ಮನೆಯ ಸುತ್ತಮುತ್ತ ಈ ವಸ್ತುಗಳೇನಾದರೂ ಇದ್ದರೆ ಎದುರಿಸಬೇಕಾಗುತ್ತದೆ ಆರ್ಥಿಕ ಸಂಕಷ್ಟ

ವಾಸ್ತು ಪ್ರಕಾರ, ಪ್ರತಿಯೊಂದು ವಸ್ತುವಿಗೂ ನಮ್ಮ ಜೀವನದ ಮೇಲೆ ನಕಾರಾತ್ಮಕ  ಅಥವಾ ಸಕಾರಾತ್ಮಕ ಪರಿಣಾಮ ಬೀರುವ ಶಕ್ತಿಯಿದೆ.  ಹೀಗೆ ನಕಾರಾತ್ಮಕ ಶಕ್ತಿಯುಳ್ಳ ವಸ್ತುಗಳು ನಮ್ಮ ಸುತ್ತಲೂ ಇದ್ದರೆ, ಅದು ನಮ್ಮ ನಿತ್ಯ ಜೀವನದ  ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. 

Written by - Ranjitha R K | Last Updated : Jan 27, 2022, 01:37 PM IST
  • ವಾಸ್ತುವಿನಲ್ಲಿ ಮನೆಯ ಒಳಭಾಗ ಹಾಗೂ ಹೊರಭಾಗ ಎರಡೂ ಮುಖ್ಯ
  • ಮನೆಯ ಸುತ್ತಮುತ್ತಲಿರುವ ವಸ್ತುಗಳು ವಾಸ್ತುವಿನ ಮೇಲೆ ಪರಿಣಾಮ ಬೀರುತ್ತವೆ
  • ಈ ವಿಶೇಷ ವಿಷಯಗಳನ್ನು ತಿಳಿದುಕೊಂಡಿದ್ದರೆ ಒಳ್ಳೆಯದು
ಮನೆಯ ಸುತ್ತಮುತ್ತ ಈ ವಸ್ತುಗಳೇನಾದರೂ ಇದ್ದರೆ ಎದುರಿಸಬೇಕಾಗುತ್ತದೆ ಆರ್ಥಿಕ ಸಂಕಷ್ಟ title=
ವಾಸ್ತುವಿನಲ್ಲಿ ಮನೆಯ ಒಳಭಾಗ ಹಾಗೂ ಹೊರಭಾಗ ಎರಡೂ ಮುಖ್ಯ (file photo)

ನವದೆಹಲಿ : ಒಮ್ಮೊಮ್ಮೆ ಏನೇ  ಪ್ರಯತ್ನ ಪಟ್ಟರೂ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಸರ್ವ ಪ್ರಯತ್ನ, ಕಠಿಣ ಶ್ರಮಗಳ ಹೊರತಾಗಿಯೂ, ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ಮನೆಯ ಯಾವುದಾದರೂ ಒಬ್ಬ ಸದಸ್ಯರ ಆರೋಗ್ಯವು ನಿರಂತರವಾಗಿ ಕೆಡುತ್ತಿರುತ್ತದೆ. ಒಂದರ ಮೇಲೊಂದರಂತೆ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಹೀಗಾದಾಗ ಏನು ಮಾಡಬೇಕು ಎಂದು ತೋಚುವುದಿಲ್ಲ. ಅನೇಕ ಬಾರಿ ಇಂಥ ಸಮಸ್ಯೆಗಳ ಹಿಂದೆ ವಾಸ್ತು ದೋಷಗಳಿರುವುದು (Vastu Dosha) ಕಂಡು ಬರುತ್ತದೆ. ವಾಸ್ತು ಪ್ರಕಾರ, ಪ್ರತಿಯೊಂದು ವಸ್ತುವಿಗೂ ನಮ್ಮ ಜೀವನದ ಮೇಲೆ ನಕಾರಾತ್ಮಕ (negetive impact) ಅಥವಾ ಸಕಾರಾತ್ಮಕ ಪರಿಣಾಮ ಬೀರುವ ಶಕ್ತಿಯಿದೆ.  ಹೀಗೆ ನಕಾರಾತ್ಮಕ ಶಕ್ತಿಯುಳ್ಳ ವಸ್ತುಗಳು ನಮ್ಮ ಸುತ್ತಲೂ ಇದ್ದರೆ, ಅದು ನಮ್ಮ ನಿತ್ಯ ಜೀವನದ  ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. 

ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತವೆ ಈ ಅಂಶಗಳು :  
ಇಂತಹ ಕೆಲವು ನಕಾರಾತ್ಮಕ ವಿಷಯಗಳು, ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡುತ್ತವೆ. ಈ ವಸ್ತುಗಳ ಪರಿಣಾಮವು ಬಹಳ ದೊಡ್ಡದಾಗಿರುತ್ತದೆ. ಅವುಗಳು ಮನೆಯ ಸುತ್ತಲೂ ಇದ್ದರಂತೂ ಎದುರಾಗುವ ಸಮಸ್ಯೆಗಳು ಒಂದೆರಡಲ್ಲ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ (Vastu Shastra)

ಇದನ್ನೂ ಓದಿ : ಯಾವ ಕ್ಷೇತ್ರದಲ್ಲಿ ನಿಮ್ಮ ಭಾಗ್ಯ ಬೆಳಗುತ್ತದೆ ಎನ್ನುವುದನ್ನು ಹೇಳುತ್ತದೆ ಹಸ್ತ ರೇಖೆಗಳು

ಮರದ ನೆರಳು: 
ಮನೆಯ ಸುತ್ತಲೂ ತುಂಬಾ ದೊಡ್ಡದಾದ ಮತ್ತು ದಟ್ಟವಾದ ಮರಯಿರುವುದು ಒಳ್ಳೆಯದಲ್ಲ.  ಮರದ ನೆರಳು ಮನೆಯ ಮೇಲೆ ಬಿದ್ದರೆ, ಅದು ವಾಸ್ತು ದೋಷಕ್ಕೆ (Vastu Dosha) ಕಾರಣವಾಗುತ್ತದೆ.  ಇದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆ.  ಹಾಗಾಗಿ ಯಾವತ್ತೂ ಬಹಳ ಎತ್ತರವಾಗಿ ಬೆಳೆಯದಂತ ಮರಗಳನ್ನು ಮನೆಯ ಸುತ್ತಲೂ ನೆಡಬೇಕು. 

ಮುಳ್ಳಿನ ಮರಗಳು ಮತ್ತು ಗಿಡಗಳು: 
ಮನೆಯ ಒಳಗೆ ಅಥವಾ ಹೊರಗೆ ಎಲ್ಲೆಂದರಲ್ಲಿ ಮುಳ್ಳಿನ ಮರಗಳು ಮತ್ತು ಗಿಡಗಳು ಅಶುಭ ಫಲವನ್ನೇ ನೀಡುತ್ತದೆ. ಇದು ಹಣಕಾಸಿನ ಸಮಸ್ಯೆ (financial problem), ಅಶಾಂತಿಯನ್ನುಂಟು ಮಾಡುತ್ತದೆ. ಬಂಧಗಳಲ್ಲಿ ವಿರಹವನ್ನು ಉಂಟುಮಾಡಲು ಕೂಡಾ ಇದು ಕಾರಣವಾಗುತ್ತದೆ.  

ಇದನ್ನೂ ಓದಿ : Money Remedies: ಹಣಕಾಸಿನ ಸಮಸ್ಯೆ ಹೆಚ್ಚಾಗಿದೆಯೇ? ನಿಮ್ಮ ರಾಶಿಗನುಗುಣವಾಗಿ ಈ ವಿಶೇಷ ಪರಿಹಾರ ಮಾಡಿ

ಮನೆಯ ಮುಖ್ಯ ದ್ವಾರ ರಸ್ತೆಗಿಂತ ಕೆಳಗಿರಬಾರದು : 
ಮನೆಯ ಮುಖ್ಯ ಗೇಟ್ (house main gate) ಯಾವಾಗಲೂ ರಸ್ತೆಗಿಂತ ಎತ್ತರವಾಗಿರಬೇಕು. ಮುಖ್ಯ ಗೇಟ್ ರಸ್ತೆಯ ಮಟ್ಟಕ್ಕಿಂತ ಕೆಳಗೆ ಇದ್ದರೆ, ಮನೆಯಲ್ಲಿ ವಾಸಿಸುವ ಜನರ ಜೀವನದಲ್ಲಿ ಸದಾ ಸಮಸ್ಯೆಗಳು ಮತ್ತು ಏರಿಳಿತಗಳು  ಕಂಡು ಬರುತ್ತವೆ. 

ಮನೆಯಲ್ಲಿ ಇಟ್ಟಿರುವ ಕಲ್ಲು: 
ಇಂದಿನ ದಿನಗಳಲ್ಲಿ ಇಂಟೀರಿಯರ್ ಡೆಕೋರೇಷನ್ ಹೆಸರಿನಲ್ಲಿ ಮನೆಯಲ್ಲಿ ಕಲ್ಲುಗಳನ್ನು ಇಡುವ ಟ್ರೆಂಡ್ ಶುರುವಾಗಿದೆ. ಆದರೆ ಈ ಕಲ್ಲುಗಳು ಮನೆ ಮಂದಿಯ ಪ್ರಗತಿಯ ಹಾದಿಯಲ್ಲಿ ಅಡ್ಡಿಯಾಗಿ ಪರಿಣಮಿಸಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News