ನವದೆಹಲಿ: Holi Dahan Remedies - ಪಂಚಾಂಗದ ಪ್ರಕಾರ, ಈ ಬಾರಿ ಮಾರ್ಚ್ 17 ರಂದು ಹೋಳಿ ದಹನ ಆಚರಿಸಲಾಗುತ್ತಿದ್ದರೆ, ಅದರ ಮಾರನೆಯ ದಿನ ಮಾರ್ಚ್ 18ರಂದು ಬಣ್ಣದೋಕುಳಿಯ (Holi Festival 2022) ಹಬ್ಬ ಆಚರಿಸಲಾಗುವುದು. ಈ ಬಾರಿಯ ಹೋಳಿ ಹಬ್ಬದ ದಿನದಂದು ಸರ್ವಾರ್ಥಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ಧ್ರುವ ಯೋಗ ಮತ್ತು ವೃದ್ಧಿ ಯೋಗ ನಿರ್ಮಾಣಗೊಳ್ಳುತ್ತಿದೆ. ವೃದ್ಧಿ ಯೋಗದಲ್ಲಿ ಮಾಡಿದ ಕೆಲಸವು ಲಾಭವನ್ನು ನೀಡುತ್ತದೆ. ಈ ಯೋಗವನ್ನು ವ್ಯಾಪಾರಕ್ಕಾಗಿ ವಿಶೇಷವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ಹೋಳಿಯಂದು ಬುಧ-ಗುರುಗಳ ಆದಿತ್ಯಯೋಗವೂ ನಿರ್ಮಾಣವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹೋಲಿಕಾ ದಹನ ಅಂದರೆ ಫಾಲ್ಗುಣ ಮಾಸದ ಹುಣ್ಣಿಮೆಯ  ದಿನದಂದು ಎರಡು ಕೆಲಸಗಳನ್ನು ಮಾಡುವ ಮೂಲಕ  ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಹೋಳಿ ಆಡುವ ಮುನ್ನ ಮೊಸರಿನಿಂದ ಮಾಡಿದ ಈ 2 ಫೇಸ್ ಪ್ಯಾಕ್ ಹಾಕಿಕೊಂಡರೆ ಸಾಕು!

ಲಕ್ಷ್ಮಿ ಪೂಜೆ
ಜೀವನದಲ್ಲಿ ಧನ-ಸಂಪತಿನ ಕೊರತೆ ಇದ್ದರೆ ಅಥವಾ ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯಿದ್ದರೆ, ಆಂಜನೇಯ ಮತ್ತು  ದೇವಿ ಲಕ್ಷ್ಮಿಗೆ ಸಂಬಂಧಿಸಿದ ಕೆಲ ಸುಲಭ ಪರಿಹಾರಗಳನ್ನು ನೀವು ಮಾಡಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಹಲವಾರು ಮಾರ್ಗಗಳಿವೆ, ಆದರೆ ಹೋಳಿ ದನನದ ದಿನದಂದು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಹಣಕ್ಕೆ ಸಂಬಂಧಿಸಿದ  ಸಮಸ್ಯೆಗಳನ್ನು ನಿವಾರಿಸಬಹುದು. ಹೋಳಿ ದಹನದ ದಿನ ಅಂದರೆ ಫಾಲ್ಗುಣ ಮಾಸದ ಹುಣ್ಣಿಮೆಯಂದು ಲಕ್ಷ್ಮಿ ದೇವಿಯ ವಿಶೇಷ ಪೂಜೆಯನ್ನು ಮಾಡಬೇಕು. ಇದಕ್ಕಾಗಿ ಲಕ್ಷ್ಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ. ಸ್ನಾನ ಮಾಡಿದ ನಂತರ, ಲಕ್ಷ್ಮಿ ದೇವಿಯನ್ನು ಹೂವುಗಳು, ಅರಿಶಿನ, ಧೂಪ, ದೀಪ, ಸಿಹಿತಿಂಡಿಗಳು ಇತ್ಯಾದಿಗಳಿಂದ ಪೂಜಿಸಿ. ಪೂಜೆಯ ಸಮಯದಲ್ಲಿ 'ಓಂ ಮಹಾ ಲಕ್ಷ್ಮಾಯೈ ನಮಃ' ಈ ಮಂತ್ರವನ್ನು 108 ಬಾರಿ ಜಪಿಸಿ. ಈ ಪರಿಹಾರದಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರೊಂದಿಗೆ, ಇದು ನಿಮಗೆ ಉದ್ಯೋಗದಲ್ಲಿ ಬಡ್ತಿ ಕೂಡ ನೀಡುತ್ತದೆ.


ಇದನ್ನೂ ಓದಿ-ಹೋಳಿ ದಿನ ರೂಪುಗೊಳ್ಳುತ್ತಿದೆ ಮೂರು ರೀತಿಯ ರಾಜಯೋಗ, ಯಾರ ಮೇಲೆ ಏನು ಪರಿಣಾಮ ?

ಶ್ರೀ ಆಂಜನೇಯನಿಗೆ ಪೂಜೆ ಸಲ್ಲಿಸಿ
ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ಹೋಳಿ ದಹನದ ರಾತ್ರಿ ಆಂಜನೇಯನನ್ನು (Hanuman) ಪೂಜಿಸಿ . ಈ ದಿನದಂದು ಹನುಮನನ್ನು ಪೂಜಿಸಲು, ಮೊದಲು ಸ್ನಾನ ಮಾಡಿ. ಇದರ ನಂತರ, ದೇವರ ವಿಗ್ರಹವನ್ನು ಶುದ್ಧ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಮತ್ತು ಅವನಿಗೆ ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ಅರ್ಪಿಸಿ. ಅದರ ನಂತರ ಆರತಿ ಬೆಳಗಿ. ಆರತಿಯ ನಂತರ, ಹನುಮಂತನಿಗೆ ಬೆಲ್ಲ ಮತ್ತು ಬೇಳೆಯನ್ನು ಅರ್ಪಿಸಿ. ಪೂಜೆಯ ನಂತರ, ಈ ಪ್ರಸಾದವನ್ನು ಎಲ್ಲರಿಗೂ ವಿತರಿಸಿ. ಇದನ್ನು ಹೊರತುಪಡಿಸಿ, ಸಾಧ್ಯವಾದರೆ, ಶಿವನ ದೇವಾಲಯದಲ್ಲಿ ಶಿವಲಿಂಗದ ಬಳಿ ದೀಪವನ್ನು ಉರಿಸಿ. ಹೀಗೆ ಮಾಡುವುದರಿಂದ ಕೌಟುಂಬಿಕ ಸಮಸ್ಯೆಗಳು ದೂರಾಗುತ್ತವೆ.


ಇದನ್ನೂ ಓದಿ-HOLI 2022: ಮೊಟ್ಟಮೊದಲ ಬಾರಿಗೆ ಹೋಳಿ ಹಬ್ಬ ಎಲ್ಲಿ ಆಚರಿಸಲಾಗಿದೆ ಗೊತ್ತಾ?

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.