ಬೆಂಗಳೂರು  : Foods to Avoid in Kidney Disease : ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದನ್ನು  ಆರೋಗ್ಯವಾಗಿಡುವುದು ಬಹಳ ಮುಖ್ಯ. ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು, ನೀವು ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಬೇಕು. ಅಷ್ಟು ಮಾತ್ರವಲ್ಲ ಕೆಲವು ವಿಷಯಗಳ ಬಗ್ಗೆ  ಕಾಳಜಿ ವಹಿಸಬೇಕು. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತವೆ. ಅವುಗಳಲ್ಲಿ ಒಂದು ರಕ್ತವನ್ನು ಶುದ್ಧೀಕರಿಸುವುದು ಮತ್ತು ದೇಹದಿಂದ ತ್ಯಾಜ್ಯವನ್ನು ಹೊರಹಾಕುವುದು. ದೇಹವನ್ನು ಸದೃಢವಾಗಿಡಲು ಈ ಎರಡೂ ಕೆಲಸಗಳು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಆದರೂ,  ನಿಮ್ಮ ಮೂತ್ರಪಿಂಡಗಳಿಗೆ ಹಾನಿ ಮಾಡುವ ಕೆಲವು ಆರೋಗ್ಯ ಸಮಸ್ಯೆಗಳಿವೆ.  ಅವುಗಳಲ್ಲಿ ಒಂದು ಮಧುಮೇಹ. ಆದ್ದರಿಂದ ನಿಮ್ಮ ಕಿಡ್ನಿಯ ಆರೋಗ್ಯನ್ನು ಕಾಪಾಡಬೇಕಾದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕು. ಹಾಗಿದ್ದರೆ, ಮೂತ್ರಪಿಂಡಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ.  ಳ


ಇದನ್ನೂ ಓದಿ : ರಾತ್ರಿ ಮಲಗುವ ಮುಂಚೆ ಹಾಲು ಕುಡಿಯುತ್ತೀರಾ? ಮೊದಲು ಈ ಸುದ್ದಿ ಓದಿ


ರಕ್ತದಲ್ಲಿನ ಸಕ್ಕರೆ ಮಟ್ಟವು ಮೂತ್ರಪಿಂಡಗಳಿಗೆ ಹೇಗೆ ಹಾನಿ ಮಾಡುತ್ತದೆ?
ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣವು, ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದರ ಹಿಂದೆ ಹಲವು ಕಾರಣಗಳಿವೆ. ರಕ್ತದಲ್ಲಿನ  ಅಧಿಕ  ಸಕ್ಕರೆ ಮಟ್ಟವು ನಿಮ್ಮ ಮೂತ್ರಪಿಂಡಗಳಲ್ಲಿ ಕಂಡುಬರುವ ರಕ್ತನಾಳಗಳ ಗುಂಪನ್ನು ಕ್ರಮೇಣ ಹಾನಿಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವುದರಿಂದ, ರಕ್ತನಾಳಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ನಮ್ಮ ಮೂತ್ರಪಿಂಡಗಳು ರಕ್ತವನ್ನು ಸರಿಯಾಗಿ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾದಾಗ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಹಾನಿ ಮುಂತಾದ ಸಮಸ್ಯೆ ಎದುರಾಗುತ್ತದೆ. 


ನಿಮ್ಮ ಮೂತ್ರಪಿಂಡಗಳನ್ನು ಹೇಗೆ ರಕ್ಷಿಸುವುದು ?
ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ಇದಕ್ಕಾಗಿ ಅವರು ತಮ್ಮ ಜೀವನಶೈಲಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬೇಕಾಗುತ್ತದೆ:


ಇದನ್ನೂ ಓದಿ : Figs For Bones: ಮೂಳೆಗಳ ಬಲವರ್ಧನೆಗೆ ಈ ಹಣ್ಣನ್ನು ಟ್ರೈ ಮಾಡಿ, ಸೇವಿಸುವ ಸರಿಯಾದ ವಿಧಾನ ಇಲ್ಲಿದೆ


1- ಆಹಾರ ಮತ್ತು ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
2-ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.
3-ಒತ್ತಡವನ್ನು ಕಡಿಮೆ ಮಾಡುವುದು.
4- ನಿಯಮಿತವಾಗಿ ವ್ಯಾಯಾಮ ಮಾಡುವುದು.
5- ಯೋಗ ಮಾಡುವುದು.
6-ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಗತ್ಯ.
7- ಹೊಟ್ಟೆ ನೋವಿನ ದೂರು ಇದ್ದರೆ, ಸೋನೋಗ್ರಫಿ ಮತ್ತು IgA ನೆಫ್ರೋಪತಿ ಪರೀಕ್ಷೆಯನ್ನು ಮಾಡಬೇಕು.


ಈ ಆಹಾರಗಳಿಂದ ದೂರವಿರಿ
1- ಕನಿಷ್ಠ ಉಪ್ಪನ್ನು ಸೇವಿಸಿ.
2-ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರಗಳಿಂದ ದೂರವಿರಿ.
3-ಹಾಲು, ಮೊಸರು ಮತ್ತು ಚೀಸ್ ನಂತಹ ರಂಜಕ-ಭರಿತ ಆಹಾರಗಳನ್ನು ಸೇವಿಸಬೇಡಿ. 
4-ಪ್ಯಾಕ್ಡ್  ಆಹಾರಗಳನ್ನು ಸೇವಿಸಬೇಡಿ.
5-ಉಪ್ಪಿನಕಾಯಿ, ಒಣ ಮೀನು ಮತ್ತು ತಂಪು ಪಾನೀಯಗಲಿಒಂದ ದೂರವಿರಿ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.