ಬೆಂಗಳೂರು: ಸುಡು ಬಿಸಿಲು ನೆತ್ತಿ ಸುಡುತ್ತಿದೆ. ಎಷ್ಟು ನೀರು ಕುಡಿದರೂ ದಾಹ ಕಡಿಮೆ ಆಗುತ್ತಿಲ್ಲ. ಬಿಸಿಲ ಝಳಕ್ಕೆ ಜೀವ ಸೋತು ಸುಣ್ಣವಾಗುತ್ತಿದೆ. ಹೊಟ್ಟೆಗೆ ಊಟ ಹೋಗುತ್ತಿಲ್ಲ. ನೀರು ಕುಡಿದೇ ಹೊಟ್ಟೆ ತುಂಬುತ್ತಿದೆ. ಇವೆಲ್ಲಾ ವೈಶಾಖದ ಸಾಮಾನ್ಯ ಸಮಸ್ಯೆ. ಈ ಸಮಸ್ಯೆಗೊಂದು ಪರಿಹಾರ ಕಬ್ಬಿನ ಹಾಲು (Sugarcane juice). ಕಬ್ಬಿನ ಹಾಲನ್ನು ಕಡೆಗಣಿಸಬೇಡಿ. ಅದರಲ್ಲಿ ಹೇರಳವಾಗಿ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೇಶಿಯಂ, ಕಬ್ಬಿಣದ ಅಂಶ, ಸತು ಮತ್ತು ಅಪಾರ ಪ್ರಮಾಣದ ಅಮಿನೋ ಆಮ್ಲ ಸಮೃದ್ದವಾಗಿ ಸಿಗುತ್ತದೆ. ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿದರೆ ದೇಹ ತಣಿದು, ಆರೋಗ್ಯ (Health) ಸಮಸ್ಥಿತಿಗೆ ಬರುತ್ತದೆ. ಕಬ್ಬಿನ ಹಾಲು ಕುಡಿದರೆ ಲಾಭ ಏನು ನೋಡೋಣ.
1. ಕ್ಷಣಾರ್ಧದಲ್ಲಿ ದೇಹಕ್ಕೆ ಶಕ್ತಿ ನೀಡುತ್ತದೆ.
ಕಬ್ಬಿನಲ್ಲಿ ನೈಸರ್ಗಿಕ ಸುಕ್ರೋಸ್ (Sucrose) ಇರುತ್ತದೆ. ಸುಕ್ರೋಸ್ ದೇಹಕ್ಕೆ ತತ್ ಕ್ಷಣದಲ್ಲಿ ಎನರ್ಜಿ (Energy) ನೀಡುತ್ತದೆ. ಬಿಸಲ ತಾಪಕ್ಕೆ ನೀರು ಕುಡಿಯುವ ಬದಲು ಕಬ್ಬಿನ ಹಾಲು (Sugarcane juice) ಕುಡಿದರೆ , ತಕ್ಷಣ ದೇಹಕ್ಕೆ ಶಕ್ತಿ ಸಿಗುತ್ತದೆ.
ಇದನ್ನೂ ಓದಿ : Coronavirus: ಕರೋನಾದಿಂದ ರಕ್ಷಿಸಬಹುದಾದ ಹ್ಯಾಂಡ್ ಸ್ಯಾನಿಟೈಜರ್‌ಗಳಿಂದ ಕ್ಯಾನ್ಸರ್ ಅಪಾಯ
2. ಲಿವರ್ ಆರೋಗ್ಯಕ್ಕೆ ರಾಮಬಾಣ
ನಿಮಗೆ ಗೊತ್ತಿರಬಹುದು. ಅರಸಿನ ಕಾಮಲೆ (Jaundice) ರೋಗ ಬಂದಾಗ ಕಬ್ಬಿನ ಹಾಲು ಕುಡಿಸಿ ಎಂದು ಆಯುರ್ವೇದ (Ayurveda) ಹೇಳುತ್ತದೆ. ಇದಕ್ಕೆ ಕಾರಣ ಇಷ್ಟೇ. ಕಬ್ಬಿನ ಹಾಲು ಲಿವರ್ ನ್ನು ಸ್ಟ್ರಾಂಗ್ (Liver Strong) ಆಗಿಡುತ್ತದೆ. ಕಬ್ಬಿನ ಸಾಕಷ್ಟು ಆಂಟಿಆಕ್ಸಿಡೆಂಟ್ಸ್ ಇರುತ್ತವೆ. ಇವು ಲಿವರ್ ಗೆ ಸೋಂಕು ಉಂಟಾಗದಂತೆ ತಡೆಯುತ್ತದೆ.
3. ದಂತ ಕ್ಷಯ ನಿವಾರಿಸುತ್ತದೆ
ಕಬ್ಬಿನ ಹಾಲಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ ಮತ್ತು ಪಾಸ್ಪರಸ್ ಅಂಶ ಇರುತ್ತದೆ. ಇದನ್ನು ಕುಡಿದರೆ, ಹಲ್ಲಿನ ಎನಾಮಲ್ ಸ್ಟ್ರಾಂಗ್ ಆಗುತ್ತದೆ. ದಂತ ಕ್ಷಯವಾಗುವುದಿಲ್ಲ (Cavities). ಅದಕ್ಕೂ ಮುಖ್ಯವಾಗಿ ಬಾಯಿಯ ದುರ್ವಾಸನೆ (Bad Breath) ನಿವಾರಿಸುತ್ತದೆ.
ಇದನ್ನೂ ಓದಿ : Turmeric for TB : ನಿಮಗೆ ಗೊತ್ತಿದೆಯಾ ಟಿಬಿ ರೋಗಕ್ಕೂ ರಾಮಬಾಣ ಅಡುಗೆ ಮನೆ ಅರಿಶಿನ
4. ಕಿಡ್ನಿಯಲ್ಲಿ ಸ್ಟೋನ್ ಉಂಟಾಗುವುದಿಲ್ಲ.
ಯುರಿನರಿ ಟ್ರಾಕ್ ಇನ್ಪೆಕ್ಷನ್ (UTI) ಅಥವಾ ಮೂತ್ರನಾಳದ ಸೋಂಕು ತಡೆಗಟ್ಟುತ್ತದೆ ಕಬ್ಬಿನ ಹಾಲು. ಮೂತ್ರ ಮಾಡುವಾಗ ಉರಿಯುತ್ತಿದ್ದರೆ, ಖಂಡಿತಾ ಕಬ್ಬಿನ ಹಾಲು ಕುಡಿಯಿರಿ. ಕಿಡ್ನಿ ಸ್ಟೋನ್ (Kidney Stone) ಆಗುವುದನ್ನೂ ತಡೆ ಗಟ್ಟುತ್ತದೆ ಕಬ್ಬಿನ ಹಾಲು.
5. ಹೊಟ್ಟೆ ಹಸಿವು ಹೆಚ್ಚಿಸುತ್ತದೆ.
ಊಟ ಸೇರದೇ ಇರುವುದು ಬೇಸಿಗೆ ಸಾಮಾನ್ಯ ಸಮಸ್ಯೆ. ಆದರೆ, ಕಬ್ಬಿನ ಹಾಲಿನಲ್ಲಿ ಸಾಕಷ್ಟು ಪೊಟ್ಯಾಶಿಯಂ ಮತ್ತು ಫೈಬರ್ ಅಂಶ ಇರುತ್ತದೆ. ಇದರಿಂದ ಹೊಟ್ಟೆಯಲ್ಲಿ ಯಾವುದೇ ರೀತಿಯ ಸೋಂಕು ಉಂಟಾಗುವುದಿಲ್ಲ ಜೊತೆಗೆ ಜೀರ್ಣಕ್ರೀಯ ಸರಾಗವಾಗಿ ನಡೆಯುತ್ತದೆ. ಹಾಗಾಗಿ ಹಸಿವು ಹೆಚ್ಚುತ್ತದೆ. ಮಲಬದ್ದತೆ (Constipation) ಕೂಡಾ ಕಡಿಮೆ ಆಗುತ್ತದೆ.
ಇದನ್ನೂ ಓದಿ : Childhood Obesity : ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ ನಿಯಂತ್ರಣಕ್ಕೆ ಈ ಕ್ರಮಗಳನ್ನು ಅನುಸರಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.