ಇಂದಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ. ಅವರ ಪಾಲನೆಯ ಬಗ್ಗೆ ಯಾವಾಗಲೂ ಕಾಳಜಿ ಇಟ್ಟುಕೊಳ್ಳಬೇಕಾಗುತ್ತದೆ. ಇನ್ನು ಪಾಲಕರು ತಮ್ಮ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಆದರೆ ಇಂಟರ್ನೆಟ್ ಯುಗದಲ್ಲಿ, ಮಕ್ಕಳು ತಪ್ಪು ವಿಚಾರಗಳಿಂದ ಪ್ರಭಾವಿತರಾಗಬಹುದು. ಆದ್ದರಿಂದ ಜಾಗರೂಕರಾಗಿರುವುದು ಬಹಳ ಮುಖ್ಯ. ಕೆಟ್ಟ ಸಾಂಗತ್ಯದಿಂದ ನಿಮ್ಮ ಮಕ್ಕಳನ್ನು ರಕ್ಷಿಸುವುದು ಹೇಗೆ ಎಂದು ಚಿಂತಿಸುತ್ತಿದ್ದರೆ ಈ ಸಲಹೆಗಳನ್ನು ಅನುಸರಿಸಿ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Shah Rukh Khan: ಬಾಲಿವುಡ್‌ ನಟ ಶಾರುಖ್ ಖಾನ್‌ಗೆ ಕೋವಿಡ್ ಪಾಸಿಟಿವ್‌


ಕೆಟ್ಟ ಸ್ನೇಹಿತರಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?
1. ಮಕ್ಕಳಿಗೆ ಹೆಚ್ಚಿನ ಸಮಯವನ್ನು ನೀಡಿ: 
ಮಕ್ಕಳ ಉತ್ತಮ ಪಾಲನೆಯ ಮೊದಲ ಷರತ್ತು ಅವರಿಗೆ ಸಾಧ್ಯವಾದಷ್ಟು ಸಮಯವನ್ನು ನೀಡುವುದು. ಇದು ನಿಮ್ಮ ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಗಾಢಗೊಳಿಸುತ್ತದೆ ಮತ್ತು ಅವರು ತಮ್ಮ ಮನಸ್ಸಿನ ಮಾತುಗಳನ್ನು ತಮ್ಮ ಜೊತೆ ಹಂಚಿಕೊಳ್ಳುತ್ತಾರೆ.  


2. ಮಕ್ಕಳೊಂದಿಗೆ ಸ್ನೇಹ ಮಾಡಿ: 
ಯಾವುದೇ ವ್ಯಕ್ತಿ ಚಿಕ್ಕವನಾಗಿರಲಿ ಅಥವಾ ದೊಡ್ಡವನಾಗಿರಲಿ, ಅವನು ಉತ್ತಮ ಸ್ನೇಹವನ್ನು ಹೊಂದಿರುವ ಜನರೊಂದಿಗೆ ತನ್ನ ರಹಸ್ಯಗಳನ್ನು ಹಂಚಿಕೊಳ್ಳುತ್ತಾನೆ. ನೀವು ಮಗುವಿನ ಸ್ನೇಹಿತರಾಗಿ ಉಳಿದಿದ್ದರೆ, ಅವರು ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಕಥೆಗಳನ್ನು ನಿಮ್ಮಲ್ಲಿ ಹೇಳುತ್ತಾರೆ.


3. ಮಕ್ಕಳನ್ನು ತುಂಬಾ ಕಟ್ಟುನಿಟ್ಟಾಗಿಸಬೇಡಿ: 
ಕಟ್ಟುನಿಟ್ಟಾದ ಪೋಷಕರ ಕಾರಣದಿಂದಾಗಿ, ಮಗು ಸುಳ್ಳು ಹೇಳಲು ಶುರು ಮಾಡಬಹುದು. ನೀವು ಪ್ರತಿಯೊಂದು ವಿಚಾರಕ್ಕೂ ಅವರನ್ನು ಗದರಿಸಿದರೆ, ಅವರು ತನ್ನ ದಿನಚರಿಯನ್ನು ನಿಮ್ಮಿಂದ ದೂರ ಮಾಡಲು ಪ್ರಾರಂಭಿಸಬಹುದು. ಅಷ್ಟೇ ಅಲ್ಲದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸುಳ್ಳು ಹೇಳಲು ಪ್ರಾರಂಭಿಸುವ ಸಾಧ್ಯತೆಯಿದೆ. ಹೀಗಾಗಿ ಮಕ್ಕಳ ವಿಚಾರದಲ್ಲಿ ಭಾವನಾತ್ಮಕ ನಿಲುವನ್ನು ತೆಗೆದುಕೊಳ್ಳಿ.


4. ಮಕ್ಕಳಿಗೆ ಎಲ್ಲವನ್ನೂ ನಿಷೇಧಿಸಬೇಡಿ: 
ಮಗುವಿಗೆ ಯಾವುದೇ ಆಸೆ ಇದ್ದರೆ, ಅದನ್ನು ಮೊದಲು ತನ್ನ ಹೆತ್ತವರಿಗೆ ಹೇಳುತ್ತಾರೆ. ಅನೇಕ ಬಾರಿ ನಾವು ಅವರ ಮಾತುಗಳನ್ನು ನಿರ್ಲಕ್ಷಿಸುತ್ತೇವೆ ಅಥವಾ ನಂಬುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮಗು ಹಠಮಾರಿಯಾಗಲು ಪ್ರಾರಂಭಿಸುತ್ತದೆ. ನಿಮ್ಮಿಂದ ದೂರವಾಗುತ್ತದೆ. ಹೀಗಾಗಿ ಅದನ್ನು ನೇರವಾಗಿ ನಿರಾಕರಿಸುವ ಬದಲು, ಅದರ ಬಗ್ಗೆ ಚೆನ್ನಾಗಿ ವಿವರಿಸಿ. ಆಗ ಮಾತ್ರ ಅವರು ನಿಮ್ಮ ಮಾತುಗಳನ್ನು ಕೇಳಲು ಸಾಧ್ಯ.


5. ಮಗುವಿನ ಸ್ನೇಹಿತರ ಬಗ್ಗೆ ತಿಳಿದುಕೊಳ್ಳಿ: 
ನಿಮ್ಮ ಮಗುವಿನ ಸ್ನೇಹಿತರು ಮತ್ತು ಉತ್ತಮ ಸ್ನೇಹಿತರು ಯಾರು ಎಂಬುದರ ಕುರಿತು ನೀವು ಸಂಪೂರ್ಣವಾಗಿ ತಿಳಿದಿರಬೇಕು. ಜನರ ಸಹವಾಸದಲ್ಲಿ ನಿಮ್ಮ ಮಗು ಹೇಗಿದೆ? ಎಂಬುದನ್ನು ಅರ್ಥೈಸಿಕೊಳ್ಳಿ. ಅಂತಹ ವಿಷಯಗಳು ತಿಳಿದಿದ್ದರೆ, ನೀವು ಮಕ್ಕಳನ್ನು ತಪ್ಪು ಸಹವಾಸದಲ್ಲಿ ಬೀಳದಂತೆ ತಡೆಯಬಹುದು. 


ಇದನ್ನು ಓದಿ: KCET 2022 ಪರೀಕ್ಷೆಗೆ ಹಿಜಾಬ್, ಮಂಗಲ ಸೂತ್ರ ಹಾಕೊಂಡು ಬಂದ್ರೆ No ಎಂಟ್ರಿ! 


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ