನಿವಾರ
ಶನಿ ಅಮವಾಸ್ಯೆ ಆರಂಭ : 12, ಮಾರ್ಚ್ 2021, ಮಧ್ಯಾಹ್ನ 03.02
ಶನಿ ಅಮವಾಸ್ಯೆ ಅಂತ್ಯ : 13, ಮಾರ್ಚ್ ಮಧ್ಯಾಹ್ನ 03.50 

ಇದನ್ನೂ ಓದಿ: Mahashivaratri 2021 : ಶಿವರಾತ್ರಿ ದಿನ ಈ ನಾಲ್ಕು ಹೊತ್ತು ಮಹಾದೇವನ ಪೂಜಿಸಿ.! ಪೂಜಾಫಲ ನೋಡಿ

ಶನಿ ಅಮವಾಸ್ಯೆ ದಿನ ಶನಿದೇವರನ್ನು (Shani Dev) ಪ್ರಸನ್ನಗೊಳಿಸುವ ವಿಧಿ ವಿಧಾನ ಹೀಗಿದೆ:
 

1. ಶನಿ ಅಮವಾಸ್ಯೆ ದಿನ ಅಶ್ವತ್ಥ ವೃಕ್ಷಕ್ಕೆ (Peepal Tree) ಪೂಜೆ ಸಲ್ಲಿಸುವುದರಿಂದ ಉತ್ತಮ ಫಲ ಸಿಗುತ್ತದೆ. ಅಶ್ವತ್ಥ ಮರದಲ್ಲಿ ಬ್ರಹ್ಮ, ವಿಷ್ಣು (Lord Vishnu) ಮತ್ತು ಮಹೇಶ್ವರ ಈ ತ್ರಿಮೂರ್ತಿಗಳು ನೆಲೆಸಿರುತ್ತಾರೆ ಎಂದು ನಂಬಲಾಗುತ್ತದೆ. ಆ ದಿನ ಅಶ್ವತ್ಥ ವೃಕ್ಷಕ್ಕೆ ಪೂಜೆ ಮಾಡಿ ದೀಪ ಬೆಳಗುವುದರಿಂದ ಶನಿದೋಷದಿಂದ ಮುಕ್ತರಾಗಬಹುದಂತೆ.
2. ಶನಿ ಅಮವಾಸ್ಯೆ ದಿನ ``ಓಂ ಶಃಶನೇಶ್ವರಾಯ ನಮಃ'' ಮಂತ್ರದ ಜಪ ಮಾಡಿ. ಶನಿ ಚಾಲೀಸವನ್ನೂ ಪಠಣ ಮಾಡಬಹುದು. ಜೊತೆಗೆ ಬಡವರಿಗೆ ಅಗತ್ಯವುಳ್ಳವರಿಗೆ ಯಾವುದಾದರೂ ಅಗತ್ಯ ವಸ್ತು, ಊಟ ತಿಂಡಿ (Food) ಇತ್ಯಾದಿಗಳನ್ನು ದಾನ ಮಾಡಿ. ಶನಿ ದೇವರು ಪ್ರಸನ್ನರಾಗುತ್ತಾರೆ.
3. ಶನಿವಾರ ಶನಿದೇವರಷ್ಟೇ ಅಲ್ಲ. ಆಂಜನೇಯನ ಪೂಜೆಗೂ ಪ್ರಶಸ್ತ ದಿನ. ಆ ದಿನ ಸಂಕಟಮೋಚನ ಹನುಮಾನ್ (Hanuman) ಪೂಜೆಯನ್ನು ನಿಷ್ಠೆಯಿಂದ ಮಾಡಿ. ಹನುಮಾನ್ ಪೂಜೆಯಿಂದ ಶನಿದೇವರು ಕೂಡಾ ಪ್ರಸನ್ನರಾಗುತ್ತಾರೆ.

ಇದನ್ನೂ ಓದಿ: Vastu Shastra: ಈ 21 ವಸ್ತುಗಳನ್ನು ಮನೆಯಲ್ಲಿಟ್ಟರೆ ಅದೃಷ್ಟವೋ ಅದೃಷ್ಟ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News