ಕನಸಿನಲ್ಲಿ ಈ ಆರು ವಸ್ತುಗಳು ಕಂಡರೆ ಅದೃಷ್ಟ ಬದಲಾಗುವ ಸಂಕೇ ತವಂತೆ ..!
ಸಾಮಾನ್ಯವಾಗಿ ಬೇರೆ ಬೇರೆ ರೀತಿಯ ಕನಸುಗಳು ಬೀಳುತ್ತವೆ. ಅವುಗಳಲ್ಲಿ ಕೆಲವು ನೆನಪಿದ್ದರೆ, ಇನ್ನು ಕೆಲವು ನೆನಪಿರುವುದಿಲ್ಲ. ಸಪ್ನ ಶಾಸ್ತ್ರದ ಪ್ರಕಾರ, ಪ್ರತಿ ಕನಸಿಗೂ ತನ್ನದೇ ಆದ ಅರ್ಥವಿರುತ್ತದೆ
ಬೆಂಗಳೂರು : ಸ್ವಪ್ನ ಶಾಸ್ತ್ರದ ಪ್ರಕಾರ, ರಾತ್ರಿಯಲ್ಲಿ ಕಾಣುವ ಕನಸುಗಳು ತಮ್ಮದೇ ಆದ ವಿಶೇಷ ಮಹತ್ವವನ್ನು ಹೊಂದಿವೆ. ಕನಸಿನ ಗ್ರಂಥದ ಪ್ರಕಾರ, ಕೆಲವು ಕನಸುಗಳು ಒಳ್ಳೆಯ ಘಟನೆಗಳ ಸಂಕೇತವನ್ನು ಸೂಚಿಸುತ್ತವೆ. ಆದರೆ ಕೆಲವು ಕನಸುಗಳು ಅಶುಭವಾಗಿರುತ್ತವೆ. ಸಾಮಾನ್ಯವಾಗಿ ಬೇರೆ ಬೇರೆ ರೀತಿಯ ಕನಸುಗಳು ಬೀಳುತ್ತವೆ. ಅವುಗಳಲ್ಲಿ ಕೆಲವು ನೆನಪಿದ್ದರೆ, ಇನ್ನು ಕೆಲವು ನೆನಪಿರುವುದಿಲ್ಲ. ಸಪ್ನ ಶಾಸ್ತ್ರದ ಪ್ರಕಾರ, ಪ್ರತಿ ಕನಸಿಗೂ ತನ್ನದೇ ಆದ ಅರ್ಥವಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳಬೇಕು. ಹೀಗೆ ಅರ್ಥ ಮಾಡಿಕೊಂಡ ನಂತರ ನಮಗೆ ಬಿದ್ದಿರುವ ಕನಸು ಶುಭವೋ ಅಶುಭವೋ ಎನ್ನುವುದನ್ನು ತಿಳಿಯಬಹುದು.
ಕನಸಿನಲ್ಲಿ ಹಾವು ಕಂಡರೆ :
ನಿಮ್ಮ ಕನಸಿನಲ್ಲಿ ಹಾವು ನಿಮ್ಮ ಕಡೆಗೆ ಚಲಿಸುವುದನ್ನು ನೋಡಿದರೆ, ನಿಮ್ಮ ಶತ್ರುಗಳು ಹತ್ತಿರ ಬರುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಈ ಜನರು ನಿಮಗೆ ತುಂಬಾ ಅಪಾಯಕಾರಿಯಾಗಿ ಪರಿಣಮಿಸಬಹುದು. ಹಾಗಾಗಿ ಕನಸಿನಲ್ಲಿ ಹಾವು ಕಂಡರೆ ಸ್ವಲ್ಪ ಎಚ್ಚರದಿಂದಿರಿ.
ಇದನ್ನೂ ಓದಿ : Zodiac Sign: ಮಾತಿನಿಂದಲೇ ಹುಡುಗಿಯರ ಹೃದಯ ಗೆಲ್ಲುತ್ತಾರೆ ಈ ರಾಶಿಯ ಹುಡುಗರು
ಕನಸಿನಲ್ಲಿ ವಧು ಕಂಡರೆ :
ನಿಮ್ಮ ಕನಸಿನಲ್ಲಿ ವಧುವನ್ನು ನೋಡಿದರೆ, ನೀವು ಎದುರಾಳಿಯೊಂದಿಗೆ ರಾಜಿ ಮಾಡಿಕೊಳ್ಳಲಿದ್ದೀರಿ ಎಂದರ್ಥ. ಅಂದರೆ, ಯಾರೊಂದಿಗಾದರೂ ಯಾವುದೇ ವಿಷಯದ ಬಗ್ಗೆ ವಿವಾದವಿದ್ದರೆ, ಪರಸ್ಪರ ಮಾತುಕತೆಯ ಮೂಲಕ ಅದನ್ನು ಪರಿಹರಿಸಬಹುದು.
ಕಳ್ಳಿ ಗಿಡ :
ನಿಮ್ಮ ಕನಸಿನಲ್ಲಿ ಕ್ಯಾಕ್ಟಸ್ ಸಸ್ಯವನ್ನು ನೋಡಿದರೆ, ಅದು ತುಂಬಾ ಕೆಟ್ಟ ಸಂಕೇತವಾಗಿರುತ್ತದೆ. ನಿಮ್ಮ ಜೀವನದಲ್ಲಿ ಅಡೆತಡೆಗಳು ಎದುರಾಗಲಿವೆ ಎನ್ನುವುದನ್ನು ಅದು ಸೂಚಿಸುತ್ತದೆ. ಕುಟುಂಬ ಸದಸ್ಯರಲ್ಲಿ ಉದ್ವಿಗ್ನತೆ ಉಂಟಾಗಬಹುದು ಅಥವಾ ವೈವಾಹಿಕ ಜೀವನವು ಛಿದ್ರವಾಗಬಹುದು.
ಆರಿದ ದೀಪ :
ನಿಮ್ಮ ಕನಸಿನಲ್ಲಿ ಆರಿದ ದೀಪವನ್ನು ನೋಡಿದರೆ, ಅದು ಅಶುಭ ಸಂಕೇತವಾಗಿರುತ್ತದೆ. ನಿಮ್ಮ ಜೀವನದಲ್ಲಿ ಏರುಪೇರು ಉಂಟಾಗಲಿದೆ ಎನ್ನುವುದರ ಸಂಕೇತವಾಗಿರುತ್ತದೆ. ನಿಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಸೂಚನೆ ನೀಡುತ್ತದೆ.
ಇದನ್ನೂ ಓದಿ : ಈ ದಿನದಂದು ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾದ್ರೆ ಮಂಗಳಕರ! ಇದಕ್ಕಿದೆ ಪ್ರಮುಖ ಕಾರಣ
ಪರ್ವತದಿಂದ ಕೆಳಗೆ ಬೀಳುವುದು :
ಕೆಳಗೆ ಬೀಳುವ ಕನಸು ತುಂಬಾ ಸಾಮಾನ್ಯವಾಗಿರುತ್ತದೆ. ಕೆಲವರಿಗೆ ಆಗಾಗ ಇಂಥಹ ಕನಸು ಬೀಳುತ್ತವೆ. ಆದರೆ ನೀವು ಪರ್ವತದಿಂದ ಕೆಳಗೆ ಬೀಳುತ್ತಿರುವ ಕನಸು ಬಿದ್ದರೆ, ಜೀವನದಲ್ಲಿ ಅವನತಿಯ ಸಂಕೇತವಾಗಿರುತ್ತದೆ. ನಿಮ್ಮ ಸ್ಥಾನಮಾನಕ್ಕೆ, ನಿಮ್ಮ ಖ್ಯಾತಿಗೆ ಧಕ್ಕೆ ತರಬಹುದು ಎನ್ನುವುದನ್ನು ಅದು ಸೂಚಿಸುತ್ತದೆ.
ಸತ್ತವರು ಕನಸಲ್ಲಿ ಬಂದರೆ :
ಕೆಲವೊಮ್ಮೆ ಸತ್ತವರೂ ಕನಸಿನಲ್ಲಿ ಬರುತ್ತಾರೆ. ಅಂತಹ ಕನಸುಗಳು ದುಃಖ ಅಥವಾ ಪಶ್ಚಾತ್ತಾಪದ ಭಾವನೆಯನ್ನು ವ್ಯಕ್ತಪಡಿಸುತ್ತವೆ. ಕೆಲವರು ಅಕಾಲಿಕವಾಗಿ ಸಾಯುತ್ತಾರೆ ಮತ್ತು ಅವರ ಅನೇಕ ಆಸೆಗಳು ಈಡೇರದೆ ಉಳಿಯುತ್ತವೆ. ಅದಕ್ಕಾಗಿಯೇ ಅವರು ಕನಸಿನಲ್ಲಿ ನಮ್ಮಿಂದ ಸಹಾಯವನ್ನು ನಿರೀಕ್ಷಿಸುತ್ತಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.