ಬೆಂಗಳೂರು : ಜ್ಯೋತಿಷ್ಯದ ಪ್ರಕಾರ (Astrology), ಗ್ರಹಗಳ ಸಂಕ್ರಮಣ ಅಥವಾ  ಉದಯ ಭೂಮಿ ಮತ್ತು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ (Guru Transit). ದೇವತೆಗಳ ಗುರು  ಬೃಹಸ್ಪತಿ ಏಪ್ರಿಲ್ 13 ರಂದು ತನ್ನ ರಾಶಿಯನ್ನು ಬದಲಿಸಲಿದ್ದಾರೆ. ಆ ದಿನ ಗುರು ಗ್ರಹ   ಮೀನ ರಾಶಿಯನ್ನು ಪ್ರವೇಶಿಸಲಿದೆ (Pisces). ಇದು ಎಲ್ಲಾ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯದಲ್ಲಿ, (Astrology) ಗುರುವು ಜ್ಞಾನ, ಬೆಳವಣಿಗೆ, ಶಿಕ್ಷಣ, ಮಕ್ಕಳು, ಸಂಪತ್ತು, ದಾನ ಮತ್ತು ಸದ್ಗುಣಗಳಿಗೆ ಸಂಬಂಧಿಸಿದ್ದಾಗಿದೆ. ಈ ಕಾರಣದಿಂದಾಗಿ ಗುರುವಿನ ರಾಶಿ  ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಇರುತ್ತದೆ (Guru Transit effects). ಆದರೆ ಈ ಸಂಕ್ರಮಣದಿಂದ ಮೂರು ರಾಶಿಗಳು ವಿಶೇಷ ಲಾಭವನ್ನು ಪಡೆಯಲಿವೆ. 


ಇದನ್ನೂ ಓದಿ : ಏಪ್ರಿಲ್ ನಲ್ಲಿ ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು! ಪ್ರತಿ ಕೆಲಸದಲ್ಲಿಯೂ ಸಿಗಲಿದೆ ಯಶಸ್ಸು


ವೃಷಭ (Taraus) : ಗುರುಗ್ರಹದ ಸಂಚಾರವು ಈ ರಾಶಿಯವರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ (Guru transit). ಗುರುವು ಈ ರಾಶಿಯ 11 ನೇ ಮನೆಯಲ್ಲಿ ಸಾಗುತ್ತಾನೆ. ಇದನ್ನು ಆದಾಯ ಮತ್ತು ಲಾಭದ ಸ್ಥಳ ಎಂದು ಕರೆಯಲಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ನಿಮ್ಮ ಆದಾಯವು ಹೆಚ್ಚಾಗಬಹುದು. ಅಲ್ಲದೆ ಹೊಸ ಆದಾಯದ ಮೂಲಗಳು  ಸೃಷ್ಟಿಯಾಗಬಹುದು. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಕೆಲಸದ ಶೈಲಿಯು ಸಹ ಸುಧಾರಿಸುತ್ತದೆ. ನಿಮ್ಮ ಕೆಲಸದಿಂದಾಗಿ ನಿಮ್ಮ ಮೇಲಾಧಿಕಾರಿ ಸಂತೋಷಗೊಳ್ಳುತ್ತಾರೆ.  


ಮಿಥುನ (Gemini): ಗುರುವು ನಿಮ್ಮ ಜಾತಕದ ಹತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ, ಇದನ್ನು ಉದ್ಯೋಗ ಮತ್ತು ಕರ್ಮದ ಮನೆ ಎಂದು ಕರೆಯಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ನಿಮ್ಮ ಕೆಲಸದಲ್ಲಿ  ಬಡ್ತಿ ಪಡೆಯಬಹುದು (Guru Transit effects). ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯಬಹುದು. ಹೊಸ ವ್ಯಾಪಾರ ಸಂಬಂಧಗಳು ರೂಪುಗೊಳ್ಳಬಹುದು ಮತ್ತು ವ್ಯಾಪಾರವನ್ನು ವಿಸ್ತರಿಸಬಹುದು. ಅದೇ ಸಮಯದಲ್ಲಿ, ಮಾರ್ಕೆಟಿಂಗ್ ಮತ್ತು ಮಾಧ್ಯಮ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವವರಿಗೆ, ಈ ಸಮಯವು ಉತ್ತಮವಾಗಿರುತ್ತದೆ.


ಇದನ್ನೂ ಓದಿ : Chaitra Navaratri 2022: ದೇವಿ ದುರ್ಗೆಯ ಆಗಮನ-ನಿರ್ಗಮನದ ಸವಾರಿ ವಿನಾಶ ಸೂಚಿಸುತ್ತಿದೆ


ಕರ್ಕ ರಾಶಿ (Cancer) : ಈ ಸಂಕ್ರಮಣವು ನಿಮ್ಮ ರಾಶಿಚಕ್ರ ಚಿಹ್ನೆಗೆ ಉತ್ತಮವಾಗಿರುತ್ತದೆ. ಗುರುವು ನಿಮ್ಮ ಒಂಬತ್ತನೇ ಮನೆಯಲ್ಲಿ ಸಾಗುತ್ತಾನೆ. ಇದು ಅದೃಷ್ಟ ಮತ್ತು ವಿದೇಶಿ ಪ್ರಯಾಣದ ಮನೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ (Guru Rashi Parivarthane). ಇದರೊಂದಿಗೆ ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳಲಿವೆ.   ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಬೆಳೆಸಬೇಕಾಗಿ ಬರಬಹುದು. ಮತ್ತೊಂದೆಡೆ, ಆಹಾರ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದ ವ್ಯಾಪಾರ ಹೊಂದಿರುವ ಜನರು, ಈ ಸಮಯದಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.