ಸಾಮಾನ್ಯವಾಗಿ ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಆದರೆ ಮದ್ಯಪ್ರಿಯರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಹೌದು ಮದ್ಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ ಎಂದು ಸಂಶೋಧನೆ ಹೇಳಿದೆ. ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತನ್ನು ನೆನಪಿನಲ್ಲಿಡಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಂದೇ ಈ ಅಭ್ಯಾಸ ಬದಲಿಸಿ ಕೇವಲ 3 ತಿಂಗಳಲ್ಲಿ Belly Fat ಕರಗಿಸಿ


ಅನೇಕ ಪಾರ್ಟಿಗಳನ್ನು ಆಯೋಜನೆ ಮಾಡುವ ಸಂದರ್ಭದಲ್ಲಿ ಮದ್ಯ ಕೌಂಟರ್ ಗಳನ್ನು ಮಾಡಿರಲಾಗುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ಸ್ವತಃ ನಾವೇ ತಂದು ಗೆಳಯರ ಜೊತೆ ಎಂಜಾಯ್ ಮಾಡುತ್ತೇವೆ. ಇನ್ನು ಈ ಸಂದರ್ಭದಲ್ಲಿ ಹೆಚ್ಚಾಗಿ ನಾವು ಒಲವು ತೋರಿಸೋದು ಬಿಯರ್ ಮೇಲೆ. ಈ ಬಿಯರ್ ಮಿತಿಯಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಂತೆ. ಅದರಲ್ಲೂ ಅನೇಕ ರೋಗದಿಂದ ಮುಕ್ತಿಯೂ ಸಿಗುತ್ತದೆ.


ಮಹಿಳೆಯರು ಸಹ ಇತ್ತೀಚಿನ ದಿನಗಳಲ್ಲಿ ಮದ್ಯಪಾನದ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇನ್ನು ವಾರಕ್ಕೆ ಎರಡು ಬಾರಿ ಬಿಯರ್ ಸೇವನೆ ಮಾಡುವ ಜನರಿಗೆ ಹೃದಯಾಘಾತವಾಗುವ ಸಂಭವ ಶೇ.30ರಷ್ಟು ಕಡಿಮೆ ಎಂದು ಸಂಶೋಧನೆಯೊಂದು ಹೇಳಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಸೇವಿಸಿದರೆ ಸಮಸ್ಯೆ ಎದುರಾಗುತ್ತದೆ.


ಬಿಯರ್‌ನಲ್ಲಿ ವಿಟಮಿನ್ ಬಿ6 ಹೆಚ್ಚಾಗಿರುವುದರಿಂದ. ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುವ ಹೋಮೋಸಿಸ್ಟೈನ್ ಎಂಬ ಹಾನಿಕಾರಕ ರಾಸಾಯನಿಕವನ್ನು ದೇಹದಲ್ಲಿ ನಿರ್ಮಿಸುವುದನ್ನು ತಡೆಯುತ್ತದೆ.


ಇವಿಷ್ಟೇ ಅಲ್ಲದೆ, ಬಿಯರ್ ಸೇವಿಸುವುದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ. ಆದರೆ ಮಿತವಾಗಿ ಕುಡಿಯಬೇಕು ಎಂಬುದು ಸೂಚನೆ. ಇನ್ನು ಯುರೋಪ್ ಮತ್ತು ಅಮೆರಿಕಾದಲ್ಲಿ ಹೆಚ್ಚಿನ ಜನರು ಸ್ನಾನಕ್ಕೆಂದು ಬಿಯರ್ ಗಳನ್ನು ಬಳಸುತ್ತಾರೆ. ಇದು ನಿದ್ರಾಹೀನತೆಯನ್ನು ಸಮಸ್ಯೆಯನ್ನೂ ಸಹ ಕಡಿಮೆ ಮಾಡುತ್ತದೆ. ಜೊತೆಗೆ ಇದರಿಂದ ಚರ್ಮದ ತ್ವಚ್ಛೆ ಹೊಳೆಯುತ್ತದೆ ಎಂದು ಹೇಳಲಾಗುತ್ತದೆ.  


ಬಿಯರ್ ದೇಹದ ಆರೋಗ್ಯ ಮಾತ್ರವಲ್ಲ, ಕೂದಲಿನ ಆರೈಕೆಗೂ ಉತ್ತಮ. ನಿಮಗೆ ತಿಳಿದಿದೆಯೇ, ಬಿಯರ್ ನ್ನು ಅನೇಕ ಶ್ಯಾಂಪೂಗಳಲ್ಲಿ ಬಳಸಲಾಗುತ್ತದೆ. ಇದರಿಂದ ಕೂದಲು ಸಮೃದ್ಧವಾಗಿರಲು ಸಹಾಯಕವಾಗುತ್ತದೆ.


ಇದನ್ನೂ ಓದಿ: Health Tips : ಈ ತರಕಾರಿಗಳನ್ನು ಹಸಿಯಾಗಿ ತಿಂದ್ರೆ ಕಿಡ್ನಿಸ್ಟೋನ್ ಕಟ್ಟಿಟ್ಟಬುತ್ತಿ


ಬಿಯರ್‌ಗಳಲ್ಲಿರುವ ಕೆಲವೊಂದು ಬಗೆಯ ರಾಸಾಯನಿಕ ಸಂಯುಕ್ತವು ವೈರಾಣು ಪ್ರತಿಬಂಧಕ ಗುಣಲಕ್ಷಣಗಳನ್ನು ಹೊಂದಿದ್ದು, ಇದು ನ್ಯುಮೋನಿಯಗೆ ಕಾರಣವಾಗಬಹುದಾದ ವೈರಾಣುವಿನಿಂದ ರಕ್ಷಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.