ನವದೆಹಲಿ: Summer Drinks Recipe - ಬೇಸಿಗೆ ಕಾಲದಲ್ಲಿ (Summer Drinks Recipe) ಕಬ್ಬಿನ ಹಾಲು ಅಥವಾ ಕಬ್ಬಿನ ರಸ ಸೇವನೆ ಮಾಡುವುದು ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ. ಆದರೆ, ಕೊರೊನಾ ಕಾಲದಲ್ಲಿ (Corona Cases In India) ಮಾರುಕಟ್ಟೆಗೆ ಹೋಗಿ ಕಬ್ಬಿನ ರಸ ಸೇವಿಸುವುದು ಸುಲಭದ ಮಾತಲ್ಲ. ಹೀಗಾಗಿ ಈ ವರ್ಷ ಮನೆಯಲ್ಲಿಯೇ ಇದ್ದುಕೊಂಡು ಕಬ್ಬಿಲ್ಲದೆ ಸ್ವಾದಿಷ್ಟವಾದ ಕಬ್ಬಿನ ರಸ (Sugarcane Juice) ಹೇಗೆ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಕಬ್ಬಿಲ್ಲದೆ ತಯಾರಿಸಬಹುದು ಕಬ್ಬಿಣ ರಸ
ಕೊರೊನಾ ಕಾಲದಲ್ಲಿ ಮಾರುಕಟ್ಟೆಯಲ್ಲಿ ಕಬ್ಬಿನ ಹಾಲು ಸಿಗುವುದು ಸುಲಭದ ಮಾತಲ್ಲ. ಹೀಗಿರುವಾಗ ಮನೆಯಲ್ಲಿಯೇ ಕಬ್ಬಿಲ್ಲದೆ ಮತ್ತು ಯಂತ್ರವಿಲ್ಲದೆ ಕಬ್ಬಿನ ರಸ ಹೇಗೆ ತಯಾರಾಗಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿಯೂ ಕೂಡ ಉದ್ಭವಿಸಿರಬಹುದು. ಆದರೆ, ಇದು ತುಂಬಾ ಸುಲಭವಾಗಿದೆ. ಮನೆಯಲ್ಲಿಎ ಇರುವ 5 ವಸ್ತುಗಳನ್ನು ಬಳಸಿ ಸುಲಭವಾಗಿ ನೀವು ಕಬ್ಬಿನ ರಸವನ್ನು ತಯಾರಿಸಬಹುದು.


ಇದನ್ನೂ ಓದಿ- Sugarcane Juice: ಕಬ್ಬಿನ ಹಾಲಿನಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು: ಇಲ್ಲಿದೆ ಅದರ ಪ್ರಯೋಜನಗಳು!


ಕಬ್ಬಿನ ರಸ ತಯಾರಿಸಲು ಬೇಕಾದ ಸಾಮಗ್ರಿ (Sugarcane Juice Ingredients)
>> ಅರ್ಧ ಕಿಲೋ ಬೆಲ್ಲ
>>ಕೊತಂಬರಿ ಸೊಪ್ಪು
>>ಪುದಿನಾ
>> ಬ್ಲಾಕ್ ಸಾಲ್ಟ್
>>ನಿಂಬೆ ಹಣ್ಣು


ಇದನ್ನೂ ಓದಿ- ಬೇಸಿಗೆಯಲ್ಲಿ ಕಬ್ಬಿನ ರಸ..! ಆರೋಗ್ಯಕ್ಕಾಗುವ 5 ಮಹಾಪ್ರಯೋಜನ ಏನು ?


ಕಬ್ಬಿನ ಹಾಲು ತಯಾರಿಸುವ ವಿಧಾನ (Sugarcane Juice Recipe)
1. ಕಬ್ಬಿನಿಂದಲೇ ಬೆಲ್ಲ ತಯಾರಾಗುತ್ತದೆ ಎಂಬ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಹೀಗಾಗಿ ಬೆಲ್ಲದಿಂದಲೂ ಕೂಡ ನೀವು ಕಬ್ಬಿನ ರಸ ತಯಾರಿಸಬಹುದು. ಇದಕ್ಕಾಗಿ ಮೊದಲು ನೀವು ಬೆಲ್ಲವನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ.


2. ಬಳಿಕ ಬೆಲ್ಲವನ್ನು ಅರ್ಧಗಂಟೆ ನೀರಿನಲ್ಲಿ ಕರಗಿಸಿ. ಬಳಿಕ ಬೆಲ್ಲದ ನೀರನ್ನು ಸರಿಯಾಗಿ ಕಡೆಯಿರಿ. ಬೆಲ್ಲದಲ್ಲಿರುವ ಯಾವುದೇ ರೀತಿಯ ಕಸ ತೆಗೆದುಹಾಕಲು ಇದನ್ನು ಸೋಸಿ.


3. ಈಗ ಮಿಕ್ಸಿ ಜಾರ್ ನಲ್ಲಿ ಪುದಿನಾ ಎಲೆಗಳು, ಕೊತಂಬರಿ ಸೊಪ್ಪು, ನಿಂಬೆ ಹಣ್ಣಿನ ರಸ, ಬ್ಲಾಕ್ ಸಾಲ್ಟ್ ಹಾಕಿ ಬ್ಲೆಂಡ್ ಮಾಡಿ. ಬಳಿಕ ಬೆಲ್ಲದ ನೀರನ್ನು ಹಾಕಿ ಮತ್ತೊಮ್ಮೆ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ


4. ಈಗ ಅದನ್ನು ಸರಿಯಾಗಿ ಸೋಸಿ. ಇದರಿಂದ ಅದರಲ್ಲಿರುವ ಕೊತಂಬರಿ ಅಥವಾ ಪುದಿನಾ ಭಾಗ ಸ್ವಚ್ಛವಾಗಲಿದೆ. ಹಾಗೂ ರಸದ ರುಚಿ ಮತ್ತಷ್ಟು ಹೆಚ್ಚಾಗಲಿದೆ.


5. ಮನೆಯಲ್ಲಿ ತಯಾರಿಸಲಾಗುವ ಬೆಲ್ಲದ ರಸದಲ್ಲಿ ನೊರೆ ತರಲು ಪುನಃ ರಸವನ್ನು ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ


6. ಈಗ ಅದಕ್ಕೆ ಐಸ್ ತುಣುಕುಗಳನ್ನು ಬೆರೆಸಿ ರಸವನ್ನು ಸರ್ವ ಮಾಡಿ.


ಇದನ್ನೂ ಓದಿ-ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ತಪ್ಪದೇ ಈ ಜ್ಯೂಸ್ ಕುಡಿಯಿರಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.