ಬೆಂಗಳೂರು: ಮಾನ್ಸೂನ್ ಸಮಯದಲ್ಲಿ ಎಂದರೆ ಮಳೆಗಾಲದಲ್ಲಿ ಹಲ್ಲಿಗಳು (Lizard) ಹೆಚ್ಚು ಗೋಚರಿಸುತ್ತವೆ. ಅನೇಕ ಜನರು ಹಲ್ಲಿಗಳನ್ನು ಕಂಡರೆ ಹೆದರುತ್ತಾರೆ. ಇನ್ನೂ ಕೆಲವರು ಅವುಗಳನ್ನು ಕಂಡೊಡನೆ ಕಿರುಚುತ್ತಾರೆ. ಗೋಡೆಯ ಮೇಲೆ ಅಂಟಿಕೊಂಡಂತೆ ಕಾಣುವ ಈ ಹಲ್ಲಿಗಳು ನೋಡಲು ಚಿಕ್ಕದಾಗಿ ಕಂಡರೂ ವಿಷಕಾರಿ ಎಂಬ ಕಾರಣಕ್ಕೆ  ಭಯ ಹುಟ್ಟಿಸುತ್ತವೆ. ಅಷ್ಟೇ ಅಲ್ಲ ಅವುಗಳನ್ನು ಮನೆಯಿಂದ ಹೊರ ಹಾಕುವುದು ಕೂಡ ಅಷ್ಟು ಸುಲಭವಲ್ಲ. ಆದಾಗ್ಯೂ, ಕೆಲವು ಮನೆಮದ್ದುಗಳನ್ನು ಬಳಸಿ ನೀವು ಹಲ್ಲಿಗಳನ್ನು ಓಡಿಸಬಹುದು.  ಹಲ್ಲಿಯನ್ನು ಮನೆಯಿಂದ ಹೋಗಲಾಡಿಸಲು ಸಹಾಯಕವಾಗುವ ಕೆಲವು ಸುಲಭ ಮನೆ ಮದ್ದುಗಳ (Home Remedies) ಬಗ್ಗೆ ತಿಳಿಯೋಣ...


COMMERCIAL BREAK
SCROLL TO CONTINUE READING

ಮೊಟ್ಟೆಯ ಚಿಪ್ಪುಗಳನ್ನು ಬಳಸಿ:
ನೀವು ಮನೆಯಲ್ಲಿ ಹಲ್ಲಿಗಳಿಂದ (Lizard) ತೊಂದರೆಗೀಡಾಗಿದ್ದರೆ, ನಂತರ ಎಗ್‌ಶೆಲ್‌ಗಳನ್ನು ಅಂದರೆ ಮೊಟ್ಟೆಯ ಮೇಲ್ಬಾಗವನ್ನು ಡಸ್ಟ್‌ಬಿನ್‌ನಲ್ಲಿ ಎಸೆಯುವುದನ್ನು ನಿಲ್ಲಿಸಿ. ಮನೆಯಲ್ಲಿ ಹಲ್ಲಿಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಅವುಗಳನ್ನು ಇರಿಸಿ. ಹಲ್ಲಿಗಳು ಮೊಟ್ಟೆಗಳ ವಾಸನೆಯಿಂದ ಓಡಿಹೋಗುತ್ತವೆ.


ಹಲ್ಲಿಗಳು ಈರುಳ್ಳಿ-ಬೆಳ್ಳುಳ್ಳಿಗೆ ಹೆದರುತ್ತವೆ:
ಹಲ್ಲಿಗಳು ಎಂದಿಗೂ ಹಿಂತಿರುಗಿ ನಿಮ್ಮ ಮನೆಯ ಕಡೆಗೆ ನೋಡಬಾರದು ಎಂದು ನೀವು ಬಯಸಿದರೆ, ಈರುಳ್ಳಿ ಸಿಪ್ಪೆಯನ್ನು ಮನೆಯ ಮೂಲೆಗಳಲ್ಲಿ ಇರಿಸಿ. ಅಲ್ಲದೆ, ಬೆಳ್ಳುಳ್ಳಿ ಮೊಗ್ಗುಗಳನ್ನು ಕಿಟಕಿಗಳು ಮತ್ತು ಬಾಗಿಲುಗಳ ಮೇಲೆ ಇರಿಸಿ. ವಾಸ್ತವವಾಗಿ, ಹಲ್ಲಿಗಳು ಈರುಳ್ಳಿ (Onion) ಮತ್ತು ಬೆಳ್ಳುಳ್ಳಿ ಸಿಪ್ಪೆಗಳಿಗೆ ಹೆದರುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಹಲ್ಲಿಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಅದರಲ್ಲೂ ಮುಖ್ಯವಾಗಿ ಮನೆಯ ಬಾಗಿಲು ಕಿಟಕಿಗಳ ಮೇಲೆ ಇವುಗಳ ಸಿಪ್ಪೆ ಇಡುವುದರಿಂದ ಹಲ್ಲಿಗಳು ಕ್ಷಣಾರ್ಧದಲ್ಲಿ ನಿಮ್ಮ ಮನೆಯಿಂದ ಹೋಗುವುದು ಮಾತ್ರವಲ್ಲ ಅವು ಮತ್ತೆ ನಿಮ್ಮ ಮನೆಗೆ ಹಿಂದಿರುಗುವುದಿಲ್ಲ.


ಇದನ್ನೂ ಓದಿ- Lizard Interpretation: ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅದು ಏನು ಸೂಚಿಸುತ್ತೆ, ಅದರ ಪರಿಣಾಮವೇನು


ಹಲ್ಲಿ ಶೀತವನ್ನು ಇಷ್ಟಪಡುವುದಿಲ್ಲ:
ಹಲ್ಲಿಗಳು ಶೀತದಿಂದ ಭಯಭೀತರಾಗುತ್ತವೆ ಎಂದು ನಿಮಗೆ ತಿಳಿದಿದೆಯೇ? ನೀವು ಹಲ್ಲಿಯನ್ನು ಓಡಿಸಲು ಬಯಸಿದರೆ, ಅದರ ಮೇಲೆ ತಣ್ಣೀರನ್ನು ಸಿಂಪಡಿಸಿ. ಇದರಿಂದ ಕ್ಷಣಾರ್ಧದಲ್ಲಿ ಹಲ್ಲಿ ನಿಮ್ಮ ಮನೆಯಿಂದ ಓಡಿ ಹೋಗುತ್ತದೆ. 


ಕಾಫಿ ಪುಡಿ ಕೂಡ ಉತ್ತಮ ಉಪಾಯವಾಗಿದೆ:
ಕಾಫಿ ಪುಡಿ ಮತ್ತು ಕ್ಯಾಟೆಚು (ಕ್ಯಾಟೆಚು ಎಂದರೆ ಕೆಲವು ಜಾತಿಯ ಸಸ್ಯಗಳಿಂದ ದೊರೆಯುವ ಒಂದು ಬಗೆಯ ರಾಳದಂಥ ವಸ್ತು) ಮಿಶ್ರಣದಿಂದ ದಪ್ಪವಾದ ಹಿಟ್ಟನ್ನು ತಯಾರಿಸಿ. ನಂತರ ಆ ದ್ರಾವಣದಿಂದ ಸಣ್ಣ ಮಾತ್ರೆಗಳನ್ನು ತಯಾರಿಸಿ ಹಲ್ಲಿಗಳು ಹೆಚ್ಚು ಬರುವ ಸ್ಥಳಗಳಲ್ಲಿ ಇರಿಸಿ. ಹಲ್ಲಿ ಕಾಫಿ ಮತ್ತು ಕ್ಯಾಟೆಚುವಿನ ವಾಸನೆಯಿಂದ ಓಡಿಹೋಗುತ್ತದೆ.


ಇದನ್ನೂ ಓದಿ- HOME REMEDIES- ಹೊಟ್ಟೆ ಸಮಸ್ಯೆಯಿಂದ ಹಿಡಿದು ಮನೆ ಕ್ಲೀನ್ ವರೆಗೆ ಉಪಯುಕ್ತ, ಬೆಲೆ ಕೇವಲ 8 ರೂ.


ಹಲ್ಲಿಗೆ ಕರಿಮೆಣಸಿನಿಂದ ಅಲರ್ಜಿ :
ಕರಿಮೆಣಸಿನೊಂದಿಗೆ (Black Pepper) ಹಲ್ಲಿಗಳು ಬೇಗನೆ ಅಸಮಾಧಾನಗೊಳ್ಳುತ್ತವೆ. ವಾಸ್ತವವಾಗಿ ಹಲ್ಲಿಗಳಿಗೆ ಕರಿಮೆಣಸಿನಿಂದ ಅಲರ್ಜಿ (Allergic Reaction) ಆಗುತ್ತದೆ.  ಕರಿಮೆಣಸು ಪುಡಿಯನ್ನು ನೀರಿನಲ್ಲಿ ಬೆರೆಸಿ. ಅದನ್ನು ಹಲ್ಲಿಗಳು ಓಡಾಡುವ ಮೂಲೆಗಳಲ್ಲಿ ಸಿಂಪಡಿಸುತ್ತಿರಿ. ನಿಮಗೆ ಬೇಕಾದರೆ, ನೀವು ಮೆಣಸಿನಕಾಯಿ ಅಥವಾ ಕೆಂಪು ಮೆಣಸಿನ ಪುಡಿಯನ್ನು ಕೂಡ ಬಳಸಬಹುದು. ಹೀಗೆ ಮಾಡುವುದರಿಂದ ಹಲ್ಲಿಗಳು ಬೇಗ ಮನೆಯಿಂದ ಹೋಗುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.