Home Remedies For Blocked Nose: ಕೆಲವರಿಗೆ ಮೂಗು ಕಟ್ಟುವುದು ಸಾಮಾನ್ಯ. ಈ ಸಮಸ್ಯೆಯು ಸಾಮಾನ್ಯವಾಗಿ ಶೀತ, ಅಲರ್ಜಿಗಳು ಅಥವಾ ಸೈನಸ್ ಸೋಂಕಿನಂತಹ ವಿವಿಧ ಪರಿಸ್ಥಿತಿಗಳಿಂದ ಉಂಟಾಗುತ್ತದೆ. ಇದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ಅಹಿತಕರವಾಗಿರುತ್ತದೆ, ನಿದ್ರೆ ಮಾಡಲು ಕಷ್ಟವಾಗುತ್ತದೆ. ಉಸಿರಾಟ ಕೂಡ ಕಷ್ಟವಾಗುತ್ತದೆ. ಆದರೆ ಈ ಸಮಸ್ಯೆಯಿಂದ ಪಾರಾಗಲು ಕೆಲವು ಮನೆ ಮದ್ದುಗಳನ್ನು ಪಾಲಿಸಿದರೆ ಸಾಕು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಧುಮೇಹಿಗಳು ಬಿಸಿ ಹಾಲಿಗೆ ಇದನ್ನು ಬೆರೆಸಿ ಕುಡಿದರೆ ಸಾಕು.. ನಿಯಂತ್ರಣಕ್ಕೆ ಬರುತ್ತೆ ಶುಗರ್‌ ಲೆವಲ್‌ ! 


1. ಬಿಸಿ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ 


ಒಂದು ಲೋಟ ಬಿಸಿ ನೀರಿನಲ್ಲಿ 1/4 ಚಮಚ ಉಪ್ಪನ್ನು ಮಿಶ್ರಣ ಮಾಡಿ. ಈ ನೀರಿನಿಂದ ಬಾಯಿ ಮುಕ್ಕಳಿಸುತ್ತ ಗಾರ್ಗಲ್‌ ಮಾಡಿ. ಇದನ್ನು ದಿನಕ್ಕೆ ಎರಡು ಬಾರಿ ಮಾಡಿ. ಕಟ್ಟಿದ ಮೂಗು ಸರಿ ಹೋಗುವುದು. 


2. ಸ್ಟೀಮ್:


ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ. ನಿಮ್ಮ ಮೂಗು ಉಗಿಗೆ ಹತ್ತಿರದಲ್ಲಿದೆ ಇಟ್ಟುಕೊಂಡು ಸ್ವಚ್ಛವಾದ ಟವೆಕ್‌ ನಿಂದ ಕವರ್‌ ಮಾಡಿ ಸ್ಟೀಮ್‌ ತೆಗೆದುಕೊಳ್ಳಿ. 5-10 ನಿಮಿಷಗಳ ಕಾಲ ಈ ರೀತಿ ಸ್ಟೀಮ್ ತೆಗೆದುಕೊಳ್ಳಿ. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಮಾಡಿ. ಸಮಸ್ಯೆ ಕಡಿಮೆಯಾಗುತ್ತದೆ.


3. ಸೂಪ್ ಸೇವಿಸಿ : 


ನೀರು, ಸೂಪ್ ಅಥವಾ ಗಿಡಮೂಲಿಕೆ ಚಹಾ ಕುಡಿಯುವುದರಿಂದ ಮೂಗು ಸಡಿವಾಗುತ್ತದೆ. ಇದರಿಂದ ಶಿತ ಕೂಡ ಬಹು ಬೇಗನೆ ಕಡಿಮೆಯಾಗುತ್ತದೆ. 


5. ವಿಶ್ರಾಂತಿ ತೆಗೆದುಕೊಳ್ಳಿ :


ನಿಮ್ಮ ದೇಹವು ತ್ವರಿತವಾಗಿ ಚೇತರಿಸಿಕೊಳ್ಳಲು ವಿಶ್ರಾಂತಿ ತೆಗೆದುಕೊಳ್ಳಿ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.


6. ಮಸಾಜ್:


ನಿಮ್ಮ ಮೂಗಿನ ಸುತ್ತಲಿನ ಪ್ರದೇಶವನ್ನು ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಕಟ್ಟಿದ ಮೂಗನ್ನು ಸರಿ ಪಡಿಸುತ್ತದೆ.


ಇದನ್ನೂ ಓದಿ:Fruit For Weight Loss: ಈ ಹಣ್ಣನ್ನು ಸೇವಿಸಿ.. ಒಂದೇ ತಿಂಗಳಲ್ಲಿ ಸಣ್ಣಗಾಗುವಿರಿ! 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.