ವಾಸ್ತುವಿನ ಮುಖ್ಯ ನಿಯಮಗಳಿವು; ಮಾಡುವ ಸಣ್ಣ ತಪ್ಪು ಕೂಡಾ ಅಭಿವೃದ್ಧಿಗೆ ಕಂಟಕವಾಗಬಹುದು

Vastu Tips :ಈ ಕಾರಣದಿಂದಲೇ ನಾವು ಮನೆಯ ವಾಸ್ತುವಿಗೆ  ಸಂಬಂಧಿಸಿದ ವಾಸ್ತು ಪ್ರಮುಖ ನಿಯಮಗಳನ್ನು ನಿಮಗಾಗಿ ತಂದಿದ್ದೇವೆ. ಈ ನಿಯಮಗಳನ್ನು ಪ್ರತಿ ಮನೆಯಲ್ಲೂ ಪಾಲಿಸಿದರೆ ವಾಸ್ತುವಿನಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸಬಹುದು.  

Written by - Ranjitha R K | Last Updated : Jul 28, 2021, 08:15 PM IST
  • ಯಾವ ಕೊರತೆಗಳೂ ಇಲ್ಲದಿದ್ದರೂ, ನೆಮ್ಮದಿ ಇಲ್ಲದಿರಬಹುದು
  • ಸಂಪಾದಿಸಿದ ಹಣ ಕೈಯಲ್ಲಿ ಉಳಿಯದೇ ಇರಬಹುದು
  • ವಾಸ್ತು ದೋಷವೇ ಇದಕ್ಕೆ ಕಾರಣವಾಗಿರಬಹುದು
ವಾಸ್ತುವಿನ ಮುಖ್ಯ ನಿಯಮಗಳಿವು;  ಮಾಡುವ ಸಣ್ಣ ತಪ್ಪು ಕೂಡಾ ಅಭಿವೃದ್ಧಿಗೆ ಕಂಟಕವಾಗಬಹುದು

ನವದೆಹಲಿ : Vastu Tips : ಎಷ್ಟೋ ಸಲ ಮನೆಯಲ್ಲಿ ಯಾವ ಕೊರತೆಗಳೂ ಇಲ್ಲದಿದ್ದರೂ, ನೆಮ್ಮದಿ ಇರುವುದೇ ಇಲ್ಲ. ಸಣ್ಣ ಸಣ್ಣ ವಿಚಾರಗಳಿಗೂ ಮನಸ್ತಾಪ, ಕಲಹ ನಡೆಯುತ್ತಲೇ ಇರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ, ಅಭಿವೃದ್ದೀಯಾಗುವುದೇ ಇಲ್ಲ. ಸಂಪಾದಿಸಿದ ಹಣ ಕೈಯಲ್ಲಿ ಉಳಿಯುವುದೇ ಇಲ್ಲ.  ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ದುಃಖ ನ್ನುವುದು ಕಡಿಮೆಯಾಗುವುದೇ ಇಲ್ಲ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹುಡುಕಿ ಸಾಕಾಗುತ್ತದೆ. ಆದರೆ ಪರಿಹಾರ ಸಿಗುವುದಿಲ್ಲ.ಈ ಎಲ್ಲಾ ಸಮಸ್ಯೆಗಳಿಗೂ ವಾಸ್ತು (Vastu dosha) ಕಾರಣವಾಗಿರಬಹುದು. ವಾಸ್ತು ದೋಷವನ್ನು ಸರಿಪಡಿಸಿಕೊಂಡರೆ ಎಲ್ಲವೂ ಸರಿಯಾಗುತ್ತದೆ. ವಾಸ್ತು ಶಾಸ್ತ್ರವು (Vastu Shastra) ಇದನ್ನೇ ಹೇಳುತ್ತದೆ. 

ಈ ಕಾರಣದಿಂದಲೇ ನಾವು ಮನೆಯ ವಾಸ್ತುವಿಗೆ  (Vastu) ಸಂಬಂಧಿಸಿದ ವಾಸ್ತು ಪ್ರಮುಖ ನಿಯಮಗಳನ್ನು ನಿಮಗಾಗಿ ತಂದಿದ್ದೇವೆ. ಈ ನಿಯಮಗಳನ್ನು ಪ್ರತಿ ಮನೆಯಲ್ಲೂ ಪಾಲಿಸಿದರೆ ವಾಸ್ತುವಿನಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸಬಹುದು.  

ಇದನ್ನೂ ಓದಿ : Tuesday Remedy: ಮಂಗಳವಾರ ಈ ವಸ್ತುಗಳ ಖರೀದಿ ಮನೆಯಲ್ಲಿ ಬಡತನ, ಅಶಾಂತಿ, ಅನಾರೋಗ್ಯಕ್ಕೆ ಕಾರಣವಾಗುತ್ತಂತೆ!

ವಾಸ್ತುವಿನ ಪ್ರಮುಖ ನಿಯಮಗಳಿವು : 
1.ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಿ. ಇಲ್ಲಿ ಸಾಕಷ್ಟು ಬೆಳಕು ಬರುವಂತಿರಬೇಕು. 
2.ಮನೆಯಲ್ಲಿ ದೇವರ ಮನೆಯಿದ್ದರೆ (Pooja room) ಪ್ರತಿ ದಿನ ದೇವರಿಗೆ ಪೂಜೆ ಸಲ್ಲಿಸಿ, ಧೂಪ ದ್ರವ್ಯಗಳ ಬಳಕೆ ನಿತ್ಯ ಆಗಲಿ. 
3. ಅಡಿಗೆ ಮನೆ ಸ್ವಚ್ಛವಾಗಿರಲಿ. ಮನೆಯಲ್ಲಿ ಪ್ರತಿದಿನ ತಯಾರಿಸುವ ಅಡುಗೆಯ ಒಂದು  (Kitchen) ಭಾಗ  ಹಸುವಿಗೆ ನೀಡಿ. ಅದು ಕೂಡಾ ಎಲ್ಲರೂ ತಿನ್ನುವುದಕ್ಕೆ ಮೊದಲು ಹಸುವಿಗೆ ಆಹಾರ ನೀಡಬೇಕು. 
4. ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಲೇಬಾರದು.
5. ಮನೆಯಲ್ಲಿ ಒಂದೇ ಸಾಲಿನಲ್ಲಿ 3 ಬಾಗಿಲುಗಳು ಇರಬಾರದು.
6. ರೊಟ್ಟಿಯನ್ನು ಬೇಯಿಸುವ ಮೊದಲು ಪ್ಯಾನ್ ಮೇಲೆ ಹಾಲು ಸಿಂಪಡಿಸಬೇಕು.
7.ಮನೆಯ ಆಗ್ನೇಯ ಮೂಲೆಯಲ್ಲಿ ಹಸಿರಿನಿಂದ ಕೂಡಿರುವ ಫೋಟೋವನ್ನು ಹಾಕಬೇಕು..

ಇದನ್ನೂ ಓದಿ : Zodiac Signs: ಈ ರಾಶಿಯವರ ಮೇಲೆ ಈಶ್ವರನ ಸಂಪೂರ್ಣ ಆಶೀರ್ವಾದವಿರುತ್ತದೆ , ಪ್ರತಿ ಕೆಲಸದಲ್ಲಿಯೂ ಸಿಗುತ್ತದೆ ಯಶಸ್ಸು

8. ಮುರಿದ ವಸ್ತುಗಳು ಮತ್ತು ಗುಜರಿ ಸಾಮಗ್ರಿಗಳನ್ನು ಯಾವತ್ತೂ ಮನೆಯಲ್ಲಿ ಇಡಬಾರದು. 
9. ದುಂಡಾದ ಅಂಚುಗಳನ್ನು ಹೊಂದಿರುವ ಪೀಠೋಪಕರಣಗಳು ಮನೆಯಲ್ಲಿಟ್ಟರೆ ಅದನ್ನು ಶುಭ ಎಂದು ಪರಿಗಣಿಸಲಾಗಿದೆ. 
10. ಮನೆಯಲ್ಲಿ ನಲ್ಲಿ ತೊಟ್ಟಿಕ್ಕದಂತೆ ನೋಡಿಕೊಳ್ಳಿ. ನಲ್ಲಿ ತೊಟ್ಟಿಕ್ಕುತ್ತಿದ್ದರೆ ಕೂಡಲೇ ಸರಿಪಡಿಸಿ. 
11. ತುಳಸಿ ಸಸ್ಯ (Tulsi Plant) ಪೂರ್ವ ದಿಕ್ಕಿನಲ್ಲಿರಲಿ. ಮತ್ತು ತುಳಸಿಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿರಬೇಕು.  
12. ಕಪ್ಪು ಬಣ್ಣದ ನಾಮಫಲಕವನ್ನು ಯಾವತ್ತೂ ಮನೆಯ ಮುಂದೆ ಹಾಕಬೇಡಿ. 
13. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮಾಡಿದ ನೀರಿನ ಒಳಚರಂಡಿ ಆರ್ಥಿಕ ದೃಷ್ಟಿಕೋನದಿಂದ ಶುಭ ಫಲ ನೀಡುತ್ತದೆ. 
14. ಯಾವಾಗಲೂ ಸ್ನಾನಗೃಹವನ್ನು ಸ್ವಚ್ಛವಾಗಿಡಿ. ನೀರನ್ನು ವ್ಯರ್ಥ ಮಾಡಬೇಡಿ. ಇಲ್ಲಿಂದ ಯಾವುದೇ ರೀತಿಯ ವಾಸನೆ ಬಾರದಂತೆ ನೋಡಿಕೊಳ್ಳಬೇಕು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News