Diabetes ರೋಗಿಗಳಿಗೆ ಈ ಎಲೆಗಳ ಚೂರ್ಣ ಒಂದು ವರದಾನಕ್ಕೆ ಸಮಾನ!
Diabetes Diet: ಕೆಲ ಪದಾರ್ಥಗಳನ್ನು ಸೇವಿಸುವುದರಿಂದ, ನಮ್ಮ ಅಧಿಕ ರಕ್ತದ ಸಕ್ಕರೆಯನ್ನು ನಾವು ನೈಸರ್ಗಿಕ ರೀತಿಯಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಅಂದಹಾಗೆ, ಮಧುಮೇಹವು ಒಂದು ಕಾಯಿಲೆಯಾಗಿದ್ದು, ಅದಕ್ಕೆ ಇದುವರೆಗೆ ಯಾವುದೇ ಖಚಿತ ಚಿಕಿತ್ಸೆ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮಧುನಾಶಿನಿ ಎಲೆಗಳ ಪುಡಿಯನ್ನು ತೆಗೆದುಕೊಳ್ಳುವ ಮೂಲಕ ನೀವು ಅದನ್ನು ನಿಯಂತ್ರಿಸಬಹುದು.
Madhunashini Leaves For Diabetes: ಇಂದಿನ ಕಾಲದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಕಾಯಿಲೆಗಳಲ್ಲಿ ಮಧುಮೇಹವೂ ಒಂದಾಗಿದೆ. ವಯಸ್ಸಿನ ಎಲ್ಲೆ ಮೀರಿದ ಈ ಕಾಯಿಲೆಗೆ ಇದುವರೆಗೆ ಯಾವುದೇ ಖಚಿತ ಚಿಕಿತ್ಸೆ ಇಲ್ಲ. ಆದರೆ ನೀವು ಅದನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ, ಮಧುಮೇಹ ಹೊಂದಿರುವ ರೋಗಿಗಳು ಯಾವಾಗಲೂ ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀವೂ ಕೂಡ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮಟ್ಟವು ನಿಯಂತ್ರಣದಲ್ಲಿರಲು ಬಯಸಿದರೆ, ನೀವು ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬೇಕು. ಮಧುನಾಶಿನಿ ಎಲೆಗಳ ಪುಡಿಯನ್ನು ಸೇವಿಸುವುದರಿಂದ, ನಾವು ನಮ್ಮ ಅಧಿಕ ರಕ್ತದ ಸಕ್ಕರೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು. ಹೀಗಾಗಿ ನೀವು ಇದನ್ನು ನಿಮ್ಮ ದಿನನಿತ್ಯದ ಆಹಾರಶೈಲಿಯಲ್ಲಿ ಶಾಮೀಲುಗೊಳಿಸಬಹುದು. ಬನ್ನಿ, ಮಧುನಾಶಿನಿ ಎಲೆಗಳ ಪುಡಿಯನ್ನು ಹೇಗೆ ಸೇವಿಸಬೇಕು ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ,
ಮಧುನಾಶಿನಿ ಎಲೆಗಳ ಪ್ರಯೋಜನಗಳು
ಮಧುನಾಶಿನಿ ಎಲೆಯನ್ನು ಆಯುರ್ವೇದ ಔಷಧೀಯ ಎಂದು ಕರೆಯಲಾಗುತ್ತದೆ. ಮಧುನಾಶಿನಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದರ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ಪ್ರಾರಂಭಿಸುತ್ತದೆ ಮತ್ತು ಇದೇ ವೇಳೆ ಅದು ಸಿಹಿತಿಂಡಿಗಳನ್ನು ತಿನ್ನುವ ಬಯಕೆಯನ್ನು ಮೊಟಕುಗೊಳಿಸುತ್ತದೆ. ಅಸ್ತಮಾ, ಕಣ್ಣಿನ ಸಮಸ್ಯೆಗಳು, ಮಲಬದ್ಧತೆ, ಅಜೀರ್ಣ, ಹೈಪರ್ಕೊಲೆಸ್ಟರಾಲ್ಮಿಯಾ ಇತ್ಯಾದಿ ಸಮಸ್ಯೆಗಳಿಗೆ ಮಧುನಾಶಿನಿ ಬಳಕೆ ಪ್ರಯೋಜನಕಾರಿಯಾಗಿದೆ. ಇದನ್ನು ದಿನನಿತ್ಯ ಸೇವಿಸಿದರೆ ಮಧುಮೇಹದ ಜೊತೆಗೆ ರಕ್ತದೊತ್ತಡ, ತೂಕ ಇಳಿಕೆ, ಕೂದಲು ಉದರುವಿಕೆ ಮುಂತಾದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಇದನ್ನೂ ಓದಿ-Love Relationship: ವರ್ಷದ ಯಾವ ತಿಂಗಳಿನಲ್ಲಿ ಮಹಿಳಾ-ಪುರುಷರು ಪ್ರೀತಿಯಲ್ಲಿ ಹೆಚ್ಚು ಮೋಸ ಹೋಗುತ್ತಾರೆ ಗೊತ್ತಾ?
ಮಧುನಾಶಿನಿ ಎಲೆಗಳನ್ನು ಹೇಗೆ ಸೇವಿಸಬೇಕು?
ಎಲ್ಲಾ ಔಷಧಗಳನ್ನು ತಿನ್ನುವ ವಿಧಾನ ಹೇಗೆ ವಿಭಿನ್ನವಾಗಿದೆಯೋ ಅದೇ ರೀತಿ ಈ ಎಲೆಗೂ ತನ್ನದೇ ಆದ ಸೇವನೆಯ ವಿಧಾನವಿದೆ. ಊಟವಾದ ತಕ್ಷಣ ಅಥವಾ ಊಟದ ಕೆಲವು ಗಂಟೆಗಳ ನಂತರ ನೀವು ಈ ಎಲೆಗಳ ಒಂದು ಚಮಚ ಪುಡಿಯನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದು. ಇದರಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ-Guru Gochar 2023: ಅಶ್ವಿನಿ ನಕ್ಷತ್ರದಲ್ಲಿ ಗುರು ಪ್ರವೇಶ, ಯಾವ ರಾಶಿಗಳ ಜನರ ಮೇಲೆ ಇದರ ಪ್ರಭಾವ ಹೇಗಿರಲಿದೆ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.