Sharp Nose Tips: ದಪ್ಪ ಮೂಗಿನಿಂದ ನೀವು ತೊಂದರೆಗೊಳಗಾಗಿದ್ದೀರಾ? ಸರ್ಜರಿ ಇಲ್ಲದೆ ಈ ರೀತಿ ಶಾರ್ಪ್ ನೋಸ್ ಪಡೆಯಿರಿ

Nose Beauty Tips: ಮುಖದ ತ್ವಚೆಯನ್ನು ಹೊಳಪಾಗಿಸಲು ಜನ ಏನೆಲ್ಲಾ ಕಸರತ್ತು ಮಾಡುತ್ತಾರೆ. ಆದರೆ, ಮುಖದ ಸೌಂದರ್ಯಕ್ಕೆ ಕಾರಣವಾಗಿರುವ ಮತ್ತೊಂದು ಮಹತ್ವದ ಅಂಗವನ್ನು ಜನರು ಮರೆತುಬಿಡುತ್ತಾರೆ.  ಒಂದು ವೇಳೆ ನಿಮಗೂ ಕೂಡ ನಿಮ್ಮ ಮೂಗು ಚೂಪಾಗಿರಬೇಕು ಎನಿಸುತ್ತಿದ್ದರೆ, ಈ ಕೆಳಗೆ ಸೂಚಿಸಲಾಗಿರುವ ಕೆಲ ವ್ಯಾಯಾಮಗಳನ್ನು ಮಾಡಿ.  

Written by - Nitin Tabib | Last Updated : Jun 11, 2022, 07:25 PM IST
  • ನೀವೂ ಕೂಡ ದಪ್ಪಾಗಿರುವ ಮೂಗಿನಿಂದ ತೊಂದರೆಗೆ ಒಳಗಾಗಿದ್ದೀರಾ?
  • ಮೂಗನ್ನು ಮೊನಚಾಗಿಸಲು ಇಲ್ಲಿವೆ ಕೆಲ ಸುಲಭದ ವ್ಯಾಯಾಮಗಳು
  • ಈ ವ್ಯಾಯಾಮಗಳನ್ನು ನಿತ್ಯ ಮಾಡುವುದರಿಂದ ಮೂಗು ಸುಂದರವಾಗಿ ಕಾಣಿಸುತ್ತದೆ.
Sharp Nose Tips: ದಪ್ಪ ಮೂಗಿನಿಂದ ನೀವು ತೊಂದರೆಗೊಳಗಾಗಿದ್ದೀರಾ? ಸರ್ಜರಿ ಇಲ್ಲದೆ ಈ ರೀತಿ ಶಾರ್ಪ್ ನೋಸ್ ಪಡೆಯಿರಿ title=
Nose Beauty Tips

Exercise for Sharp Nose: ಮೂಗು ಕೇವಲ ಮನುಷ್ಯನ ಉಸಿರಾಟಕ್ಕೆ ಅಥವಾ ಗೌರವಕ್ಕೆ ಸಂಬಂಧಿಸಿದ ಮಾತ್ರವಲ್ಲದೆ, ಮುಖದ ಸೌಂದರ್ಯದಲ್ಲಿಯೂ ಕೂಡ ಅದು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವರು ದಪ್ಪಾಗಿರುವ ಮೂಗಿನಿಂದ ತೊಂದರೆಗೊಳಗಾಗುತ್ತಾರೆ ಮತ್ತು ಅದನ್ನು ತೆಳ್ಳಗಾಗಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ದಪ್ಪ ಮೂಗನ್ನು ತೆಳ್ಳಗೆ ಮಾಡಬೇಕೆಂದು ಬಯಸುವವರಿಗೆ ಈ ಮೂರು ವ್ಯಾಯಾಮಗಳು ತಿಳಿದಿರಲೇಬೇಕು.

ದಪ್ಪ ಮೂಗನ್ನು ಚೂಪಾಗಿಸುವ ಮೂರು ವ್ಯಾಯಾಮಗಳು ಇಲ್ಲಿವೆ
ದಪ್ಪಾಗಿರುವ ಮೂಗನ್ನು ತೆಳ್ಳಗೆ ಮಾಡಲು ಮತ್ತು ಚೂಪಾದ ಆಕಾರಕ್ಕೆ ತರಲು ನೀವು ಈ ಕೆಳಗೆ ಸೂಚಿಸಲಾಗಿರುವ ಮೂಗಿನ ವ್ಯಾಯಾಮಗಳನ್ನು ಮಾಡಬಹುದು. ಈ ವ್ಯಾಯಾಮಗಳು ಮೂಗಿನ ಸ್ನಾಯುಗಳನ್ನು ಟೋನ್ ಮಾಡುತ್ತವೆ ಮತ್ತು ಮೂಗಿನಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತವೆ.

1. ನೋಸ್ ಶೇಪಿಂಗ್
>> ನೋಸ್ ಶೆಪಿಂಗ್ ವ್ಯಾಯಾಮ ಮಾಡಲು, ಮೊದಲು ನೀವು ಯೋಗ ಚಾಪೆಯ ಮೇಲೆ ಆರಾಮವಾಗಿ ಕುಳಿತುಕೊಳ್ಳಿ.
>> ನಿಮ್ಮ ಸೊಂಟವನ್ನು ನೇರವಾಗಿ ಇರಿಸಿ, ದೀರ್ಘ ಮತ್ತು ಆಳವಾದ ಉಸಿರಾಟದ ಪ್ರಕ್ರಿಯೆಯನ್ನು ನಡೆಸಿ.
>> ಈಗ ಉಸಿರನ್ನು ಒಳಗೆ ತೆಗೆದುಕೊಂಡು ಎರಡೂ ತೋರುಬೆರಳುಗಳಿಂದ ಮೂಗಿನ ಎರಡೂ ಕಡೆ ಮೆಲ್ಲಗೆ ಒತ್ತಡ ಹಾಕಿ.
>> ಇದಾದ ಬಳಿಕ, ಸ್ವಲ್ಪ ಒತ್ತು ನೀಡಿ, ಉಸಿರನ್ನು ನಿಧಾನಕ್ಕೆ ಹೊರಬಿಡಿ. ಈ ಪ್ರಕ್ರಿಯಯನ್ನು 10 ಬಾರಿ ಪುನರಾವರ್ತಿಸಿ. 
>> ಆದರೆ ನೀವು ಹೆಚ್ಚು ಒತ್ತು ನೀಡಬೇಕಾಗಿಲ್ಲ ಎಂಬುದನ್ನು ಮಾತ್ರ ನೆನಪಿನಲ್ಲಿಡಿ.

2. ನೋಸ್ ಶಾರ್ಟ್ನಿಂಗ್ 
>> ನೋಸ್ ಶಾರ್ಟ್ನಿಂಗ್ ವ್ಯಾಯಾಮವನ್ನು ಮಾಡಲು, ಒಂದು ಸ್ಥಳದಲ್ಲಿ ಆರಾಮವಾಗಿ ಕುಳಿತುಕೊಳ್ಳಿ.
>> ಈಗ ಸೊಂಟವನ್ನು ನೇರವಾಗಿ ಇರಿಸಿ ಮತ್ತು ನಿಧಾನ ಗತಿಯಲ್ಲಿ ದೀರ್ಘ ಶ್ವಾಸವನ್ನು ಒಳಗೆ ತೆಗೆದುಕೊಳ್ಳಿ.
>> ಈಗ ತೋರು ಬೆರಳಿನಿಂದ ಮೂಗಿನ ತುದಿಯ ಮೇಲೆ ಲಘು ಒತ್ತಡವನ್ನು ಅನ್ವಯಿಸಿ.
>> ಇದರ ನಂತರ, ಬೆರಳಿನ ಸಹಾಯದಿಂದ ಮೂಗಿನ ತುದಿಯನ್ನು ಕೆಳಕ್ಕೆ ತಂದು ನಂತರ ಅದನ್ನು ಮೇಲಕ್ಕೆ ಒತ್ತಿ.
>> ಈ ಪ್ರಕ್ರಿಯೆಯನ್ನು ಸ್ವಲ್ಪ ಸಮಯದವರೆಗೆ ಪುನರಾವರ್ತಿಸಿ.

3. ನೋಸ್ ಸ್ಟ್ರೈಟ್ನಿಂಗ್  
>> ಮೂಗನ್ನು ನೇರಗೊಳಿಸಲು, ಆರಾಮದಾಯಕ ಸ್ಥಾನದಲ್ಲಿ ಕುಳಿತುಕೊಳ್ಳಿ ರಿಲ್ಯಾಕ್ಸ್ ಆಗಿ ಕುಳಿತುಕೊಳ್ಳಿ.
>> ಈಗ ಮುಗುಳುನಗೆ ಬೀರುತ್ತ ಎರಡೂ ತೋರು ಬೆರಳುಗಳ ಸಹಾಯದಿಂದ, ಮೂಗನ್ನು ಮೇಲಕ್ಕೆ ಎತ್ತಿ.
>> ಈ ರೀತಿ ಸುಮಾರು 20 ರಿಂದ 30 ಬಾರಿ ಮಾಡಿ ಮತ್ತು ಪ್ರತಿದಿನ ಮಾಡಿ.

ಇದನ್ನೂ ಓದಿ-ಡಯಾಬಿಟೀಸ್ ರೋಗಿಗಳಿಗೆ ಈ ನಾಲ್ಕು ತರಕಾರಿ ವಿಷವಿದ್ದಂತೆ..!

ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಾಣಲಿದೆ
ಮೂಗಿಗೆ ಸಂಬಂಧಿಸಿದ ಈ ಮೂರೂ ವ್ಯಾಯಾಮಗಳನ್ನು ದಿನನಿತ್ಯ ಮಾದುವುದುಅರಿಂದ ನಿಮ್ಮ ಮೂಗು ಆಕಾರಕ್ಕೆ ಬರಲು ಪ್ರಾರಂಭಿಸುತ್ತದೆ ಮತ್ತು ಕೆಲವೇ ದಿನಗಳಲ್ಲಿ ನೀವು ಅದರ ವ್ಯತ್ಯಾಸವನ್ನು ಗಮನಿಸಬಹುದು. ಆದರೆ, ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ  ವಿಭಿನ್ನವಾಗಿದ್ದಾರೆ ಮತ್ತು ವಿಶೇಷತೆಯನ್ನು ಹೊಂದಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ. ಹೀಗಾಗಿ ಬೇರೆಯವರಂತೆ ಕಾಣಲು ಮನಸ್ಸಿನ ಮೇಲಾಗಲಿ ಅಥವಾ ಮೆದುಳಿನ ಮೇಲಾಗಲಿ ಹೆಚ್ಚುವರಿ ಒತ್ತಡ ಹೇರಬೇಡಿ.

ಇದನ್ನೂ ಓದಿ-White Hair: ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸುತ್ತೆ ಅಡುಗೆ ಮನೆಯಲ್ಲಿರುವ ಈ ವಸ್ತು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News