Hit Man Rohit Sharma: ಮೊದಲು ಆಫ್ ಸ್ಪಿನ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಹಿಟ್‌ಮ್ಯಾನ್ ಆಗಿದ್ದರ ಹಿಂದೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆ.. ಅವರು ಯಾರೆಂದು ಇದೀಗ ತಿಳಿಯೋಣ..
ರೋಹಿತ್ ಶರ್ಮಾ ಪ್ರಸ್ತುತ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದಾರೆ.. ಇವರು ಜನಿಸಿದ್ದು 30 ಏಪ್ರಿಲ್ 1987 ರಂದು ಬನ್ಸೋಡ್ನಲ್ಲಿ.. ಇವರ ತಂದೆ ಗುರುನಾಥ ಶರ್ಮಾ ತಾಯಿ ಪೂರ್ಣಿಮಾ ಶರ್ಮಾ.. ಇವರು ವಿಶಾಖಪಟ್ಟಣಂ ನಿವಾಸಿ.. ಹೀಗಾಗಿ ಹಿಟ್ ಮ್ಯಾನ್ ಹುಟ್ಟಿದ್ದು ಮಹಾರಾಷ್ಟ್ರದಲ್ಲಾದರೂ ಸೌತ್‌ಗೂ ಇವರಿಗೂ ಒಂದೊಳ್ಳೆ ನಂಟಿದೆ..
ಇನ್ನು ರೋಹಿತ್ ಶರ್ಮಾ ಜನಿಸಿದ್ದು ತೆಲುಗು ಕುಟುಂಬದಲ್ಲಿ ಜನಿಸಿದ್ದರಿಂದ ಅವರ ಮಾತೃಭಾಷೆ ತೆಲುಗು.. ಇವರು ಚಿಕ್ಕವರಿದ್ದಾಗ ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಅಜ್ಜಿ ಮನೆಯಲ್ಲಿ ಬೆಳೆದರು..
ರೋಹಿತ್ ಶರ್ಮಾ ಕ್ರಿಕೆಟ್‌ಗೆ ಹೆಚ್ಚು ಒತ್ತು ಕೊಡುವುದಕ್ಕಾಗಿ ಹೆಚ್ಚು ಓದಲಾಗಲಿಲ್ಲ.. ಅವರು ಓದಿದ್ದು 12ನೇ ತರಗತಿ ಮಾತ್ರ.. ಮುಂಬೈನಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ..
ಕ್ರಿಕೆಟ್ ಲೋಕದಲ್ಲಿ ದೊಡ್ಡ ಹೆಸರನ್ನು ಮಾಡಿದ ರೋಹಿತ್ ಶರ್ಮಾ ಆಫ್-ಸ್ಪಿನ್ನರ್ ಬೌಲರ್ ಆಗಿಯೇ ಪ್ರಸಿದ್ದರಾಗಿದ್ದರು.. ಆಗ ಅವರ ಕೋಚ್ ದಿನೇಶ್ ಲಾಡ್ ರೋಹಿತ್ ಅವರ ಬ್ಯಾಟಿಂಗ್ ಗುರುತಿಸಿ ಪ್ರೋತ್ಸಾಹ ನೀಡಿದರು.. ಇವರಿಂದಾಗಿ ರೋಹಿತ್ ಶರ್ಮಾ ಇಂದು ಟೀಂ ಇಂಡಿಯಾದ ಹಿಟ್ ಮ್ಯಾನ್ ಆಗಿದ್ದಾರೆ..
ರೋಹಿತ್ ಶರ್ಮಾ ರಿತಿಕಾ ಸಜ್ದೇಹ್ ಅವರೊಂದಿಗೆ 6 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ 2015ರಲ್ಲಿ ವಿವಾಹವಾದರು.. ಹಿಟ್‌ಮ್ಯಾನ್ ಪತ್ನಿ ಕ್ರೀಡಾ ವ್ಯವಸ್ಥಾಪಕಿಯಾಗಿದ್ದರು.. ಈ ದಂಪತಿಗೆ ಈಗ ಮಗಳಿದ್ದಾಳೆ..