vietnam: ಪ್ರತಿಯೊಬ್ಬರು ಯೋಚಿಸುತ್ತಾರೆ ನಮ್ಮ ಬಳಿ ಸಾಕಷ್ಟು ಹಣ ಇದ್ದಿದ್ದರೆ  ಬೇರೆ ದೇಶಕ್ಕೆ ಭೇಟಿ ನೀಡಿ ಸುತ್ತಾಡಿ ಬರಬಹುದಾಗಿತ್ತು. ಇನ್ನೂ ಕೆಲವರ ಬಳಿ ಕೆವಲ ಎರಡು-ಮೂರು ಸಾವಿರ ರೂಪಾಯಿಗಳು ಮಾತ್ರ ಇರುತ್ತದೆ, ಇಷ್ಟೇ ಹಣದಿಂದ ನಾವೇನು ಮಾಡಬಹುದು ಎಂದು ಚಿಂತಿಸುತ್ತಿರುತ್ತಾರೆ. ನಮ್ಮ ಬಳಿ ಎರಡು-ಮೂರು ಸಾವಿರ ರೂಪಾಯಿಗಳು ಮಾತ್ರ ಇದೆ. ಆದರೆ ಇಷ್ಟೆ  ಹಣದಲ್ಲಿ ನಾವು ಲಕ್ಷಗಳನ್ನು ಆನಂದಿಸಬಹುದಾ? ಇದು ಸಂಭವಿಸಬಹುದೇ? ಎಂದು ಚಿಂತೆಗೆ ಒಳಗಾಗುತ್ತಾರೆ. ಹಾಗದರೆ ಆ ಚಿಂತೆ ಬಿಡಿ. ಕೇವಲ ಒಂದು ಸಾವಿರ ನಿಮ್ಮ ಹತ್ತಿರ ಇದೆ ಎಂದರೆ ಈ ದೇಶಕ್ಕೆ ಪ್ರವಾಸ ಕೈಗೊಳ್ಳಬಹುದು. ಹಾಗದರೆ ಆ ದೇಶ ಯಾವುದು..? ಕೇವಲ ಒಂದೇ ಸಾವಿರ ರೂಪಾಯಿಗಳಿಂದ ಈ ದೇಶಕ್ಕೆ ಭೇಟಿ ನೀಡುವುದು ಹೇಗೆ ಎನ್ನುವುದರ ಮಾಹಿತಿ ಈ ಸ್ಟೋರಿಯಲ್ಲಿದೆ...   


COMMERCIAL BREAK
SCROLL TO CONTINUE READING

ಹೌದು, ಕೇವಲ ಒಂದು ಸಾವಿರವಿದ್ದರೆ ನೀವು ಲಕ್ಷಾಧಿಪತಿಯಾಗಿ ಈ ದೇಶಕ್ಕೆ ಭೇಟಿ ನೀಡಬಹುದು. ಭಾರತೀಯ ರೂಪಾಯಿಯನ್ನು ಅತ್ಯಂತ ಶಕ್ತಿಶಾಲಿ ಎಂದು ವಿಶ್ವದ ಕೆಲವು ದೇಶಗಳು ಪರಿಗಣಿಸುತ್ತವೆ. ಈ  ದೇಶಕ್ಕೆ ಭಾರತದಿಂದ ಒಂದು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಹೋದರೆ ಸಾಕು,  ಅಲ್ಲಿ ಅದರ ಬೆಲೆ ಲಕ್ಷಗಳಲ್ಲಿದೆ. ಆ ದೇಶದ ಬೇರ್ಯಾವುದು ಅಲ್ಲ ಅದೇ ವಿಯೆಟ್ನಾಂ.


ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿಯೆಟ್ನಾಂ ಅತ್ಯಂತ ನೆಚ್ಚಿನ ದೇಶಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.  ವಿಯೆಟ್ನಾಂನ ನೈಸರ್ಗಿಕ ಸೌಂದರ್ಯವು ನಿಜಕ್ಕೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಯಾರಿಗೆ ಕಡಿಮೆ ಬಜೆಟ್‌ನಲ್ಲಿ ಪ್ರಯಾಣಿಸಬೇಕು ಎಂಬ ಆಸೆ ಇದ್ದರೆ ಕಂಡಿತ ವಿಯೆಟ್ನಾಂ ನಂತಹ ಸುಂದರ ದೇಶದ ಆಯ್ಕೆ ಮಾಡಿಕೊಳ್ಳುವುದು ಉತ್ತಮ.


ಇದನ್ನೂ ಓದಿ: WhatsApp ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ವಿಧಾನ ಗೊತ್ತೆ..! ಬಹಳ ಸರಳ


ವಿಯೆಟ್ನಾಂ ಆಗ್ನೇಯ ಏಷ್ಯಾದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ. ಪ್ರವಾಸಿಗರು ಇಲ್ಲಿಯ ವೈವಿಧ್ಯಮಯ ಭೂದೃಶ್ಯಗಳು, ಕಡಲತೀರಗಳು, ಬೆಟ್ಟಗಳು ಮತ್ತು ಬ್ಯುಸಿ ನಗರಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಗೂಗಲ್ ಡೆಸ್ಟಿನೇಶನ್ ಇನ್‌ಸೈಟ್ಸ್‌ನ ವರದಿಯ ಪ್ರಕಾರ, ಮಾರ್ಚ್‌ನಿಂದ ಜೂನ್‌ವರೆಗೆ ವಿಯೆಟ್ನಾಂ ಏಳನೇ ಹೆಚ್ಚು ಹುಡುಕಲ್ಪಟ್ಟ ತಾಣವಾಗಿದೆ.


ಸಾವಿರ ರೂಪಾಯಿಗಳನ್ನು ಲಕ್ಷಕ್ಕೆ ಪರಿವರ್ತಿಸಬಹುದು


ವಿಯೆಟ್ನಾಂಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಕಡಿಮೆ ಹಣದಲ್ಲಿ  ಇಲ್ಲಿ ಲಕ್ಷಗಟ್ಟಲೆ ರೂಪಾಯಿಗಳನ್ನು ಆನಂದಿಸಬಹುದು. ವಿಯೆಟ್ನಾಂನಲ್ಲಿ ಭಾರತೀಯ ರೂಪಾಯಿ ಮೌಲ್ಯವು 291 ವಿಯೆಟ್ನಾಮ್ ಡಾಂಗ್ ಆಗಿದೆ. ಅಂದರೆ ಒಂದು ಸಾವಿರ ಭಾರತೀಯ ರೂಪಾಯಿ ಅಲ್ಲಿ 2,91,000 ವಿಯೆಟ್ನಾಮೀಸ್ ಡಾಂಗ್ ಆಗುತ್ತದೆ. ಹಾಗಾಗಿ, ಸಾವಿರ ರೂಪಾಯಿಗೆ ಲಕ್ಷಗಟ್ಟಲೆ ರೂಪಾಯಿಯ  ಸುಖವನ್ನು ಪಡೆಯಬಹುದಾಗಿದೆ.


ವಿಯೆಟ್ನಾಂನಲ್ಲಿ ಭೇಟಿ ನೀಡಬೇಕಾದ ಸ್ಥಳಗಳು


 ವಿಯೆಟ್ನಾಂಗೆ ಭೇಟಿ ನೀಡಲಿದ್ದರೆ, ಖಂಡಿತವಾಗಿ ಹನೋಯಿಗೆ ಹೋಗಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಾ ಲಾಂಗ್ ಬೇಗೆ ಒಂದು ದಿನದ ಪ್ರವಾಸ ಮಾಡಬಹುದಂತಹ ಸ್ಥಳ ಇದಾಗಿದೆ. ಹಾ ಲಾಂಗ್ ಬೇ ತನ್ನ ವಿಶಿಷ್ಟವಾದ ಸುಣ್ಣದ ಕಲ್ಲಿನ ರಚನೆಗಳಿಗೆ ಹೆಸರುವಾಸಿಯಾಗಿದೆ, ಇಲ್ಲಿಗೆ ಭೇಟಿ ನೀಡಿದರೆ ಕಡಲತೀರವನ್ನು ಸಹ  ನೋಡಿ ಆನಂದಿಸಬಹುದು. ಅತ್ಯಂತ ಜನಪ್ರಿಯ ಬೀಚ್‌ಗಳಲ್ಲಿ ಒಂದಾದ ಬಾಯಿ ಚಾಯ್ ಹೈ, ಇದು ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸುವ ಬೀಚ್‌ ಇದಾಗಿದೆ.


ಇದನ್ನೂ ಓದಿ: ವಿದೇಶಿಯರಿಗೂ ಬಲು ಪ್ರಿಯ ಪನೀರ್‌ನ ಈ 8 ಫೇಮಸ್ ರೆಸಿಪೀಸ್


ಬೀಚ್-ಫಾರೆಸ್ಟ್ ವೀಕ್ಷಣೆಯನ್ನು ಆನಂದಿಸಿ


ಇದಲ್ಲದೆ,ದೇಶದ ಅತಿದೊಡ್ಡ ದ್ವೀಪಗಳಲ್ಲಿ ಒಂದಾದ ʼಫು ಕ್ವೋಕ್ʼ   ದ್ವೀಪವೂ ಇಲ್ಲೇ ಇದೆ. ಈ ದ್ವೀಪವು ಮುಖ್ಯವಾಗಿ ಫು ಕ್ವೋಕ್ ರಾಷ್ಟ್ರೀಯ ಉದ್ಯಾನವನದಿಂದ ಸುತ್ತುವರೆದಿದ್ದು, ಸುಂದರವಾದ ಪರ್ವತಗಳ ಸುತ್ತಲೂ ದಟ್ಟವಾದ ಕಾಡುಗಳನ್ನು ಹೊಂದಿಕೊಂಡಿದು ಪ್ರವಾಸಿಗರಿಗೆ ನಯನಮನೊಹರ ದೃಶ್ಯ ಇದಾಗಿದೆ. ಆದಾಗ್ಯೂ, ದ್ವೀಪದ ಪ್ರಮುಖ ಆಕರ್ಷಣೆ ಅದರ ಸುಂದರವಾದ ಕಡಲತೀರಗಳು. ತಾಳೆ ಮರಗಳು ಮತ್ತು ಬಿಳಿ ಮರಳು ಅದ್ಭುತವಾದ ನೋಟವನ್ನು ನೀಡುವ ವಿಶ್ವದ ಅತ್ಯುತ್ತಮ ಕಡಲತೀರಗಳಲ್ಲಿ ಇದು ಕೂಡ ಒಂದಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ