Health Tips: ದೇಹದಲ್ಲಿ ಈ ಬದಲಾವಣೆ ಕಂಡುಬಂದರೆ ಮಧ್ಯಪಾನವನ್ನು ತಕ್ಷಣ ನಿಲ್ಲಿಸಿ, ಇಲ್ದಿದ್ರೆ...!
Health Tips: ನೀವು ಹೆಚ್ಚು ಆಲ್ಕೋಹಾಲ್ ಮತ್ತು ಬಿಯರ್ ಅನ್ನು ಸೇವಿಸಲು ಪ್ರಾರಂಭಿಸಿದಾಗ, ದೇಹವು 4 ರೀತಿಯ ಎಚ್ಚರಿಕೆ ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಆ ನಾಲ್ಕು ಎಚ್ಚರಿಕೆಯ ಸಂಕೇತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ
Warning Signs of Drinking Alcohol: ಇತ್ತೀಚಿನ ದಿನಗಳಲ್ಲಿ ಆದಾಯದ ಹೆಚ್ಚಳ ಮತ್ತು ಸೌಲಭ್ಯಗಳ ವಿಸ್ತರಣೆಯಿಂದಾಗಿ ಕುಡಿತ ಒಂದು ಸಾಮಾನ್ಯ ಸಂಗತಿಯಾಗಿ ಮಾರ್ಪಟ್ಟಿದೆ. ಆದರೆ, ಇತರ ವಿಷಯಗಳಂತೆ, ಕುಡಿತದ ವಿಷಯಕ್ಕೆ ಬಂದಾಗ ನೀವು ಅದನ್ನು ಅತಿಯಾಗಿ ಸೇವಿಸಿದರೆ, ಅದರ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಇಂದು ನಾವು ನಿಮಗೆ ದೇಹ ನೀಡುವ ಅಂತಹ ಸಂಕೇತಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಈ ಸಂಕೇತಗಳು ಕಾಣಿಸಿಕೊಂಡರೆ, ಕುಡಿತವನ್ನು ನಿಲ್ಲಿಸಲು ವಿಳಂಬ ಮಾಡಬೇಡಿ, ಇಲ್ಲದಿದ್ದರೆ ನೀವು ಅದಕ್ಕೆ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ನಿದ್ರಾಹೀನತೆ ಎಚ್ಚರಿಕೆಯ ಕರೆಗಂಟೆ
ನಿದ್ರೆ ಮಾಡುವಾಗ ಪದೇ ಪದೇ ನಿಮ್ಮ ನಿದ್ರೆಗೆ ಭಂಗ ಬರುತ್ತಿದ್ದು. ನೀವು ಬಯಸಿದರೂ ನಿಮಗೆ ನಿದ್ರೆ ಬರುತ್ತಿಲ್ಲ ಮತ್ತು ಹಗಲಿನಲ್ಲಿ ನಿಮಗೆ ತಲೆ ಸುತ್ತುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಆಗಾಗ್ಗೆ ಮೂತ್ರ ವಿಸರ್ಜನೆಯ ಸಮಸ್ಯೆ ಕಾಡುತ್ತಿದ್ದರೆ ಮತ್ತು ನೀವು ರಾತ್ರಿಯಲ್ಲಿ ಎಷ್ಟು ಹೊರಳಾಡಿದರೂ ನಿದ್ರೆ ಬರುತ್ತಿಲ್ಲ ಎಂದಾದಲ್ಲಿ ಅದು ನಿಮಗೆ ಎಚ್ಚರಿಕೆಯ ಕರೆಗಂಟೆ. ಇಂತಹ ಪರಿಸ್ಥಿತಿಯಲ್ಲಿ, ತಕ್ಷಣವೇ ಮದ್ಯಪಾನದಿಂದ ದೂರಾಗುವುದು ಬುದ್ಧಿವಂತಿಕೆ.
ಅಧಿಕ ಬಿಪಿ ಮತ್ತು ಮಾನಸಿಕ ಒತ್ತಡ ದೊಡ್ಡ ಸಂಕೇತ
ನೀವು ಮಾನಸಿಕ ಒತ್ತಡದಿಂದ ಸುತ್ತುವರಿದಿದ್ದರೆ ಮತ್ತು ಚಿಂತೆಗಳು ನಿಮ್ಮನ್ನು ಸತಾಯಿಸಲು ಪ್ರಾರಂಭಿಸಿದರೆ. ನಿಮ್ಮ ರಕ್ತದೊತ್ತಡ ಹೆಚ್ಚಾಗಲು ಪ್ರಾರಂಭಿಸುತ್ತದೆ, ಇಂತಹ ಪರಿಸ್ಥಿತಿಯಲ್ಲಿ ನೀವು ಬಿಯರ್ ಮತ್ತು ಆಲ್ಕೋಹಾಲ್ ಅನ್ನು ಆದಷ್ಟು ಬೇಗ ತ್ಯಜಿಸಬೇಕು ಎಂಬುದರ ಸಂಕೇತವಾಗಿದೆ. ವಾಸ್ತವದಲ್ಲಿ, ಬಿಯರ್ ಕುಡಿಯುವುದರಿಂದ ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಮತ್ತು ಆತಂಕ ಹೆಚ್ಚುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಬಿಯರ್ ಮತ್ತು ಆಲ್ಕೋಹಾಲ್ ಅನ್ನು ತ್ಯಜಿಸದಿದ್ದರೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ನಿಮಗೆ ಹೆಚ್ಚಾಗಬಹುದು.
ದೇಹದ ರೋಗನಿರೋಧಕ ಶಕ್ತಿ ಕುಗ್ಗುತ್ತದೆ
ಸಾಮಾನ್ಯವಾಗಿ ಯಾರೂ ಅನಾರೋಗ್ಯಕ್ಕೆ ಒಳಗಾಗಲು ಬಯಸುವುದಿಲ್ಲ. ಆದರೆ, ಒಂದು ವೇಳೆ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಮದ್ಯವು ಇದಕ್ಕೆ ದೊಡ್ಡ ಕಾರಣವಾಗಿರಬಹುದು. ಆರೋಗ್ಯ ತಜ್ಞರ ಪ್ರಕಾರ, ಬಿಯರ್ ಮತ್ತು ಆಲ್ಕೋಹಾಲ್ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಕ್ರಮೇಣ ಕುಗ್ಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವೈದ್ಯರ ಪ್ರಕಾರ, ಮದ್ಯಪಾನ ಮಾಡುವವರ ವೈಯಕ್ತಿಕ ವೈವಾಹಿಕ ಜೀವನವೂ ದೊಡ್ಡ ಪ್ರಮಾಣದಲ್ಲಿ ಹಾಳಾಗುತ್ತದೆ. ಇದೇ ವೇಳೆ ಅವರಲ್ಲಿ HIV ಯಂತಹ ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
ಇದನ್ನೂ ಓದಿ-Women Health Tips: ಸೆಕ್ಸ್ ಬಳಿಕ ಮಹಿಳೆಯರು ಈ 5 ಕೆಲಸಗಳನ್ನು ಮಾಡಬಾರದು, ಇಲ್ದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!
ನಿಮಗೆ ಹಸಿವಿನ ಅನುಭವವಾಗುತ್ತಿಲ್ಲ ಎಂದರೆ ಎಚ್ಚೆತ್ತುಕೊಳ್ಳಿ
ನಿಮ್ಮ ಹಸಿವು ತೊಂದರೆಗೊಳಗಾಗಿದ್ದು, ಏನನ್ನೂ ತಿನ್ನಬೇಕೆಂದು ಅನಿಸಲಿಲ್ಲ. ಬಾಯಿ ಹೆಚ್ಚಾಗಿ ಕಹಿಯಾಗಿದ್ದರೆ ಮತ್ತು ಹೊಟ್ಟೆ ಭಾರವಾಗಿದ್ದರೆ ಅದು ಯಕೃತ್ತಿನ ಸಮಸ್ಯೆಯಿಂದ ಉಂಟಾಗುತ್ತದೆ. ಯಕೃತ್ತಿನ ಸಮಸ್ಯೆಗಳು ಯಾರಿಗಾದರೂ ಬರಬಹುದು ಎಂದು ವೈದ್ಯರು ಹೇಳುತ್ತಾರೆ, ಆದರೆ ಮದ್ಯಪಾನ ಮಾಡುವವರಿಗೆ ಅದರ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಸೋಂಕು ಮತ್ತು ಔಷಧಿಗಳ ಕಾರಣದಿಂದಾಗಿ ಫ್ಯಾಟಿ ಲೀವರ್ ಕಿಣ್ವಗಳ ಸಮಸ್ಯೆ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು, ವರ್ಷಕ್ಕೊಮ್ಮೆ ಯಕೃತ್ತಿನ ಪರೀಕ್ಷೆಯನ್ನು ನಡೆಸುವುದು ಅವಶ್ಯಕ.
ಇದನ್ನೂ ಓದಿ-ಈ ಹಸಿರು ಪಾನೀಯ ಸೇವಿಸಿ ಕೆಟ್ಟ ಕೊಲೆಸ್ಟ್ರಾಲ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಗುಡ್ ಬೈ ಹೇಳಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಮಾಹಿತಿ ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.