Unwanted Facial Hair: ಮುಖದ ಮೇಲಿನ ಅನಗತ್ಯ ಕೂದಲಿಗೆ Toothpaste ನೀಡುತ್ತೆ ಪರಿಹಾರ

How To Remove Unwanted Hair: ಮುಖದಿಂದ ಅನಗತ್ಯ ಕೂದಲನ್ನು ತೆಗೆಯಲು ಪದೇ ಪದೇ ಪಾರ್ಲರ್‌ಗೆ ಹೋಗುವ ಚಿಂತೆ ಬೇಡ. ಈ ಸಿಂಪಲ್ ಟಿಪ್ಸ್ ಅನುಸರಿಸಿ ನಿಮ್ಮ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.

Written by - Yashaswini V | Last Updated : Sep 16, 2021, 01:40 PM IST
  • ಮುಖದ ಮೇಲೆ ಮೂಡುವ ಬೇಡದ ಕೂದಲುಗಳು ಸೌಂದರ್ಯವನ್ನು ಮರೆ ಮಾಡುತ್ತವೆ
  • ಅದರ ದೊಡ್ಡ ಸಮಸ್ಯೆ ಎಂದರೆ ಅವುಗಳನ್ನು ಎಷ್ಟೇ ತೆಗೆದರೂ ಕೆಲವೇ ದಿನಗಳಲ್ಲಿ ಅವು ಮರಳಿ ಬರುತ್ತವೆ
  • ಇಂತಹ ಪರಿಸ್ಥಿತಿಯಲ್ಲಿ, ಪದೇ ಪದೇ ಪಾರ್ಲರ್‌ಗೆ ಹೋಗುವುದು ತುಂಬಾ ದುಬಾರಿ ಎಂದು ಸಾಬೀತುಪಡಿಸಬಹುದು
Unwanted Facial Hair: ಮುಖದ ಮೇಲಿನ ಅನಗತ್ಯ ಕೂದಲಿಗೆ Toothpaste ನೀಡುತ್ತೆ ಪರಿಹಾರ title=
Unwanted Hair Removal : ಮುಖದ ಮೇಲಿನ ಅನಗತ್ಯ ಕೂದಲಿಗೆ Toothpaste ನೀಡುತ್ತೆ ಪರಿಹಾರ

How To Remove Unwanted Hair: ಮುಖದ ಮೇಲೆ ಮೂಡುವ ಬೇಡದ ಕೂದಲುಗಳು ಸೌಂದರ್ಯವನ್ನು ಮರೆ ಮಾಡುತ್ತವೆ. ಅದರ ದೊಡ್ಡ ಸಮಸ್ಯೆ ಎಂದರೆ ಅವುಗಳನ್ನು ಎಷ್ಟೇ ತೆಗೆದರೂ ಕೆಲವೇ ದಿನಗಳಲ್ಲಿ ಅವು ಮರಳಿ ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಪದೇ ಪದೇ ಪಾರ್ಲರ್‌ಗೆ ಹೋಗುವುದು ತುಂಬಾ ದುಬಾರಿ ಎಂದು ಸಾಬೀತುಪಡಿಸಬಹುದು. ಆದರೆ ಮುಖದ ಅನಗತ್ಯ ಕೂದಲನ್ನು ತೆಗೆದುಹಾಕಲು ಅಗ್ಗದ ಮನೆಮದ್ದು ಕೂಡ ಇದೆ. ಇದನ್ನು ಪದೇ ಪದೇ ಬಳಸಿದ ನಂತರವೂ ಬಜೆಟ್ ಸ್ನೇಹಿಯಾಗಿರುತ್ತದೆ.

ಅನಗತ್ಯ ಕೂದಲು ತೆಗೆಯುವ ಮನೆ ಮದ್ದು ಯಾವುದು (Home Remedy for hair removal) ? ಯಾವ ಮನೆಮದ್ದನ್ನು ಅಳವಡಿಸಿಕೊಳ್ಳುವುದರಿಂದ ಸ್ವಚ್ಛ ಮತ್ತು ಹೊಳೆಯುವ ಚರ್ಮವನ್ನು ಪಡೆಯಬಹುದು ಎಂದು ತಿಳಿಯೋಣ...

ಇದನ್ನೂ ಓದಿ- Benefits of Fennel Water: ಹೊಟ್ಟೆಯ ಬೊಜ್ಜು ಕರಗಿಸಲು ಈ ಪವರ್‌ಫುಲ್ ಪಾನೀಯವನ್ನು ಒಮ್ಮೆ ಟ್ರೈ ಮಾಡಿ

Unwanted Hair Removal : ಟೂತ್ಪೇಸ್ಟ್ ಸಹಾಯದಿಂದ ಅನಗತ್ಯ ಕೂದಲನ್ನು ತೆಗೆಯುವುದು ಹೇಗೆ?
ನೀವು ಮನೆಯಲ್ಲಿ ಅನಗತ್ಯ ಕೂದಲನ್ನು ತೆಗೆಯಲು  (Unwanted Hair Removal) ಬಯಸಿದರೆ, ಇದಕ್ಕಾಗಿ ನೀವು ಕೇವಲ ಬಿಳಿ ಟೂತ್ ಪೇಸ್ಟ್ ನ ಸಹಾಯವನ್ನು ತೆಗೆದುಕೊಳ್ಳಿ. ಸಾಮಾನ್ಯವಾದ ಟೂತ್ ಪೇಸ್ಟ್ ತೆಗೆದುಕೊಳ್ಳಿ. ಅಂದರೆ ಆ ಟೂತ್ ಪೇಸ್ಟ್ ಯಾವುದೇ ಸುವಾಸನೆಯನ್ನು ಹೊಂದಿರಬಾರದು.

ಬೇಕಾಗುವ ಪದಾರ್ಥಗಳು:
* 1 ಟೀಚಮಚ ಟೂತ್ಪೇಸ್ಟ್
* 2 ಟೀಸ್ಪೂನ್ ಕಡಲೆ ಹಿಟ್ಟು
* 4-5 ಟೀಸ್ಪೂನ್ ಹಾಲು

ಇದನ್ನೂ ಓದಿ- High Blood Pressure: ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತೆ ಈ ಆಹಾರ ಪದಾರ್ಥಗಳು

ಮನೆಯಲ್ಲಿ ಹೇರ್ ರಿಮೂವಲ್ ಕ್ರೀಮ್ ಮಾಡುವುದು ಹೇಗೆ?
ಮೊದಲು, ಟೂತ್ ಪೇಸ್ಟ್ ಮತ್ತು ಕಡಲೆ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಹಾಲು ಸೇರಿಸಿ ಮತ್ತು ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ತುಂಬಾ ದಪ್ಪವಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಇದು ತುಂಬಾ ದಪ್ಪವಾಗಿದ್ದರೆ, ಅದಕ್ಕೆ ಸ್ವಲ್ಪ ಹೆಚ್ಚು ಹಾಲು ಸೇರಿಸಿ ಕ್ರೀಮ್ ತಯಾರಿಸಿ. ಅರ್ಥಾತ್ ನಿಮಗೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ನಂತೆಯೇ ಮನೆಯಲ್ಲಿಯೂ ಕೂಡ ಹೇರ್ ರಿಮೂವಲ್ ಕ್ರೀಮ್ ಅನ್ನು ತಯಾರಿಸಿ.

ಮುಖದ ಅನಗತ್ಯ ಕೂದಲನ್ನು ಹೇಗೆ ತೆಗೆಯುವುದು? (How to remove unwanted hairs at home)
ಈ ರೀತಿ ತಯಾರಿಸಿದ ಕ್ರೀಮ್ ಅನ್ನು ಮುಖದಲ್ಲಿ ಕೂದಲು ಹೆಚ್ಚಾಗಿರುವ ಭಾಗಗಳಿಗೆ ಹಚ್ಚಿ. ಒಣಗಿದ ನಂತರ, ಹತ್ತಿ ಪ್ಯಾಡ್ ಸಹಾಯದಿಂದ ಅದನ್ನು ತೆಗೆಯಿರಿ. ನೆನಪಿಡಿ ಈ ಮನೆಯಲ್ಲಿ ತಯಾರಿಸಿದ ಕ್ರೀಮ್ ಅನ್ನು ಕೂದಲಿನ ವಿರುದ್ಧ ದಿಕ್ಕಿನಲ್ಲಿ ಉಜ್ಜಿಕೊಳ್ಳಿ. 2-3 ಬಾರಿ ಉಜ್ಜಿದ ನಂತರ, ಕೂದಲನ್ನು ಸಂಪೂರ್ಣವಾಗಿ ತೆಗೆದಾಗ, ಮುಖವನ್ನು ನೀರಿನಿಂದ ತೊಳೆಯಿರಿ. ಕೊನೆಯಲ್ಲಿ ಮಾಯಿಶ್ಚರೈಸರ್ ಹಚ್ಚಲು ಮರೆಯಬೇಡಿ.

ಸೂಚನೆ- ಇಲ್ಲಿ ನೀಡಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News