Home Remedies For Dark Elbow and Knees: ಸೌಂದರ್ಯ ಅಥವಾ ಆರೋಗ್ಯಕರ ಚರ್ಮದ ವಿಷಯಕ್ಕೆ ಬಂದಾಗ, ಎಲ್ಲರ ಗಮನವು ಮುಖದ ಕಡೆಗೆ ಹೋಗುತ್ತದೆ. ಆದರೆ ನಮ್ಮ ದೇಹದ ಇತರ ಭಾಗಗಳಲ್ಲೂ ಉಂಟಾಗುವ ಚರ್ಮದ ಸಮಸ್ಯೆಗಳ ಬಗ್ಗೆ ಬಹುತೇಕ ಮಂದಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನಮ್ಮ ಕುತ್ತಿಗೆಯ ಭಾಗವಾಗಿರಬಹುದು ಅಥವಾ ಮೊಣಕೈ, ಮೊಣಕಾಲೂ ಆಗಿರಬಹುದು. ಸಾಮಾನ್ಯವಾಗಿ ಅನಾರೋಗ್ಯಕರ ಕಾರಣದಿಂದಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ನಾವು ಹೆಚ್ಚು ಕೇರ್ ತೆಗೆದುಕೊಳ್ಳದ ಕಾರಣ ಮೊಣಕೈ ಅಥವಾ ಮೊಣಕಾಲುಗಳ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ಆದರೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸುವುದರಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ.


COMMERCIAL BREAK
SCROLL TO CONTINUE READING

ಮೊಣಕೈ ಮತ್ತು ಮೊಣಕಾಲುಗಳ ಕಪ್ಪು ಬಣ್ಣವನ್ನು ತೆಗೆದುಹಾಕಲು ಸಹಾಯಕವಾಗುವ ಸಿಂಪಲ್ ಮನೆಮದ್ದುಗಳನ್ನು ತಿಳಿದುಕೊಳ್ಳೋಣ.


ಕಪ್ಪು ಮೊಣಕೈ ಮತ್ತು ಮೊಣಕಾಲಿನ ಸಮಸ್ಯೆಯನ್ನು ತೊಡೆದುಹಾಕುವುದು ಹೇಗೆ (Home Remedies For Dark Elbow and Knees)?
ಮೊಣಕೈ ಮತ್ತು ಮೊಣಕಾಲುಗಳ ಕಪ್ಪು ಬಣ್ಣವನ್ನು ತೆಗೆದುಹಾಕಲು ನೀವು ಈ ಕೆಳಗಿನ ವಸ್ತುಗಳನ್ನು ಬಳಸಬಹುದು.


ಅರಿಶಿನ (Turmeric) : 
ಅರಿಶಿನವು (Turmeric) ಚರ್ಮದ ಟೋನ್ ಅನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಸ್ವಲ್ಪ ಅರಿಶಿನವನ್ನು ಹಾಲು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ ಅನ್ನು ಮೊಣಕೈ ಮತ್ತು ಮೊಣಕಾಲುಗಳಿಗೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ. ಇದರ ನಂತರ, ಕೈಗಳನ್ನು ಸ್ವಲ್ಪ ಒದ್ದೆ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಉಜ್ಜಿಕೊಳ್ಳಿ. ಅಂತಿಮವಾಗಿ ಸಾಮಾನ್ಯ ನೀರಿನಿಂದ ತೊಳೆಯಿರಿ.


ಇದನ್ನೂ ಓದಿ- Unwanted Facial Hair: ಮುಖದ ಮೇಲಿನ ಅನಗತ್ಯ ಕೂದಲಿಗೆ Toothpaste ನೀಡುತ್ತೆ ಪರಿಹಾರ


ಸಕ್ಕರೆ (Sugar): 
ಸಕ್ಕರೆ ಸತ್ತ ಕೋಶಗಳನ್ನು ಅಂದರೆ ಡೆಡ್ ಸೆಲ್ಸ್ ಅನ್ನು ತೆಗೆದು ಚರ್ಮವನ್ನು (Skin) ಸ್ವಚ್ಛಗೊಳಿಸುತ್ತದೆ. ಕಪ್ಪು ಮೊಣಕೈಗಳಿಗೆ ಈ ಪರಿಹಾರವನ್ನು ಅಳವಡಿಸಿಕೊಳ್ಳಲು, ಆಲಿವ್ ಎಣ್ಣೆಯನ್ನು ಸಕ್ಕರೆಯಲ್ಲಿ ಬೆರೆಸಿ ನಂತರ ಮೊಣಕೈ ಮತ್ತು ಮೊಣಕಾಲುಗಳ ಮೇಲೆ ಮಸಾಜ್ ಮಾಡಿ. ವೃತ್ತಾಕಾರದ ಚಲನೆಯಲ್ಲಿ ಹಗುರವಾಗಿ ಮಸಾಜ್ ಮಾಡಿ ಮತ್ತು ನಂತರ ಉಗುರುಬೆಚ್ಚಗಿನ ನೀರಿನಿಂದ ಚರ್ಮವನ್ನು ತೊಳೆಯಿರಿ.


ತೆಂಗಿನ ಎಣ್ಣೆ (Coconut oil): 
ಚರ್ಮದ ಬಣ್ಣವನ್ನು ಹಗುರಗೊಳಿಸಲು ತೆಂಗಿನ ಎಣ್ಣೆಯನ್ನು (Coconut oil) ಎಲ್ಲೆಡೆ ಬಳಸಬಹುದು. ಇದರಲ್ಲಿರುವ ವಿಟಮಿನ್-ಇ ಚರ್ಮದ ಟೋನ್ ಅನ್ನು ಸಮಗೊಳಿಸುತ್ತದೆ ಮತ್ತು ಚರ್ಮವನ್ನು ಸರಿಪಡಿಸುತ್ತದೆ. ಈ ಪರಿಹಾರಕ್ಕಾಗಿ, ಸ್ನಾನದ ನಂತರ, ಮೊಣಕೈ ಮತ್ತು ಮೊಣಕಾಲುಗಳನ್ನು ಕೆಲವು ಹನಿ ಕೊಬ್ಬರಿ ಎಣ್ಣೆಯಿಂದ 10-15 ನಿಮಿಷಗಳ ಕಾಲ ಮಸಾಜ್ ಮಾಡಿ.


ಇದನ್ನೂ ಓದಿ- Glowing Skin tips: ಚರ್ಮದ ಈ ಸಮಸ್ಯೆಗಳನ್ನು ನಿವಾರಿಸುತ್ತೆ ಕೊತ್ತಂಬರಿ ಸೊಪ್ಪು


ಅಲೋ ವೆರಾ ಜೆಲ್ (Aloe Vera Gel): 
ಚರ್ಮದ ಟೋನ್ ಅನ್ನು ಸ್ವಚ್ಛಗೊಳಿಸಲು ಅಲೋ ವೆರಾ ಜೆಲ್ (Aloe Vera Gel) ಬಳಕೆ ಕೂಡ ಪ್ರಯೋಜನಕಾರಿ. ನೀವು ಮೊಣಕೈ ಮತ್ತು ಮೊಣಕಾಲುಗಳ ಮೇಲೆ ಅಲೋವೆರಾ ಜೆಲ್ ಅನ್ನು ಹಚ್ಚುವುದರಿಂದಲೂ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.


ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.