Lips Care: ಆರೋಗ್ಯಕರ, ಆಕರ್ಷಕ ತುಟಿಗಳಿಗಾಗಿ ಸಿಂಪಲ್ ಟಿಪ್ಸ್
Lips Care: ನಿಮ್ಮ ಆರೋಗ್ಯದಂತೆಯೇ, ತುಟಿಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ, ಏಕೆಂದರೆ ತುಟಿಗಳ ಆರೋಗ್ಯವು ಹದಗೆಟ್ಟರೆ ಇಡೀ ಮುಖದ ಸೌಂದರ್ಯವು ಹದಗೆಡಬಹುದು. ಹಾಗಾದರೆ ತುಟಿಗಳ ಆರೈಕೆಗೆ ಯಾವ ಮನೆಮದ್ದುಗಳು ಸಹಕಾರಿ ಆಗಲಿವೆ ಎಂದು ತಿಳಿಯೋಣ..
ತುಟಿಗಳ ಆರೈಕೆ ಸಲಹೆಗಳು: ಸುಂದರವಾದ ತುಟಿಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಪ್ರತಿಯೊಬ್ಬರೂ ತಮ್ಮ ತುಟಿಗಳು ತುಂಬಾ ಆಕರ್ಷಕವಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ, ಅನೇಕ ಜನರು ಬದಲಾಗುತ್ತಿರುವ ಋತುವಿನಲ್ಲಿ ತುಟಿಗಳ ಶುಷ್ಕತೆ, ಬಿರುಕು ಅಥವಾ ರಕ್ತಸ್ರಾವದ ಸಮಸ್ಯೆಯನ್ನು ಸಹ ಎದುರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಸ್ಯೆಗಳು ಹೆಚ್ಚಾಗುವ ಮೊದಲು ನಿಮ್ಮ ತುಟಿಗಳ ಬಗ್ಗೆ ನೀವು ಕಾಳಜಿ ವಹಿಸಬೇಕು. ಹಾಗಾದರೆ ಅಂತಹ ಸಲಹೆಗಳು ಯಾವುವು. ತುಟಿಗಳ ಬಗ್ಗೆ ಕಾಳಜಿ ವಹಿಸಬಹುದಾದ ಸರಳ ವಿಧಾನ ಯಾವುವು ಎಂದು ತಿಳಿಯೋಣ..
ಸುಂದರ ತುಟಿಗಳಿಗಾಗಿ ಈ ಸಲಹೆಗಳನ್ನು ಅನುಸರಿಸಿ:-
* ಪದೇ ಪದೇ ತುಟಿಗಳನ್ನು ಮುಟ್ಟಬೇಡಿ:
ಕೆಲವರಿಗೆ ಪದೇ ಪದೇ ತುಟಿಗಳನ್ನು ಮುಟ್ಟುವ ಅಭ್ಯಾಸ ಇರುತ್ತದೆ. ಆದರೆ, ಈ ರೀತಿ ಮಾಡುವುದರಿಂದ ನಿಮ್ಮ ತುಟಿಗಳಲ್ಲಿ ಸೋಂಕಿನ ಅಪಾಯವೂ ಇದೆ. ಏಕೆಂದರೆ ಕೆಲವೊಮ್ಮೆ ನಿಮ್ಮ ಕೈಯಲ್ಲಿ ಬ್ಯಾಕ್ಟೀರಿಯಾವೂ ಇರುತ್ತದೆ, ಇದರಿಂದಾಗಿ ತುಟಿ ಸೋಂಕಿನ ಅಪಾಯವೂ ಇರುತ್ತದೆ.
* ಆರೋಗ್ಯಕರ ಆಹಾರ ಯೋಜನೆ :
ನಿಮ್ಮ ತುಟಿಗಳಿಗೆ ಆರೋಗ್ಯಕರ ಆಹಾರ ಯೋಜನೆ ಕೂಡ ಬಹಳ ಮುಖ್ಯ, ಏಕೆಂದರೆ ನಿಮ್ಮ ದೇಹವು ಪೋಷಕಾಂಶಗಳನ್ನು ಪಡೆಯದಿದ್ದಾಗ ನಿಮ್ಮ ತುಟಿಗಳು ಸಹ ಬಿರುಕು ಬಿಡುತ್ತವೆ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ, ನೀವು ಆರೋಗ್ಯಕರ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಳ್ಳಿ.
ಇದನ್ನೂ ಓದಿ- Milk Cream For Skin: ಮೃದುವಾದ ಕಾಂತಿಯುತ ಚರ್ಮಕ್ಕಾಗಿ ಹಾಲಿನ ಕೆನೆಯನ್ನು ಈ ರೀತಿ ಬಳಸಿ
* ಹೆಚ್ಚು ಹೆಚ್ಚು ನೀರು ಕುಡಿಯಿರಿ:
ನೀರು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಹೆಚ್ಚು ಹೆಚ್ಚು ನೀರು ಕುಡಿದರೆ, ನಿಮ್ಮ ತುಟಿಗಳು ಮೃದುವಾಗಿರುತ್ತವೆ ಮತ್ತು ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ.
* ಮಲಗುವ ಮೊದಲು ತುಟಿಗೆ ಹಚ್ಚಿರುವ ಲಿಪ್‌ಸ್ಟಿಕ್ ರಿಮೂವ್ ಮಾಡಿ:
ಇದಲ್ಲದೇ ಲಿಪ್‌ಸ್ಟಿಕ್ ಹಚ್ಚುವ ಅಭ್ಯಾಸ ಇರುವವರು ಮಲಗುವ ಮುನ್ನ ಲಿಪ್‌ಸ್ಟಿಕ್ ರಿಮೂವ್ ಮಾಡಿ ನಂತರ ಮಲಗಿ. ಇಲ್ಲವಾದರೆ ಅದರಲ್ಲಿರುವ ಕೆಮಿಕಲ್ಸ್ ನಿಮ್ಮ ತುಟಿಗಳಿಗೆ ಹಾನಿ ಮಾಡಬಹುದು. ವಾಸ್ತವವಾಗಿ, ಕೆಲವೊಮ್ಮೆ ಲಿಪ್ಸ್ಟಿಕ್ ಕೂಡ ತುಟಿಗಳನ್ನು ಬಿರುಕುಗೊಳಿಸಲು ಪ್ರಾರಂಭಿಸುತ್ತದೆ ಮತ್ತು ಇದರಿಂದ ಹೊಳಪು ಸಹ ಕಣ್ಮರೆಯಾಗುತ್ತದೆ.
ಇದನ್ನೂ ಓದಿ- Coriander Leaves Benefits: ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ ಈ ಸಮಸ್ಯೆಗಳಿಗೂ ಪರಿಹಾರ ನೀಡುತ್ತೆ ಕೊತ್ತಂಬರಿ ಸೊಪ್ಪು
* ತುಟಿಗಳಿಗೆ ಮಸಾಜ್ ಮಾಡಿ:
ತುಟಿಗಳ ಬಗ್ಗೆ ಯಾವಾಗಲೂ ಕಾಳಜಿ ವಹಿಸುವುದು ಬಹಳ ಮುಖ್ಯ. ಅದಕ್ಕಾಗಿಯೇ ನೀವು ತುಟಿಗಳಿಗೆ ಮಸಾಜ್ ಮಾಡಬೇಕು. ಇದು ನಿಮ್ಮ ತುಟಿಗಳನ್ನು ಹೊಳೆಯುವಂತೆ ಮಾಡುವುದು ಮಾತ್ರವಲ್ಲ ಅದನ್ನು ಮೃದುವಾಗಿರಿಸುತ್ತದೆ.
* ಸ್ಕ್ರಬ್ :
ತುಟಿಗಳನ್ನು ಸ್ಕ್ರಬ್ ಮಾಡುವುದು ಸಹ ಸುಂದರ ತುಟಿಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ವಾಸ್ತವವಾಗಿ, ಹೀಗೆ ಮಾಡುವುದರಿಂದ ನಿಮ್ಮ ತುಟಿಗಳು ಕಪ್ಪಾಗುವುದಿಲ್ಲ, ಜೊತೆಗೆ ಮೃದುವಾಗಿರುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.