ತೂಕ ಇಳಿಸಲು ನೆನೆಸಿದ  ವಾಲ್‌ನಟ್ ಪ್ರಯೋಜನಗಳು: ಸಾಮಾನ್ಯವಾಗಿ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಸಂಗ್ರಹವಾಗುವ ಕೊಬ್ಬನ್ನು ಕರಗಿಸುವುದು ತುಂಬಾ ಕಷ್ಟ. ಈ ಪರಿಸ್ಥಿತಿಯಲ್ಲಿ ನಿಮ್ಮ ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆ ಮಾಡುವುದು ಬಹಳ ಮುಖ್ಯ. ಇದರೊಂದಿಗೆ, ಒಂದು ಡ್ರೈ ಫ್ರೂಟ್ ನೈಸರ್ಗಿಕವಾಗಿ ತೂಕ ಇಳಿಸಲು ಬಹಳ ಪ್ರಯೋಜನಕಾರಿ ಆಗಿದೆ. ಅದುವೇ ವಾಲ್‌ನಟ್ಸ್.


COMMERCIAL BREAK
SCROLL TO CONTINUE READING

ಡಯಟೀಶಿಯನ್ಸ್ ಪ್ರಕಾರ, ವಾಲ್‌ನಟ್ಸ್ ಅನ್ನು ನೆನೆಸಿಟ್ಟು ತಿಂದರೆ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಸಂಗ್ರಹವಾಗುವ ಬೊಜ್ಜು ಕರಗುವುದರ ಜೊತೆಗೆ ಇನ್ನೂ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಇದಕ್ಕಾಗಿ ವಾಲ್‌ನಟ್ಸ್ ಅನ್ನು ಯಾವಾಗ? ಹೇಗೆ ಸೇವಿಸಬೇಕು ಎಂದು ತಿಳಿಯೋಣ...


ಪೋಷಕಾಂಶಗಳ ಆಗರ ವಾಲ್‌ನಟ್ಸ್: 
ದೈನಂದಿನ ಆಹಾರದಲ್ಲಿ ಒಣ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಅದರಲ್ಲೂ ಪೋಷಕಾಂಶಗಳ ಭರಿತ ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಪೋಷಕಾಂಶಗಳ ಆಗರವಾದ  ವಾಲ್‌ನಟ್ಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಒಂದು ಹಿಡಿ ವಾಲ್‌ನಟ್‌ಗಳನ್ನು ತಿನ್ನುವುದರಿಂದ ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. 


ಇದನ್ನೂ ಓದಿ- ಮಳೆಗಾಲದ ಋತುವಿನಲ್ಲಿ ಕಾಲುಗಳಲ್ಲಿ ಆಗುವ ಈ ಫಂಗಲ್ ಇನ್ಫೆಕ್ಷನ್ ನಿಂದ ಈ ರೀತಿ ಮುಕ್ತಿ ಪಡೆಯಿರಿ


ದೇಹ ಮತ್ತು ಮನಸ್ಸು ಎರಡಕ್ಕೂ ಇದು ಔಷಧಿಗಿಂತ ಕಡಿಮೆಯಿಲ್ಲ ವಾಲ್‌ನಟ್ಸ್: 
ವಾಲ್‌ನಟ್ಸ್ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಫೈಬರ್‌ನ ಸಮೃದ್ಧ ಮೂಲವಾಗಿದೆ. ಇದಲ್ಲದೆ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ತಾಮ್ರ, ರಂಜಕ, ಸೆಲೆನಿಯಮ್, ಸತು, ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ವಾಲ್ನಟ್ನಲ್ಲಿ ಕಂಡುಬರುತ್ತವೆ. ಪ್ರತಿದಿನ 2 ರಿಂದ 3 ನೆನೆಸಿದ ವಾಲ್‌ನಟ್ಸ್ ತಿನ್ನುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳೇನು ತಿಳಿಯಲು ಮುಂದೆ ಓದಿ.


ನೆನೆಸಿದ ವಾಲ್‌ನಟ್ಸ್ ತಿನ್ನುವುದರ ಪ್ರಯೋಜನಗಳು:
ತೂಕ ಇಳಿಸಲು: 

ಹೆಚ್ಚುತ್ತಿರುವ ತೂಕವನ್ನು ಯಾವುದೇ ರೀತಿಯಲ್ಲಿ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದವರು ಪ್ರತಿದಿನ ನೆನೆಸಿದ ವಾಲ್‌ನಟ್ಸ್ ತಿನ್ನುವುದು ಪ್ರಯೋಜನಕಾರಿ ಆಗಿದೆ.  ಏಕೆಂದರೆ ಅದರಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚು ಮತ್ತು ಕ್ಯಾಲೋರಿ ಕಡಿಮೆ ಇರುವುದರಿಂದ ಇದು ತೂಕ ಇಳಿಕೆಯಲ್ಲಿ ಸಹಕಾರಿ ಆಗಿದೆ.


ಮಧುಮೇಹದಲ್ಲಿ ಪರಿಣಾಮಕಾರಿ:
ಪ್ರಸ್ತುತ ಯುಗದಲ್ಲಿ ಗಂಭೀರ ಸಮಸ್ಯೆ ಡಯಾಬಿಟಿಸ್. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವಾಲ್‌ನಟ್ಸ್ ಬಹಳ ಪ್ರಯೋಜನಕಾರಿ. ಪ್ರತಿದಿನ 2-3 ನೆನೆಸಿದ ವಾಲ್‌ನಟ್ಸ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ ಎನ್ನಲಾಗುತ್ತದೆ.


ಇದನ್ನೂ ಓದಿ- ಈ ಐದು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚುವುದೇ ಇಲ್ಲ


ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ: 
ಅಜೀರ್ಣ, ಗ್ಯಾಸ್ ಮತ್ತು ಮಲಬದ್ಧತೆ ಸಮಸ್ಯೆ ಇರುವವರು ಬೆಳಿಗ್ಗೆ ನೆನೆಸಿದ ವಾಲ್‌ನಟ್ಸ್ ತಿನ್ನುವುದರಿಂದ ಪರಿಹಾರ ಪಡೆಯಬಹುದು. ಇದರಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.


ಮೂಳೆಗಳು ಬಲಗೊಳ್ಳುತ್ತವೆ:
ವಾಲ್‌ನಟ್ಸ್ ನಲ್ಲಿ ಆಲ್ಫಾ-ಲಿನೋಲೆನಿಕ್ ಆಮ್ಲ ಕಂಡುಬರುತ್ತದೆ. ಇದರ ಸಹಾಯದಿಂದ ನಮ್ಮ ದೇಹದ ಮೂಳೆಗಳು ಬಲಗೊಳ್ಳುತ್ತವೆ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.