ಸುಂದರವಾಗಿ, ದಪ್ಪ-ಗಾಢ ಹುಬ್ಬು ನಿಮ್ಮದಾಗಬೇಕೆ? ಹಾಗಾದ್ರೆ ಈ ಒಣಹಣ್ಣನ್ನು ಹೀಗೆ ಬಳಸಿ ಸಾಕು!
Thick Eyebrows Home Remedies: ತೆಂಗಿನೆಣ್ಣೆಯು ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಕೂದಲು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು ಎಂದು ಅಧ್ಯಯನಗಳು ತೋರಿಸಿವೆ.
Dark Eyebrows remedy: ಮುಖದ ಅಂದವನ್ನು ಕಾಪಾಡಿಕೊಳ್ಳಲು ಅನೇಕರು ವಿಧವಿಧ ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ಆದರೆ, ನಮ್ಮಲ್ಲಿ ಹಲವರಿಗೆ ಅವುಗಳ ಬಳಕೆಯ ವಿಧಾನ ಸರಿಯಾಗಿ ತಿಳಿದಿರುವುದಿಲ್ಲ. ನಾವಿಂದು ಈ ವರದಿಯಲ್ಲಿ ದಪ್ಪ ಹುಬ್ಬುಗಳು ಬೆಳೆಯಬೇಕೆಂದರೆ ಯಾವ ಮನೆಮದ್ದುಗಳನ್ನು ಬಳಸಬಹುದು ಎಂಬುದನ್ನು ತಿಳಿಸಿಕೊಡಲಿದ್ದೇವೆ.
ತೆಂಗಿನೆಣ್ಣೆಯು ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಕೂದಲು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು ಎಂದು ಅಧ್ಯಯನಗಳು ತೋರಿಸಿವೆ. ಸ್ವಲ್ಪ ತೆಂಗಿನ ಎಣ್ಣೆಯಿಂದ ಹುಬ್ಬುಗಳನ್ನು ಮಸಾಜ್ ಮಾಡಬಹುದು. ರಾತ್ರಿ ಮಲಗುವ ಮುನ್ನ ಹುಬ್ಬುಗಳಿಗೆ ಎಣ್ಣೆಯನ್ನು ಹಚ್ಚಿ, ಮರುದಿನ ಬೆಳಿಗ್ಗೆ ತೊಳೆಯಿರಿ.
ತಾಳೆ ಎಣ್ಣೆ: ಈ ಎಣ್ಣೆಯನ್ನು ಹಿಂದೆ ಕೂದಲು ಉದುರುವಿಕೆಗೆ ಬಳಸಲಾಗುತ್ತಿತ್ತು. ತಾಳೆ ಮರದಿಂದ ಮಾಡಲ್ಪಟ್ಟ ಈ ಎಣ್ಣೆ ಹುಬ್ಬಿನ ಅಂದ ಹೆಚ್ಚಿದಲು ಸಹ ಬಳಸಬಹುದು. ಇನ್ನು ಹುಬ್ಬಿನ ಮೇಲೆ ಇದನ್ನು ಹಚ್ಚಿದರೆ ಕಪ್ಪು ಹುಬ್ಬು ನಿಮ್ಮದಾಗುತ್ತೆ.
ಬಾದಾಮಿ: ಬಾದಾಮಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದನ್ನು ಬೆಂಕಿಯಲ್ಲಿ ಸುಟ್ಟು ಚೆನ್ನಾಗಿ ಪುಟಿ ಮಾಡಿ. ಅದಕ್ಕೆ ಒಂದು ಚಮಚ ತೆಂಗಿನೆಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ರಾತ್ರಿ ಮಲಗುವ ಮುಂಚೆ ಹುಬ್ಬಿಗೆ ಹಚ್ಚಿ. ಬೆಳಗ್ಗೆ ಸ್ವಚ್ಛಗೊಳಿಸಿ. ಹೀಗೆ ಮಾಡಿದರೆ ಕೇವಲ 7 ದಿನದಲ್ಲಿ ರಿಸಲ್ಟ್ ಸಿಗುತ್ತದೆ.
ಅಲೊವೆರಾ: ಇದು ವಿವಿಧ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ. ಅಲೋವೆರಾ ಜೆಲ್ ಅನ್ನು ಹುಬ್ಬುಗಳ ಮೇಲೆ ನಿಧಾನವಾಗಿ ಉಜ್ಜಿ. ವಾರದಲ್ಲಿ ಹಲವಾರು ಬಾರಿ ಹೀಗೆ ಮಾಡುವುದರಿಂದ ವ್ಯತ್ಯಾಸ ಕಾಣಬಹುದು.
ಇದನ್ನೂ ಓದಿ: ಈ ಒಂದು ತರಕಾರಿ ಸಾಕು ಮಧುಮೇಹಿಗಳ ಶುಗರ್ ನಾರ್ಮಲ್ ಮಾಡಲು ! ತಿನ್ನುವ ವಿಧಾನ ಮಾತ್ರ ಹೀಗೆಯೇ ಇರಬೇಕು
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.