ಹೋಳಿ ದಿನ ರೂಪುಗೊಳ್ಳುತ್ತಿದೆ ಮೂರು ರೀತಿಯ ರಾಜಯೋಗ, ಯಾರ ಮೇಲೆ ಏನು ಪರಿಣಾಮ ?

ಈ ವರ್ಷ ಹೋಳಿ ಹಬ್ಬದ ವೇಳೆ ಅತ್ಯಂತ ಮಂಗಳಕರವಾದ ಯೋಗ ರೂಪುಗೊಳ್ಳಲಿದೆ.  ಹೋಳಿಕಾ ದಹನದ ದಿನ ಒಂದಲ್ಲ ಮೂರು ರಾಜಯೋಗಗಳು ರೂಪುಗೊಳ್ಳುತ್ತಿವೆ. ಇಂತಹ ಅಪರೂಪದ ಯೋಗ ಹಿಂದೆಂದೂ ಹೋಳಿ ದಿನ ರೂಪುಗೊಂಡಿಲ್ಲ ಎನ್ನಲಾಗಿದೆ.

Written by - Zee Kannada News Desk | Last Updated : Mar 15, 2022, 09:14 AM IST
  • ಹೋಳಿಯಲ್ಲಿ ರೂಪುಗೊಳ್ಳಲಿದೆ ಅಪರೂಪದ ಗ್ರಹಗಳ ಸಂಯೋಜನೆ
  • ಹೋಳಿಯಲ್ಲಿ ರೂಪುಗೊಳ್ಳುತ್ತಿದೆ ಮೂರು ರಾಜಯೋಗ
  • ಇದರಿಂದ ದುಃಖವು ದೂರವಾಗುತ್ತದೆ, ಸಂತೋಷ, ಸಮೃದ್ಧಿ ನೆಲೆಯಾಗುತ್ತದೆ
ಹೋಳಿ ದಿನ ರೂಪುಗೊಳ್ಳುತ್ತಿದೆ ಮೂರು ರೀತಿಯ ರಾಜಯೋಗ, ಯಾರ ಮೇಲೆ ಏನು ಪರಿಣಾಮ ?  title=
ಹೋಳಿಯಲ್ಲಿ ರೂಪುಗೊಳ್ಳಲಿದೆ ಅಪರೂಪದ ಗ್ರಹಗಳ ಸಂಯೋಜನೆ (file photo)

ಬೆಂಗಳೂರು :  ಹೋಳಿ ಹಬ್ಬವು ಬಹಳಷ್ಟು ಸಂತೋಷ ಸಡಗರದಿಂದ ಆಚರಿಸಲಾಗುತ್ತದೆ (Holi 2022). ಈ ವರ್ಷ ಹೋಲಿಕಾ ದಹನ ಮಾರ್ಚ್ 17, 2022 ರಂದು ನಡೆಯಲಿದೆ (Holika Dahana). ಅದರ ಮಾರನೇ ದಿನ ಅಂದರೆ ಮಾರ್ಚ್ 18 ಕ್ಕೆ ಹೋಳಿ ಹಬ್ಬ. ಈ ವರ್ಷ ಹೋಳಿ ಹಬ್ಬ ಬಹಳ ವಿಶೇಷವಾಗಿದೆ. ಜ್ಯೋತಿಷ್ಯ ಶಾಸ್ತ್ರದ (Astrology)ದೃಷ್ಟಿಯಿಂದ ಈ ಬಾರಿಯ ಹೋಳಿಯು ಅಪರೂಪವೆಂಬಂತೆ ಶುಭ ಗ್ರಹಗಳ ಸಂಯೋಜನೆಯಲ್ಲಿ ಬರುತ್ತಿದೆ.  ಆದರೆ, ಹೋಳಿಕಾ ದಹನದ ಸಂಜೆಯೂ ಭದ್ರದೋಷ (Bhadra Dosha)ಇರುವುದರಿಂದ ಈ ಬಾರಿ ಸಂಜೆಯ ಬದಲು ರಾತ್ರಿ ಹೋಳಿಕಾ ಬೆಳಗಲಾಗುವುದು. 

ರೂಪುಗೊಳ್ಳಲಿದೆ  3 ರಾಜಯೋಗ :
ಮಾರ್ಚ್ 17 ರಂದು ಹೋಲಿಕಾ ದಹನದ ದಿನ (Holika Dahana), ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನವು 3 ರಾಜಯೋಗಗಳನ್ನು (Rajayoga on Holi)ಉಂಟುಮಾಡುತ್ತದೆ. ಈ ದಿನ ಗಜಕೇಸರಿ ಯೋಗ (GajaKesari Yoga), ವರಿಷ್ಠ ಯೋಗ, ಕೇದಾರ ಯೋಗಗಳು ರೂಪುಗೊಳ್ಳುತ್ತಿವೆ. ಜ್ಯೋತಿಷ್ಯವನ್ನು  (Astrology) ನಂಬುವುದಾದರೆ, ಹೋಳಿಯಲ್ಲಿ ಇಲ್ಲಿಯವರೆಗೆ ಅಂತಹ ಮಂಗಳಕರ ಸಂಯೋಜನೆ ರೂಪುಗೊಂಡಿಲ್ಲ. ಅಂತಹ ಮಂಗಳಕರ ಯೋಗದಲ್ಲಿ ಹೋಲಿಕಾ ದಹನ ಮಾಡುವುದು ಅತ್ಯಂತ ಉತ್ತಮ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಇದನ್ನೂ ಓದಿ:  Sun Transit: ಇಂದಿನಿಂದ ಸೂರ್ಯನಂತೆ ಹೊಳೆಯಲಿದೆ ಈ 4 ರಾಶಿಯವರ ಭವಿಷ್ಯ , ಇವರು ಮುಟ್ಟಿದ್ದೆಲ್ಲಾ ಚಿನ್ನ

ಪರಿಣಾಮ ಯಾವ ರೀತಿ ಇರಲಿದೆ ? :
3 ರಾಜಯೋಗಗಳ ರಚನೆಯು ಗೌರವ, ಕುಟುಂಬದ ಸಂತೋಷ ಮತ್ತು ಸಮೃದ್ಧಿ, ಪ್ರಗತಿ ಮತ್ತು ವೈಭವವನ್ನು ತರುತ್ತದೆ.  ಗುರುವಾರದ (Thursday) ದಿನ ಹೋಲಿಕಾ ದಹನ ಮಾಡುವುದು ಸಾಕಷ್ಟು ಒಳ್ಳೆಯ ಫಲ ನೀಡುತ್ತದೆ ಎನ್ನಲಾಗಿದೆ. ಸೂರ್ಯನು ಕೂಡ  ಗುರುವಿನ (Jupiter) ರಾಶಿ ಚಿಹ್ನೆಯಾದ ಮೀನ ರಾಶಿಯಲ್ಲಿ ಉಳಿಯುತ್ತಾನೆ. ಒಟ್ಟಿನಲ್ಲಿ ಗ್ರಹಗಳ ಇಂತಹ ಶುಭ ಸ್ಥಾನವು ರೋಗಗಳು, ದುಃಖಗಳು ಮತ್ತು ತೊಂದರೆಗಳನ್ನು ನಾಶಪಡಿಸುತ್ತದೆ. 

ಈ ರಾಜಯೋಗಗಳಲ್ಲಿ ಆಚರಿಸುವ ಹೋಳಿ ಹಬ್ಬವು ಜನರಿಗೆ ಸಂತೋಷವನ್ನು ತರುತ್ತದೆ. ಈ ಗ್ರಹ ಯೋಗವು ಹೋಳಿಯಿಂದ ದೀಪಾವಳಿಯವರೆಗೆ ಇರಲಿದೆ. ಈ ಸಮಯವು ಉದ್ಯಮಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ದೇಶದ ಸರ್ಕಾರದ ಖಜಾನೆಗೂ ಲಾಭವಾಗಬಹುದು. ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಬಹುದು. ವಿದೇಶಿ ಹೂಡಿಕೆ ಹೆಚ್ಚಾಗಬಹುದು. ಈ ಗ್ರಹಗಳ ಸ್ಥಿತಿಗಳು ದೇಶದಲ್ಲಿ ರೋಗಗಳ ಸೋಂಕನ್ನು ಕಡಿಮೆ ಮಾಡುತ್ತದೆ ಎನುತ್ತಾರೆ ಜ್ಯೋತಿಷಿಗಳು. 

ಇದನ್ನೂ ಓದಿ:  Shani Mangal Yuti: ಕ್ರೂರ ಗ್ರಹಗಳಾದ ಶನಿ-ಮಂಗಳ ಸೇರಿ ಈ 3 ರಾಶಿಗಳ ಜನರ ಜೀವನ ಹಾಳು ಮಾಡಲಿವೆ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ಈ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ )

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

Trending News