Vastu Tips - ಮನೆಯ ಈ ದಿಕ್ಕಿನಲ್ಲಿ ಅಪ್ಪಿತಪಿಯೂ ಕೂಡ ಕಿಚನ್ ನಿರ್ಮಿಸಬೇಡಿ, ದಿವಾಳಿಯಾಗುವಿರಿ

Kitchen Tips - ಪ್ರತಿ ಮನೆಯಲ್ಲಿ ಅಡುಗೆ ಮನೆಯ ಜಾಗವನ್ನು ತುಂಬಾ ಜಾಗ್ರತೆಯಿಂದ ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಮನೆಯ ಅಡುಗೆ ಮನೆ ಕಟ್ಟುವಾಗ ವಾಸ್ತು ಶಾಸ್ತ್ರದ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ.

Written by - Nitin Tabib | Last Updated : Nov 7, 2021, 10:08 PM IST
  • ಕಿಚನ್ ನಿರ್ಮಿಸುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ
  • ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ತನ್ನದೇ ಆದ ಮಹತ್ವವಿದೆ.
  • ಅಡುಗೆ ತಯಾರಿಸುವಾಗ ದಿಕ್ಕುಗಳಿಗೆ ಮಹತ್ವ ನೀಡಿ.
Vastu Tips - ಮನೆಯ ಈ ದಿಕ್ಕಿನಲ್ಲಿ ಅಪ್ಪಿತಪಿಯೂ ಕೂಡ ಕಿಚನ್ ನಿರ್ಮಿಸಬೇಡಿ, ದಿವಾಳಿಯಾಗುವಿರಿ title=
Kitchen Tips (File Photo)

Kitchen Tips - ವಾಸ್ತು ಶಾಸ್ತ್ರದಲ್ಲಿ (Vastu Shastra) ದಿಕ್ಕುಗಳಿಗೆ ತುಂಬಾ ಪ್ರಾಮುಖ್ಯತೆ ನೀಡಲಾಗಿದೆ. ಅಡುಗೆ ಮನೆಯನ್ನು (Kitchen Vastu) ಮನೆಯಲ್ಲಿ ಬಹಳ ಮುಖ್ಯವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ದಿಕ್ಕು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿದೆ, ಆದ್ದರಿಂದ ದಿಕ್ಕಿನ ಪ್ರಕಾರ ಮನೆಯಲ್ಲಿ ಪ್ರತಿಯೊಂದು ಸ್ಥಳವನ್ನು ನಿರ್ಮಿಸುವುದು ಬಹಳ ಮುಖ್ಯ. ಮನೆಯ ಅಡುಗೆ ಕೆಲಸವು ಹೆಚ್ಚಾಗಿ ಮಹಿಳೆಯರ (Home  Kitchen) ಜವಾಬ್ದಾರಿಯಾಗಿದೆ. ಆದುದರಿಂದ ಅಡುಗೆ ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಅದರ ಋಣಾತ್ಮಕ ಪರಿಣಾಮ ಮನೆಯ ಮಹಿಳೆಯರ ಮೇಲೆ ಹೆಚ್ಚಾಗಿ ಬೀಳುತ್ತದೆ. ಆದ್ದರಿಂದ, ಅಡುಗೆ ಮಾಡುವಾಗ ದಿಕ್ಕನ್ನು ನೆನಪಿನಲ್ಲಿಡಿ. ಅಡುಗೆ ಮನೆಯ ವಾಸ್ತು (Vastu Tips) ಹೇಗಿರಬೇಕು ಎಂದು ತಿಳಿಯೋಣ,

ಇದನ್ನೂ ಓದಿ - Astrology : ಈ 5 ರಾಶಿಯವರ ಜೀವನ ಸೂರ್ಯನಂತೆ ಬೆಳಗಲಿದೆ : ಇವರಿಗೆ ನಾಳೆಯಿಂದ ಬಂಪರ್ ಆದಾಯ!

ಈ ರೀತಿ ಮನೆಯ ಅಡುಗೆ ಮನೆಯನ್ನು ಅಲಂಕರಿಸಿ
>> ಅಡುಗೆ ಮನೆಯನ್ನು ಮನೆಯಲ್ಲಿ ಆಗ್ನೇಯ ದಿಕ್ಕಿನಲ್ಲಿ ಅಂದರೆ ಅಗ್ನಿಕೋನದಲ್ಲಿ ನಿರ್ಮಿಸಬೇಕು. ಈ ದಿಕ್ಕಿನ ಅಧಿಪತಿ ಶುಕ್ರ ಗ್ರಹ.

>> ವಾಸ್ತು ಪ್ರಕಾರ ಅಡುಗೆ ಮನೆಯನ್ನು ನೈಋತ್ಯ ದಿಕ್ಕಿನಲ್ಲಿ ಮಾಡಬಾರದು. ಇದು ನಿಮ್ಮ ಮನೆಯಲ್ಲಿ ಅನಗತ್ಯ ಖರ್ಚುಗಳಿಗೆ ಕಾರಣವಾಗುತ್ತದೆ.

>> ಅಡುಗೆಮನೆಯಲ್ಲಿ ಒಲೆ ಇಡುವ ಸ್ಥಳವನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮಾಡುವುದು ಸೂಕ್ತ. ಆದ್ದರಿಂದ ನಮ್ಮ ಮನೆಯ ಮಹಿಳೆಯರು ಆಹಾರ ತಯಾರಿಸುವಾಗ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಬೇಕು.

>> ನಿಮ್ಮ ಅಡುಗೆಮನೆಯಲ್ಲಿ ಮೈಕ್ರೋವೇವ್ ಇತ್ಯಾದಿಗಳಿದ್ದರೆ ಅದನ್ನು ಆಗ್ನೇಯ ಮೂಲೆಯಲ್ಲಿ ಇರಿಸಿ.

>> ಅಡುಗೆಮನೆಯಲ್ಲಿ ವಾಯವ್ಯ ದಿಕ್ಕಿನಲ್ಲಿ ನೀರಿನ ಸ್ಥಳ ಅಥವಾ ಫ್ರಿಜ್ ಇಡುವುದು ಪ್ರಯೋಜನಕಾರಿ.

>> ಅಡುಗೆಮನೆಯಲ್ಲಿ ಹಿಟ್ಟು, ಅಕ್ಕಿ ಮತ್ತು ಆಹಾರ ಪದಾರ್ಥಗಳನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಕು.

>> ಅಡುಗೆಮನೆಯ ಕಿಟಕಿಯನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮಾಡಬೇಕು. ಲೈಟ್ ಬಲ್ಬ್ ಇತ್ಯಾದಿಗಳನ್ನು ಸಹ ಈ ದಿಕ್ಕಿನಲ್ಲಿ ಇಡಬೇಕು.

>> ಅಡುಗೆಮನೆಯಲ್ಲಿ ಪಾತ್ರೆಗಳನ್ನು ತೊಳೆಯುವ ಸ್ಥಳವನ್ನು ಅಂದರೆ ಸಿಂಕ್ ಅನ್ನು ಈಶಾನ್ಯ ದಿಕ್ಕಿನಲ್ಲಿ ಅಳವಡಿಸಬೇಕು.

>> ಅಡುಗೆಮನೆಯಲ್ಲಿ ದೇವತೆಗಳ ಸ್ಥಾನವನ್ನು ಎಂದಿಗೂ ಮಾಡಬಾರದು. ಇದರ ಹೊರತಾಗಿ, ಔಷಧಿಗಳನ್ನು ಎಂದಿಗೂ ಅಡುಗೆಮನೆಯಲ್ಲಿ ಇಡಬಾರದು.

>> ಅಡುಗೆ ತಯಾರಿಸುವಾಗ, ಬಾತ್ರೂಮ್ ಮತ್ತು ಅಡುಗೆ ಮನೆಯ ಬಾಗಿಲುಗಳು ಪರಸ್ಪರ ಎದುರು ಇರಬಾರದು ಎಂಬುದನ್ನು ನೆನಪಿನಲ್ಲಿಡಿ.

>> ಅಡಿಗೆ ಮತ್ತು ಸ್ನಾನಗೃಹವನ್ನು ಸರಳ ರೇಖೆಯಲ್ಲಿ ನಿರ್ಮಿಸಬಾರದು.

ಇದನ್ನೂ ಓದಿ-ಫೆಂಗ್ ಶೂಯಿಯ ಸುಲಭ ಪರಿಹಾರಗಳು: ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ

ಈ ಸಂಗತಿಗಳನ್ನು ಯಾವಾಗಲು ನೆನಪಿನಲ್ಲಿಡಿ
ವಾಸ್ತು ಶಾಸ್ತ್ರದ ಪ್ರಕಾರ ಮುಸುರಿ ಪಾತ್ರೆಗಳನ್ನು ಕೂಡ ಅಡುಗೆ ಮನೆಯಲ್ಲಿ ಹೆಚ್ಚು ಹೊತ್ತು ಇಡಬಾರದು. ಈ ಪಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸಬೇಕು ಮತ್ತು ಸರಿಯಾದ ಸ್ಥಳದಲ್ಲಿ ಇಡಬೇಕು. ರಾತ್ರಿ ಊಟ ಮಾಡಿದ ನಂತರ ಪಾತ್ರೆಗಳನ್ನು ಮುಸುರಿಯಾಗಿ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಶುರುವಾಗುತ್ತದೆ. ಠೇವಣಿ ಮಾಡಿದ ಬಂಡವಾಳವು ನಾಶವಾಗಲು ಪ್ರಾರಂಭವಾಗುತ್ತದೆ ಮತ್ತು ಸಾಲದ ಪರಿಸ್ಥಿತಿಯು ಎದುರಾಗುತ್ತದೆ.

ಇದನ್ನೂ ಓದಿ-Guru Rashi Parivartan 2021 - ಮುಂಬರುವ 14 ದಿನಗಳು ಈ ರಾಶಿಯ ಜನರ ಪಾಲಿಗೆ ತುಂಬಾ ಫಲದಾಯಕವಾಗಿವೆ, ನಿಮ್ಮ ರಾಶಿ ಇದೆಯಾ ಈ ಲಿಸ್ಟ್ ನಲ್ಲಿ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News