ಬೆಂಗಳೂರು : ಕಿಡ್ನಿ ಸಮಸ್ಯೆಯಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯೂ ಒಂದು . ಕಿಡ್ನಿ ಸ್ಟೋನ್ (Kidney Stone) ಸಮಸ್ಯೆ ಎದುರಾದರೆ ವ್ಯಕ್ತಿಯು ಭಯಂಕರ ನೋವನ್ನು ಅನುಭವಿಸಬೇಕಾಗುತ್ತದೆ. ಹೀಗಿರುವಾಗ ವ್ಯಕ್ತಿಯು ತನ್ನ ಆಹಾರಕ್ರಮದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಕಿಡ್ನಿ ಸಮಸ್ಯೆ ಇದ್ದರೆ ಇಲ್ಲಿ ನೀಡಿರುವ ಕೆಲವು ಜ್ಯೂಸ್‌ಗಳ ಸಹಾಯದಿಂದ ನೀವು ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
Kidney Stone ಸಮಸ್ಯೆಯ ಪರಿಹಾರಕ್ಕೆ ಜ್ಯೂಸ್ :
ನೀವು ಕಿಡ್ನಿ ಸ್ಟೋನ್ (Kidney Stone) ಸಮಸ್ಯೆಗೆ ಒಳಗಾಗಿದ್ದರೆ, ಆಹಾರದಲ್ಲಿ ಮೂರು ವಿಧದ ಜ್ಯೂಸ್ ಅನ್ನು ಸೇರಿಸಬಹುದು (Juice for Kidney stone). ಈ ಮೂಲಕ ನೋವು ಸೇರಿದಂತೆ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು.
ಇದನ್ನೂ ಓದಿ : Sleeping Tips: ಕೇವಲ 4 ಗಂಟೆಗಳಲ್ಲಿ 8 ಗಂಟೆಗಳ ಸಂಪೂರ್ಣ ಮತ್ತು ಫ್ರೆಶ್ ನಿದ್ರೆ ಪಡೆಯಲು ದಿಗ್ಗಜರು ಬಳಸುವ ಟೆಕ್ನಿಕ್ ಇದು
3. ಟೊಮೆಟೊ ರಸ :
ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಟೊಮೆಟೊ (Tomato) ರಸವು ತುಂಬಾ ಉಪಯುಕ್ತವಾಗಿದೆ. ಎರಡು ಟೊಮೆಟೊಗಳನ್ನು ಚೆನ್ನಾಗಿ ತೊಳೆದು ಅದನ್ನು ಪೇಸ್ಟ್ ಮಾಡಿ. ಹೀಗೆ ಮಾಡುವಾಗ ಬೀಜಗಳನ್ನು ತೆಗೆಯಲು ಮರೆಯಬೇಡಿ. ನಂತರ ಈ ಪೇಸ್ಟ್ ಗೆ ಉಪ್ಪು ಮತ್ತು ಕರಿಮೆಣಸಿನ (Pepper) ಪುಡಿಯನ್ನು ಬೆರೆಸಿ ಸೇವಿಸಬೇಕು. ತಯಾರಿಸಿದ ಮಿಶ್ರಣವನ್ನು ಫ್ರಿಜ್‌ನಲ್ಲಿ ಇರಿಸಿ ಅದನ್ನು ಜ್ಯೂಸ್ ರೂಪದಲ್ಲಿ ಸೇವಿಸಬಹುದು.
2. ನಿಂಬೆ ರಸ :
ನಿಂಬೆಯೊಳಗೆ (Lemon) ಸಿಟ್ರಿಕ್ ಆಮ್ಲವಿದೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇದ್ದಾಗ, ನಿಂಬೆ ರಸವನ್ನು ಸೇವಿಸಿದರೆ, ಈ ಸಮಸ್ಯೆಯನ್ನು ನಿವಾರಿಸಬಹುದು. ಒಂದು ಬಟ್ಟಲಿನಲ್ಲಿ ಮೊಸರನ್ನು (curd)ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ಈಗ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಅದನ್ನು ಸೇವಿಸಿ. ಈ ರೀತಿ ಮಾಡುವುದರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು.
ಇದನ್ನೂ ಓದಿ : Healthy Heart: Heart Attack ಗೂ ಮುನ್ನ ಕಾಣಿಸಿಕೊಳ್ಳುವ ಈ 6 ಸಂಕೇತಗಳು ನಿಮಗೂ ತಿಳಿದಿರಲಿ, ಇಗ್ನೋರ್ ಮಾಡ್ಬೇಡಿ
3. ತುಳಸಿ ರಸ :
ತುಳಸಿಯಿಂದ (Tulsi) ತಯಾರಿಸಿದ ಜ್ಯೂಸ್ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೋಗಲಾಡಿಸಲು ಬಹಳ ಉಪಯುಕ್ತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ತುಳಸಿ ಎಲೆಗಳ ರಸವನ್ನು ತೆಗೆದು, ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ. ಬೆಳಿಗ್ಗೆ ಮತ್ತು ಸಂಜೆ ಈ ಮಿಶ್ರಣವನ್ನು ಸೇವಿಸಿ. ಹೀಗೆ ಮಾಡುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.