ಅಂಗೈಯಲ್ಲಿ ಈ ಚಿಹ್ನೆ ಇದ್ದರೆ ಒಲಿಯುವುದು ರಾಜಯೋಗ.!
Rajyog in Palm : ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿ ಕೆಲವು ವಿಶೇಷ ಆಕಾರಗಳ ಗುರುತುಗಳು, ಮತ್ತು ರೇಖೆಗಳು ಇರುತ್ತವೆ. ಈ ರೇಖೆಗಳು ರಾಜಯೋಗವನ್ನು ತರುತ್ತದೆ.
Rajyog in Palm : ಯಾವ ವ್ಯಕ್ತಿಯ ಜನ್ಮ ಜಾತಕದಲ್ಲಿ ರಾಜ ಯೋಗವಿರುತ್ತದೆಯೋ ಆ ವ್ಯಕ್ತಿ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸೌಲಭ್ಯಗಳನ್ನು ಅನುಭವಿಸುತ್ತಾನೆ. ಜಾತಕದಲ್ಲಿ ರಾಜ ಯೋಗವಿರುವಂತೆಯೇ ವ್ಯಕ್ತಿಯ ಹಸ್ತದಲ್ಲಿ ಕೂಡಾ ರಾಜಯೋಗದ ಚಿಹ್ನೆಗಳು ಇರುತ್ತವೆ. ಹಸ್ತದಲ್ಲಿನ ಈ ಚಿಹ್ನೆಗಳು ವ್ಯಕ್ತಿಯ ಅದೃಷ್ಟವನ್ನು ಬೆಳಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿ ಕೆಲವು ವಿಶೇಷ ಆಕಾರಗಳ ಗುರುತುಗಳು, ಮತ್ತು ರೇಖೆಗಳು ಇರುತ್ತವೆ. ಈ ರೇಖೆಗಳು ರಾಜಯೋಗವನ್ನು ತರುತ್ತದೆ. ಯಾರ ಕೈಯಲ್ಲಿ ಈ ರೀತಿಯ ರಾಜಯೋಗದ ಚಿನ್ಹೆಗಳಿರುತ್ತವೆಯೋ ಅವರು ತಮ್ಮ ಜೀವನದಲ್ಲಿ ಅಪಾರ ಪ್ರಮಾಣದ ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ಪಡೆಯುತ್ತಾರೆ.
ಅಂಗೈಯಲ್ಲಿರುವ ರಾಜಯೋಗವನ್ನು ಗುರುತಿಸುವುದು ಹೇಗೆ ?
ಯಾವ ವ್ಯಕ್ತಿಯ ಅಂಗೈಯ ಮಧ್ಯದಲ್ಲಿ ಬಾಣ, ಚಕ್ರ, ರಥ ಅಥವಾ ಧ್ವಜದ ಚಿಹ್ನೆ ಇರುತ್ತದೆಯೋ ಅವರನ್ನು ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಇವರು ಜೀವನದಲ್ಲಿ ಉನ್ನತ ಮಟ್ಟದ ಸ್ಥಾನಕ್ಕೆ ಏರುತ್ತಾರೆ. ಇವರ ಜೀವನದಲ್ಲಿ ಬಹಳಷ್ಟು ಹಣ, ಹೆಸರು ಮತ್ತು ಖ್ಯಾತಿ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ : Mangal Transit In Taurus: 120 ದಿನ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ಈ 3 ರಾಶಿಯವರು ವೃತ್ತಿ ಜೀವನದಲ್ಲಿ ಮುನ್ನಡೆಯುವುದು ಖಚಿತ
ಇನ್ನು ಯಾರ ಕೈಯಲ್ಲಿ ಉಂಗುರದ ಬೆರಳಿನ ಕೆಳಗೆ ಪುಣ್ಯ ರೇಖೆ ಇದ್ದು, ಮಣಿಕಟ್ಟಿನಿಂದ ಆರಂಭವಾಗಿ ಮಧ್ಯದ ಬೆರಳಿನವರೆಗೆ ಶನಿಯ ರೇಖೆ ಇರುತ್ತದೆಯೋ ಆ ವ್ಯಕ್ತಿ ರಾಜನಂತೆ ಐಷಾರಾಮಿ ಜೀವನ ನಡೆಸುತ್ತಾನೆ. ಅಂತಹವರು ಶನಿಯ ವಿಶೇಷ ಕೃಪೆಯಿಂದ ಉನ್ನತ ಆ ಸ್ಥಾನಗಳಿಗೆ ಏರುತ್ತಾರೆ. ಮಾತ್ರವಲ್ಲ ಜೀವನದಲ್ಲಿ ವಿದೇಶ ಪ್ರಯಾಣ ಮಾಡುತ್ತಾರೆ.
ಹೆಬ್ಬೆರಳಿನ ಮೇಲೆ ಮೀನು, ವೀಣೆ ಅಥವಾ ಕಮಲದ ಗುರುತು ಹೊಂದಿರುವ ವ್ಯಕ್ತಿಯು ತನ್ನ ಜೀವನದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸುತ್ತಾನೆ. ಈ ಜನರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ. ಇವರ ಜೀವನದಲ್ಲಿ ಹಣಕಾಸಿನ ಸಮಸ್ಯೆ ಎದುರಾಗುವುದೇ ಇಲ್ಲ.
ಇದನ್ನೂ ಓದಿ : 2023ರಲ್ಲಿ ಈ ಮೂರು ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ಮಹಾತ್ಮ
ಅಂಗೈಯಲ್ಲಿ ತ್ರಿಶೂಲದ ಚಿಹ್ನೆ ಇರುವವರು ರಾಜಕೀಯದಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ. ಅವರಿಗೆ ರಾಜಕೀಯದಲ್ಲಿ ದೊಡ್ಡ ಪದವಿ ಪ್ರಾಪ್ತಿಯಾಗುತ್ತದೆ. ಅಪಾರ ಸಂಪತ್ತಿನ ಒಡೆಯರೂ ಆಗುತ್ತಾರೆ.
ಕೈಯಲ್ಲಿ 2 ಅದೃಷ್ಟ ರೇಖೆಗಳನ್ನು ಹೊಂದಿರುವ ವ್ಯಕ್ತಿ ಬಹಳ ವಿರಳ. ಆದರೆ ಯಾರ ಹಸ್ತದಲ್ಲಿ ಎರಡು ರೀತಿಯ ಅದೃಷ್ಟ ರೇಖೆಗಳಿರುತ್ತವೆಯೋ ಅವರು ಪ್ರಪಂಚದ ಎಲ್ಲಾ ರೀತಿಯ ಸಂತೋಷ, ಸಂಪತ್ತು, ಗೌರವ ಮತ್ತು ಯಶಸ್ಸನ್ನು ಪಡೆಯುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.