ಗುರು ಮಾರ್ಗಿ ಪ್ರಭಾವ: ಇಂದಿನಿಂದ ಮುಂದಿನ 5 ತಿಂಗಳವರೆಗೆ ಈ ರಾಶಿಯವರಿಗೆ ಅಪಾರ ಹಣ- ಪ್ರಗತಿ ಸಾಧ್ಯತೆ

Guru Margi Effect: ಇಂದು(ಗುರುವಾರ)  24 ನವೆಂಬರ್ 2022ರಂದು ದೇವಗುರು ಬೃಹಸ್ಪತಿಯು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಇಂದಿನಿಂದ ತನ್ನದೇ ಆದ ಮೀನ ರಾಶಿಯಲ್ಲಿ ಗುರುವಿನ ನೇರ ಸಂಚಾರ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಮುಂದಿನ ಐದು ತಿಂಗಳವರೆಗೆ ಮಾರ್ಗಿ ಗುರುವು ಕೆಲವು ರಾಶಿಯವರಿಗೆ ಅಪಾರ ಸಂಪತ್ತಿನ ಜೊತೆಗೆ ಜೀವನದಲ್ಲಿ ಯಶಸ್ಸು, ಕೀರ್ತಿಯನ್ನು ಕರುಣಿಸಲಿದ್ದಾನೆ. ಆದರೆ, ಈ ಸಮಯದಲ್ಲಿ ಕೆಲವು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಗುರುವಿನ ನಡೆ ಬದಲಾವಣೆಯಿಂದ ಯಾವ ರಾಶಿಯವರಿಗೆ ಅದೃಷ್ಟ, ಯಾರಿಗೆ ಸಂಕಷ್ಟ ಎಂದು ತಿಳಿಯೋಣ...

Written by - Yashaswini V | Last Updated : Nov 24, 2022, 08:12 AM IST
  • ಇದುವರೆಗೂ ಹಿಮ್ಮುಖವಾಗಿ ಚಲಿಸುತ್ತಿದ್ದ ಬೃಹಸ್ಪತಿಯು ಇಂದಿನಿಂದ (ಗುರುವಾರ) 24 ನವೆಂಬರ್ 2022ರಿಂದ ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ.
  • ಗುರುವಿನ ನೇರ ಸಂಚಾರವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ.
  • ಆದರೆ, ಮುಂದಿನ ಐದು ತಿಂಗಳು ಕೆಲವು ರಾಶಿಯವರು ಜಾಗರೂಕರಾಗಿರಬೇಕು
ಗುರು ಮಾರ್ಗಿ ಪ್ರಭಾವ: ಇಂದಿನಿಂದ ಮುಂದಿನ 5 ತಿಂಗಳವರೆಗೆ ಈ ರಾಶಿಯವರಿಗೆ ಅಪಾರ ಹಣ- ಪ್ರಗತಿ ಸಾಧ್ಯತೆ  title=
Jupiter Transit Effect

Guru Margi Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಲ್ಲಿ ಬೃಹಸ್ಪತಿಗೆ ದೇವ ಗುರುವಿನ ಸ್ಥಾನಮಾನ ನೀಡಲಾಗಿದೆ. ಮಾತ್ರವಲ್ಲ ಗುರು ಗ್ರಹವನ್ನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ದೇವಗುರು ಬೃಹಸ್ಪತಿಯನ್ನು ಅದೃಷ್ಟವನ್ನು ಹೆಚ್ಚಿಸುವ ಗ್ರಹವೆಂದು ಬಣ್ಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹವು ಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಯು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು, ಕೀರ್ತಿ, ಪ್ರಗತಿಯನ್ನು ಗಳಿಸುತ್ತಾನೆ. ಜೀವನದಲ್ಲಿ ಸಾಕಷ್ಟು ಸಂಪತ್ತಿನ ಜೊತೆಗೆ ಸುಖ-ಸಂತೋಷವನ್ನು ಅನುಭವಿಸುತ್ತಾನೆ ಎಂಬ ನಂಬಿಕೆ ಇದೆ. ಅಂತಹ ಗುರುವು ಇದೀಗ ಇಂದಿನಿಂದ ತನ್ನ ಪಥ ಬದಲಾಯಿಸಲಿದ್ದಾನೆ. ಇದುವರೆಗೂ ಹಿಮ್ಮುಖವಾಗಿ ಚಲಿಸುತ್ತಿದ್ದ ಬೃಹಸ್ಪತಿಯು ಇಂದಿನಿಂದ (ಗುರುವಾರ)  24 ನವೆಂಬರ್ 2022ರಿಂದ ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ. ಗುರುವಿನ ನೇರ ಸಂಚಾರವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಮುಂದಿನ ವರ್ಷ 2023 ರ ಏಪ್ರಿಲ್ 22 ರವರೆಗೆ ಇದೇ ಸ್ಥಾನದಲ್ಲಿರುವ ಗುರುವು ಮುಂದಿನ ಐದು ತಿಂಗಳವರೆಗೆ ಕೆಲವು ರಾಶಿಯವರಿಗೆ ಅಪಾರ ಧನವೃಷ್ಟಿ ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ ಕೆಲವು ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದೂ ಸಹ ಹೇಳಲಾಗುತ್ತಿದೆ. ಮಾರ್ಗಿ ಗುರುವು ಯಾರಿಗೆ ಅದೃಷ್ಟವನ್ನು ತರಲಿದ್ದಾನೆ, ಯಾರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ...

ಇಂದಿನಿಂದ ಮುಂದಿನ 5 ತಿಂಗಳವರೆಗೆ ಈ ರಾಶಿಯವರಿಗೆ ಅಪಾರ ಹಣ- ಪ್ರಗತಿ ಕರುಣಿಸಲಿದ್ದಾನೆ ಮಾರ್ಗಿ ಗುರು:
ವೃಷಭ ರಾಶಿ: 

ಗುರುವಿನ ನೇರ ನಡೆಯಿಂದ ವೃಷಭ ರಾಶಿಯವರಿಗೆ ದೀರ್ಘ ಸಮಯದಿಂದ ಕಾಡುತ್ತಿದ್ದ ವೃತ್ತಿ ಸಂಬಂಧಿತ ಸಮಸ್ಯೆಗಳು ಕೊನೆಗೊಳ್ಳಲಿವೆ. ಈ ರಾಶಿಯವರಿಗೆ ಮುಂದಿನ ಐದು ತಿಂಗಳು ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಅದೃಷ್ಟ ನಿಮ್ಮ ಜೊತೆಗಿರಲಿದ್ದು ಹಠಾತ್ ಹಣಕಾಸಿನ ಲಾಭ ಸಾಧ್ಯತೆಯಿದೆ. ಬಿಸಿನೆಸ್ ಸಂಬಂಧಿಸಿದಂತೆ ನಿಮ್ಮ ಹೊಸ ಯೋಜನೆಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. 

ಕರ್ಕಾಟಕ ರಾಶಿ: 
ಈ ರಾಶಿಯವರಿಗೆ ಗುರುವಿನ ನೇರ ಸಂಚಾರದಿಂದ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ಈ ಸಮಯದಲ್ಲಿ ನಿಮಗೆ ಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯವಾಗಲಿದ್ದು ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ನಿಮ್ಮೆಲ್ಲಾ ಒಳ್ಳೆಯ ಕೆಲಸಗಳಲ್ಲಿ ಆತ್ಮೀಯರ ಬೆಂಬಲ ಸಿಗಲಿದ್ದು ಆರೋಗ್ಯವೂ ಉತ್ತಮವಾಗಿರುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣಗಳು ಲಾಭದಾಯಕವಾಗಿರಲಿವೆ.

ಇದನ್ನೂ ಓದಿ- Mangal Dosh Upay: ಮಂಗಳ ದೋಷ ಪರಿಹಾರಕ್ಕಾಗಿ ಇಂದು ಈ ವಸ್ತುಗಳನ್ನು ತಪ್ಪದೇ ದಾನ ಮಾಡಿ

ಕನ್ಯಾ ರಾಶಿ:
ಮಾರ್ಗಿ ಗುರುವು ಕನ್ಯಾ ರಾಶಿಯ ಉದ್ಯೋಗಸ್ಥರಿಗೆ ಮತ್ತು ಉದ್ಯಮಿಗಳಿಗೆ ಬಂಪರ್ ವಿತ್ತೀಯ ಲಾಭವನ್ನು ನೀಡಲಿದ್ದಾನೆ. ನೀವು ಕೈ ಹಾಕಿದ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳುವುದರಿಂದ ಹೆಚ್ಚಿನ ಲಾಭ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನಿಮ್ಮ ಯಾವುದೇ ಹಳೆಯ ವ್ಯಾಜ್ಯಗಳು ಪೂರ್ಣಗೊಳ್ಳಲಿದ್ದು ಸಾಕಷ್ಟು ಹಣವನ್ನು ಗಳಿಸುವಿರಿ. ಮಾತ್ರವಲ್ಲ, ಜೀವನದಲ್ಲಿ ಯಶಸ್ಸು, ಪ್ರಗತಿ, ಉತ್ತಮ ಸ್ಥಾನಮಾನವನ್ನೂ ಗಳಿಸುವಿರಿ.

ವೃಶ್ಚಿಕ ರಾಶಿ: 
ಗುರುವಿನ ನೇರ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಉದ್ಯೋಗಸ್ಥರಿಗೆ ಪ್ರಮೋಷನ್ ಜೊತೆಗೆ ಸಂಬಳ ಹೆಚ್ಚಾಗುವ ಸಾಧ್ಯತೆಯೂ ಇದೆ. ವ್ಯಾಪಾರಸ್ಥರಿಗೂ ಸಮಯ ಚೆನ್ನಾಗಿದ್ದು ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ನೀವು ಅನುಭವಿಸುವಿರಿ. ಆರೋಗ್ಯವೂ ಉತ್ತಮವಾಗಿರಲಿದೆ. ಒಟ್ಟಾರೆಯಾಗಿ ಈ ಸಮಯವು ವೃಶ್ಚಿಕ ರಾಶಿಯವರಿಗೆ ಸುವರ್ಣ ಸಮಯ ಎಂದೇ ಹೇಳಬಹುದು.

ಕುಂಭ ರಾಶಿ: 
ದೇವಗುರು ಬೃಹಸ್ಪತಿಯ ನೇರ ಸಂಚಾರವು ಕುಂಭ ರಾಶಿಯವರಿಗೆ ಬಹಳಷ್ಟು ಹಣವನ್ನು ನೀಡುತ್ತದೆ. ಮುಂದಿನ ಐದು ತಿಂಗಳು ಎಂದರೆ 2023 ರ ಎಪ್ರಿಲ್ ವರೆಗೂ ಸಹ ಈ ರಾಶಿಯ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯಮಿಗಳಿಗೆ ಸಾಕಷ್ಟು ಪ್ರಯೋಜನಗಳನ್ನು ತರುತ್ತದೆ. ಈ ಸಮಯದಲ್ಲಿ ನೀವು ಬಯಸಿದ ವರ್ಗಾವಣೆ ಲಭ್ಯವಾಗಲಿದ್ದು, ವೃತ್ತಿ ರಂಗದಲ್ಲಿ ದೊಡ್ಡ ಯಶಸ್ಸನ್ನು ಗಳಿಸುವಿರಿ.

ಇದನ್ನೂ ಓದಿ- Shukra Uday 2022: ಶುಕ್ರ ಉದಯ ಪರಿಣಾಮ, 3 ರಾಶಿಯವರಿಗೆ ಭಾಗ್ಯೋದಯ

ಮುಂದಿನ ಐದು ತಿಂಗಳು ಈ ರಾಶಿಯವರು ಜಾಗರೂಕರಾಗಿರಿ:
ದೇವಗುರು ಬೃಹಸ್ಪತಿಯ ನೇರ ನಡೆಯು ಮಿಥುನ ರಾಶಿ, ತುಲಾ ರಾಶಿ, ಧನು ರಾಶಿ ಮತ್ತು ಮೀನ ರಾಶಿಯವರಿಗೆ ಸಾಮಾನ್ಯ ಪರಿಣಾಮವನ್ನು ಬೀರುತ್ತದೆ. ಇದೇ ವೇಳೆ ಮಾರ್ಗಿ ಗುರುವು ಮೇಷ, ಸಿಂಹ ಮತ್ತು ಮಕರ ರಾಶಿಯ ಜನರ ತೊಂದರೆಗಳನ್ನು ಹೆಚ್ಚಿಸುವ ಸಾಧ್ಯತೆ ಇದ್ದು ಈ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಈ ಸಮಯದಲ್ಲಿ ಈ ಮೂರು ರಾಶಿಯವರು ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News