Home Vastu Tips : ನಿಮ್ಮ ಮನೆಯಲ್ಲಿಯೂ ಈ ತಪ್ಪುಗಳಾಗುತ್ತಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ, ಇಲ್ಲವಾದರೆ ನಿಲ್ಲುವುದೇ ಇಲ್ಲ ಆರ್ಥಿಕ ಸಂಕಷ್ಟ
ಮನೆಯಲ್ಲಿ ಎಲ್ಲವೂ ಸರಿಯಾಗಿದ್ದರೂ ಕೆಲವೊಮ್ಮೆ ಸಂಕಷ್ಟಗಳು ಕೊನೆಯಾಗುವುದೇ ಇಲ್ಲ. ಒಂದರ ನಂತರ ಒಂದರಂತೆ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ.
ನವದೆಹಲಿ : ಮನೆಯಲ್ಲಿ ಎಲ್ಲವೂ ಸರಿಯಾಗಿದ್ದರೂ ಕೆಲವೊಮ್ಮೆ ಸಂಕಷ್ಟಗಳು ಕೊನೆಯಾಗುವುದೇ ಇಲ್ಲ. ಒಂದರ ನಂತರ ಒಂದರಂತೆ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಇದಕ್ಕೆ ವಾಸ್ತು ದೋಷ (Vastu Dosha) ಕಾರಣವಾಗಿರಬಹುದು. ಮನೆಯೇ ಆಗಲಿ ಕಚೇರಿಯೇ ಆಗಲಿ ವಾಸ್ತು ಸರಿಯಾಗಿರುವುದು ಬಹಳ ಮುಖ್ಯ. ಇಲ್ಲದಿದ್ದರೆ ಯಶಸ್ಸು, ಸಂತೋಷ ಮತ್ತು ಆರೋಗ್ಯಕರ ಜೀವನದ ಮೇಲೆ ಬಹಳವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ವಾಸ್ತು ಶಾಸ್ತ್ರದ (Vastu Shastra)ಕೆಲವು ಪ್ರಮುಖ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವಾಗಿರುತ್ತದೆ. ಇನ್ನು ನಾವು ನಿತ್ಯ ಮಾಡುವ ಕೆಲವೊಂದು ತಪ್ಪುಗಳನ್ನು ಸರಿಪಡಿಸಿಕೊಂಡರೂ ಪ್ರಗತಿ ಸಾಧ್ಯವಾಗುತ್ತದೆ.
ಹಣದ ನಷ್ಟಕ್ಕೆ ಕಾರಣವಾಗುತ್ತವೆ :
ಅಕಸ್ಮಾತ್ ಖರ್ಚುಗಳು ಹೆಚ್ಚಾದರೆ ಅಥವಾ ಅನಗತ್ಯವಾಗಿ ಹಣ ಪೋಲಾಗುತ್ತಿದ್ದರೆ (Money loss), ಅದರ ಹಿಂದೆ ಮನೆಯಲ್ಲಿ ಆಗುತ್ತಿರುವ ಕೆಲವು ಅವಾಂತರಗಳು ಕಾರಣವಾಗಿರಬಹುದು. ವಾಸ್ತು ಶಾಸ್ತ್ರದಲ್ಲಿ (Vastu Shastra), ಈ ತಪ್ಪುಗಳು ಹಣದ ನಷ್ಟ ಮತ್ತು ಗೌರವದ ನಷ್ಟಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಈ ತಪ್ಪುಗಳಿಂದಲೂ, ಶ್ರಮ ಮತ್ತು ಹಣವನ್ನು ಉಳಿಸುವ ಪ್ರತಿಯೊಂದು ಪ್ರಯತ್ನವೂ ವಿಫಲಗೊಳ್ಳುತ್ತದೆ. ಸರ್ವ ಪ್ರಯತ್ನಗಳ ನಂತರವೂ ಆರ್ಥಿಕ ಸಮಸ್ಯೆಗಳು ಬಗೆಹರಿಯುವುದೇ ಇಲ್ಲ.
ಇದನ್ನೂ ಓದಿ : Chandra Grahan 2021: ಚಂದ್ರಗ್ರಹಣದ ಪರಿಣಾಮ 15 ದಿನ ಇರುತ್ತದೆ, ಈ 6 ರಾಶಿಯವರು ಜಾಗರೂಕರಾಗಿರಿ
ನಲ್ಲಿ ನೀರು ತೊಟ್ಟಿಕ್ಕುವುದು:
ನಲ್ಲಿಯಿಂದ ತೊಟ್ಟಿಕ್ಕುವ ನೀರು ನೀರಿನ ಹರಿವು ಮಾತ್ರವಲ್ಲ, ಹಣ ಮತ್ತು ಮನೆಯ ಗೌರವವನ್ನು ವ್ಯರ್ಥ ಮಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ, ನಲ್ಲಿಯಿಂದ ನೀರು ತೊಟ್ಟಿಕ್ಕುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಈ ರೀತಿಯಾದರೆ ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ಜೊತೆಗೆ ಕುಟುಂಬದ ಗೌರವದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ದಕ್ಷಿಣದಲ್ಲಿ ತಿಜೋರಿ ಇಡುವುದು :
ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ, ತಿಜೋರಿಯನ್ನು ಸರಿಯಾದ ಸ್ಥಳದಲ್ಲಿ ಇಡಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ತಿಜೋರಿಯನ್ನು ಯಾವತ್ತೂ ದಕ್ಷಿಣ ದಿಕ್ಕಿನಲ್ಲಿಡಬಾರದು (Vastu tips). ಇದರಿಂದ ಹಣಕಾಸಿನ ನಷ್ಟವಾಗುತ್ತದೆ. ತಿಜೋರಿಯ ಮುಖ ಉತ್ತರ ದಿಕ್ಕಿಗೆ ಇರುವುದು ಒಳ್ಳೆಯದು.
ಇದನ್ನೂ ಓದಿ : ಕಾರ್ತಿಕ ಹುಣ್ಣಿಮೆಯ ದಿನ ಏರ್ಪಡಲಿದೆ ಶುಭ ಸಂಯೋಗ, ಈ ಮುಹೂರ್ತದಲ್ಲಿ ಪೂಜೆ ಮಾಡಿದರೆ ಆಗಲಿದೆ ಧನಲಾಭ
ಅಡುಗೆ ಮನೆಯಲ್ಲಿ ಎಂಜಲು ಪಾತ್ರೆ ಉಳಿಸುವುದು :
ರಾತ್ರಿ ಊಟದ ನಂತರ ಕೊಳಕು ಪಾತ್ರೆಗಳನ್ನು ಅಡುಗೆಮನೆಯಲ್ಲಿ (Kitchen) ಇಡುವುದು ತುಂಬಾ ತಪ್ಪು. ಈ ರೀತಿ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಮನೆಯಲ್ಲಿ ನಕಾರಾತ್ಮಕತೆಯೂ ಹರಡುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ಶುಚಿಯಾಗಿಡಬೇಕು :
ಮನೆಯ ಮುಖ್ಯ ದ್ವಾರದ ಮೇಲೆ ಕೊಳಕು ಇದ್ದರೆ (Main door vastu), ಬಾಗಿಲು ಕೊಳಕಾಗಿದ್ದರೆ, ಬಿರುಕು ಇದ್ದರೆ, ಅಂಥಹ ಮನೆಯಲ್ಲಿ ಎಂದಿಗೂ ಹಣ ಉಳಿಯುವುದಿಲ್ಲ. ಮನೆಯ ಮುಖ್ಯ ದ್ವಾರಕ್ಕೆ ಹಾನಿಯಾಗಿದ್ದರೆ, ತಕ್ಷಣ ಅದನ್ನು ಸರಿಪಡಿಸಿಕೊಳ್ಳುವುದು ಲೇಸು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.