ಜಿರಳೆ ಪ್ರತಿಯೊಬ್ಬರ ಮನೆಯಲ್ಲಿ ಕಂಡುಬರುವ ಜೀವಿ. ಎಷ್ಟೇ ಶುಚಿತ್ವ ಕಾಪಾಡಿಕೊಂಡರೂ ಸಹ ಅಡುಗೆ ಮನೆಯಲ್ಲಿ ಹೆಚ್ಚಾಗಿ ಕಾಣುವ ಅನಗತ್ಯ ಕೀಟ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಅಡುಗೆ ಮನೆ ಮಾತ್ರವಲ್ಲದೆ ಸಿಂಕ್‌ಗಳಲ್ಲಿ ಹೆಚ್ಚಾಗಿ ಇವುಗಳು ಕಂಡುಬರುತ್ತದೆ. ಜಿರಳೆಗಳ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಫುಡ್ ಪಾಯಿಸನ್ ಸಮಸ್ಯೆ ಉಂಟಾಗುವ ಸಂಭವ ಹೆಚ್ಚಿರುತ್ತದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Diabetes Treatment: ಡಯಾಬಿಟಿಸ್ ರೋಗಿಗಳ ಚಿಕಿತ್ಸೆ ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ, ಹೇಗೆ ತಿಳಿಯಲು ಸುದ್ದಿ ಓದಿ


ಇನ್ನು ಜಿರಳೆಯಿಂದ ಶಾಶ್ವತ ಪರಿಹಾರ ಕಲ್ಪಿಸುತ್ತದೆ ಎಂದು ಹೇಳುವ ಅನೇಕ ಪ್ರಾಡಕ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅವೆಲ್ಲಕ್ಕಿಂತ ಸುಲಭವಾಗಿ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಜಿರಳೆಗಳಿಂದ ಮುಕ್ತಿ ಪಡೆಯಬಹುದು. ಇಲ್ಲಿದೆ ಕೆಲ ಟಿಪ್ಸ್‌ಗಳು. 


1. ಲವಂಗ
ಲವಂಗವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ಬಾಯಿಯ ದುರ್ವಾಸನೆ, ಶೀತಗಳನ್ನು ಗುಣಪಡಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜಿರಳೆಯನ್ನು ಸಹ ಅದರಿಂದ ಓಡಿಸಬಹುದು ಎನ್ನುವುದು ಬಹುಶಃ ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ಲವಂಗದ ಕೆಲವು ತುಂಡುಗಳನ್ನು ಮನೆಯ ಮೂಲೆಗಳಲ್ಲಿ ಇರಿಸಿದರೆ ಜಿರಳೆಗಳಿಂದ ಶಾಶ್ವತ ಪರಿಹಾರ ಪಡೆಯಬಹುದು. 


2. ಸೀಮೆ ಎಣ್ಣೆ
ಜಿರಳೆಗಳು ಸೀಮೆಎಣ್ಣೆಯ ವಾಸನೆಯನ್ನು ಇಷ್ಟಪಡುವುದಿಲ್ಲ. ಮನೆಯಲ್ಲಿ ಜಿರಳೆಗಳು ಕಾಣಿಸಿಕೊಳ್ಳದಂತೆ, ನೆಲ ಒರೆಸುವಾಗ ಸ್ವಲ್ಪ ಸೀಮೆಎಣ್ಣೆಯನ್ನು ಸೇರಿಸಿಕೊಳ್ಳಿ. ಮನೆಯ ಮೂಲೆ ಮೂಲೆಗೂ ಇದನ್ನೂ ಸಿಂಪಡಿಸಿ. ಇದರಿಂದ ಮನೆಯಲ್ಲಿರುವ ಜಿರಳೆಗಳು ಓಡಿಹೋಗುತ್ತದೆ.


3. ಪಲಾವ್ ಎಲೆ 
ಆಹಾರದ ರುಚಿಯನ್ನು ಹೆಚ್ಚಿಸಲು ಪಲಾವ್ ಎಲೆಯನ್ನು ಬಳಸಲಾಗುತ್ತದೆ. ಆದರೆ ಜಿರಳೆಗಳನ್ನು ತೊಡೆದುಹಾಕಲು ಇದು ರಾಮಬಾಣ.  ಜಿರಳೆಗಳು ಈ ಎಲೆಗಳ ವಾಸನೆಯನ್ನು ಸಹಿಸುವುದಿಲ್ಲ.  ಈ ಎಲೆಗಳನ್ನು ಪುಡಿಮಾಡಿ, ಮನೆಯ ಮೂಲೆ ಮೂಲೆಯಲ್ಲಿ ಇರಿಸಿದರೆ ಮನೆಯೊಳಗೆ  ಜಿರಳೆಗಳು ಬರುವುದಿಲ್ಲ.


ಇದನ್ನು ಓದಿ: Cucumber: ಸೌತೆಕಾಯಿ ತಿಂದ ಬಳಿಕ ನೀರು ಕುಡಿಯಬಾರದು...ಯಾಕೆ ಗೊತ್ತಾ?


4.  ಹೌಸ್ ಕ್ಲೀನಿಂಗ್
ಜಿರಳೆಗಳು ಕೊಳಕು ಸ್ಥಳಗಳಲ್ಲಿ ವಾಸಿಸುತ್ತವೆ. ಅಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಮನೆಯ ಸಿಂಕ್, ಬಾತ್ ರೂಂ,  ಮನೆಯ ಮೂಲೆಗಳನ್ನು ಸ್ವಚ್ಛಗೊಳಿಸಿದರೆ ಅಲ್ಲಿ ಜಿರಳೆ ಕಾಣಿಸುವುದಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.