Home Vastu: ಮನೆಯ ಈ ಜಾಗದಲ್ಲಿ ಕುಳಿತು ಅಪ್ಪಿ- ತಪ್ಪಿಯೂ ಕೂಡ ಊಟ ಮಾಡಬೇಡಿ
Home Vastu Tips - ಮನೆಯ ಹೊಸ್ತಿಲಲ್ಲಿ ನಿಲ್ಲಬಾರದು ಎಂದು ಮನೆಯಲ್ಲಿ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ವಾಸ್ತವದಲ್ಲಿ, ಪೌರಾಣಿಕ ನಂಬಿಕೆಗಳ (Vastu Shastra) ಪ್ರಕಾರ, ಮನೆಯ ಹೊಸ್ತಿಲಲ್ಲಿ ಕುಳಿತುಕೊಳ್ಳುವುದು, ಅದರ ಮೇಲೆ ಹೆಜ್ಜೆ ಇಡುವುದು ಅಥವಾ ಅದರ ಮೇಲೆ ಕುಳಿತುಕೊಳ್ಳುವುದು ಬಡತನವನ್ನು ಆಹ್ವಾನಿಸಿದಂತೆ ಎನ್ನಲಾಗಿದೆ.
ನವದೆಹಲಿ: Vastu Tips For Home - ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಬೇಕು ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಬೇಕು ಎಂದು ಬಯಸುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ದೇವರು ಮನೆಯ ಬಾಗಿಲಿನ ಹೊಸ್ತಿಲಲ್ಲಿ ನೆಲೆಸಿದ್ದಾನೆ. ಮನೆಯ ಹಿರಿಯರು ಕೂಡ ಆಗಾಗ ಮನೆಯ ಹೊಸ್ತಿಲಲ್ಲಿ ನಿಲ್ಲಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಮನೆಯಲಿಯ ಅಜ್ಜಿಯರೂ ಕೂಡ ಮನೆಯ ಹೊಸ್ತಿಲಲ್ಲಿ ಕುಳಿತು ಊಟ ಮಾಡಬಾರದು ಎಂದು ಹೇಳುತ್ತಾರೆ. ಆದರೆ, ಅವರು ನಿಮಗೆ ಹಾಗೆ ಏಕೆ ಹೇಳುತ್ತಾರೆ ತಿಳಿದಿದೆಯೇ? ಬನ್ನಿ ತಿಳಿದುಕೊಳ್ಳೋಣ
ಹೊಸ್ತಿಲಿನ ಮುಂದೆ ಕುಳಿತು ಆಹಾರವನ್ನು ಸೇವಿಸಬೇಡಿ
ಇಂದು ಅನೇಕ ಜನರು ತಮ್ಮ ಮನೆಗಳಿಗೆ ಚೌಕಟ್ಟುಗಳನ್ನು ಅಳವಡಿಸದಿದ್ದರೂ ಕೂಡ, ದೇವರು (Lakshmi) ಆ ಸ್ಥಳದಲ್ಲಿ ನೆಲೆಸಿರುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಹೆಚ್ಚಿನ ಮನೆಗಳ ಮುಖ್ಯ ಗೇಟ್ ಮತ್ತು ಅಡುಗೆಮನೆಯ ಹೊಸ್ತಿಲು ಮರದಿಂದ ತಯಾರಿಸಲಾಗಿರುವುದರ ಹಿಂದೆಯೂ ಕೂಡ ಇದೇ ಕಾರಣವಿರುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಮನೆಯ ಹೊಸ್ತಿಲಲ್ಲಿ ಕುಳಿತುಕೊಳ್ಳುವುದು, ಅದರ ಮೇಲೆ ಹೆಜ್ಜೆ ಇಡುವುದು ಅಥವಾ ಅದರ ಮೇಲೆ ಕುಳಿತುಕೊಳ್ಳುವುದು ಬಡತನವನ್ನು ಆಹ್ವಾನಿಸಿದಂತೆ ಎನ್ನಲಾಗಿದೆ.
ಬಾಗಿಲಿನ ಚೌಕಟ್ಟಿನ ಮುಂದೆ ಬೂಟುಗಳು ಮತ್ತು ಚಪ್ಪಲಿಗಳನ್ನು ಬಿಡಬೇಡಿ
ಧಾರ್ಮಿಕ ನಂಬಿಕೆಗಳ ಪ್ರಕಾರ, ಬೂಟುಗಳು ಮತ್ತು ಚಪ್ಪಲಿಗಳನ್ನು ಬಾಗಿಲಿನ ಚೌಕಟ್ಟಿನ ಮುಂದೆ ಇಡಬಾರದು. ಯಾಕೆಂದರೆ ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿಗೆ (Goddess Lakshmi) ಅವಮಾನ ಮಾಡಿದಂತೆ ಮತ್ತು ಆಕೆ ಮನೆ ಬಿಟ್ಟು ಹೋಗುತ್ತಾಳೆ. ಇದರಿಂದ ಕುಟುಂಬದಲ್ಲಿ ಹಣದ ಮುಗ್ಗಟ್ಟು ಎದುರಾಗುತ್ತದೆ.
ಇದನ್ನೂ ಓದಿ-Success Tips: ಸೂರ್ಯೋದಯದ ವೇಳೆ ಈ ಕೆಲಸ ಮಾಡಿ, ಜೀವನದಲ್ಲಿ ಯಾವುದೇ ಕೊರತೆ ಎದುರಾಗುವುದಿಲ್ಲ
ಈ ಕೆಲಸಗಳನ್ನು ಸಹ ನಿಷೇಧಿಸಲಾಗಿದೆ
ಮನೆಯ ಹೊಸ್ತಿಲ ಮೇಲೆ ಕುಳಿತು ಅಥವಾ ಅದರ ಮುಂದೆ ನಿಂತು ಉಗುರುಗಳನ್ನು ಕತ್ತರಿಸಬಾರದು. ಏಕೆಂದರೆ ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ ಶುರುವಾಗುತ್ತದೆ. ಇದಲ್ಲದೇ ಹೊಸ್ತಿಲ ಮುಂದೆ ಕುಳಿತು ಮಾಂಸಾಹಾರ ಸೇವಿಸುವುದರಿಂದ ಅಚಾತುರ್ಯ ಉಂಟಾಗುತ್ತದೆ. ಅಲ್ಲದೆ, ಕ್ಯಾಲೆಂಡರ್ ಅಥವಾ ಗಡಿಯಾರ ಇತ್ಯಾದಿಗಳನ್ನು ಮನೆಯ ಹೊಸ್ತಿಲಲ್ಲಿ ನೇತು ಹಾಕಬಾರದು.
ಇದನ್ನೂ ಓದಿ-Kitchen Tips : ಮನೆಯಲ್ಲಿ ಬಾಣಲೆ ಬಳಸುವಾಗ ಮಾಡದಿರಿ ಈ ತಪ್ಪುಗಳನ್ನ! ಇಲ್ಲದಿದ್ದರೆ ತಪ್ಪಿದಲ್ಲ ಆರ್ಥಿಕ ಸಮಸ್ಯೆ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-ನೀವು ಕೂಡ ತಡರಾತ್ರಿ ಆಹಾರ ಸೇವಿಸುತ್ತೀರಾ? ಮಾರಣಾಂತಿಕ ಕಾಯಿಲೆಗೆ ಕಾರಣವಾದೀತು ಎಚ್ಚರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.