ನವದೆಹಲಿ : ಧಾರ್ಮಿಕ ದೃಷ್ಟಿಯಿಂದ ಬೆಳ್ಳಿಯು ಅತ್ಯಂತ ಪವಿತ್ರ ಮತ್ತು ಸಾತ್ವಿಕ ಲೋಹವಾಗಿದೆ. ಬೆಳ್ಳಿ  ಶಿವನ ಕಣ್ಣುಗಳಿಂದ ಹುಟ್ಟಿಕೊಂಡ ಲೋಹ ಎನ್ನುವುದು ನಂಬಿಕೆ. ಇದಲ್ಲದೆ ಜ್ಯೋತಿಷ್ಯದಲ್ಲಿ (Astrology) ಬೆಳ್ಳಿಗೆ ವಿಶೇಷ ಮಹತ್ವವಿದೆ. ಏಕೆಂದರೆ ಇದು ಸಂಪತ್ತಿನ ಅಂಶವಾದ ಶುಕ್ರ ಮತ್ತು ಮನಸ್ಸಿನ ಅಂಶವಾದ ಚಂದ್ರನಿಗೆ ಸಂಬಂಧಿಸಿದೆ (Importance of silver in astrology). ಬೆಳ್ಳಿಯು ದೇಹದ ನೀರಿನ ಅಂಶವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ ಕಫ, ಪಿತ್ತ ಮತ್ತು ವಾತದ ಸಮಸ್ಯೆಯನ್ನು ಕೂಡಾ ದೂರ ಮಾಡುವ ಶಕ್ತಿ ಬೆಳ್ಳಿಗೆ ಇದೆ. ಅದಕ್ಕಾಗಿಯೇ ನಿತ್ಯದ ಬದುಕಿನಲ್ಲಿ  ಬೆಳ್ಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಧನ ಲಾಭಕ್ಕಾಗಿ ಮಹತ್ವದ್ದಾಗಿದೆ : 
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಬೆಳ್ಳಿಯು ಮನಸ್ಸನ್ನು ಸದೃಢಗೊಳಿಸುವುದರ ಜೊತೆಗೆ, ಮನಸ್ಸನ್ನು ಚುರುಕುಗೊಳಿಸುತ್ತದೆ. ಚಂದ್ರನ ಅಶುಭ ಪರಿಣಾಮಗಳನ್ನು ತೊಡೆದುಹಾಕಲು ಬೆಳ್ಳಿ ಪ್ರಯೋಜನಕಾರಿಯಾಗಿದೆ (Benefits of silver). ಇದಲ್ಲದೆ ಬೆಳ್ಳಿಯು ಶುಕ್ರನನ್ನು ಬಲಿಷ್ಠನನ್ನಾಗಿ ಮಾಡುತ್ತದೆ. 


ಇದನ್ನೂ ಓದಿ : ಕಣ್ಣುಗಳೇ ಹೇಳುತ್ತದೆ ನಿಮ್ಮ ಅದೃಷ್ಟ , ಹೀಗಿದೆಯೇ ನಿಮ್ಮ ಅಕ್ಷಿ ಒಮ್ಮೆ ನೋಡಿಕೊಳ್ಳಿ


ಧನ ಪ್ರಾಪ್ತಿಗಾಗಿ ಬೆಳ್ಳಿಯ ಬಳಕೆ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿಕ್ಕ ಬೆರಳಿಗೆ ಶುದ್ಧ ಬೆಳ್ಳಿಯ ಉಂಗುರವನ್ನು (benefits of silver ring) ಧರಿಸುವುದು ಉತ್ತಮ. ಅದರ ಪ್ರಭಾವದಿಂದ, ಅಶುಭ ಚಂದ್ರನು ಶುಭ ಪರಿಣಾಮಗಳನ್ನು ನೀಡಲು ಪ್ರಾರಂಭಿಸುತ್ತಾನೆ. ಇದರೊಂದಿಗೆ, ಮನಸ್ಸಿನ ಸಮತೋಲನವು ಉತ್ತಮವಾಗಲು ಪ್ರಾರಂಭಿಸುತ್ತದೆ ಮತ್ತು ಧನಲಾಭಾವೂ ಆಗುತ್ತದೆ.


ದೇಹವನ್ನು ಆರೋಗ್ಯವಾಗಿರಿಸುತ್ತದೆ :
ಶುದ್ಧ ಬೆಳ್ಳಿಯಿಂದ ಮಾಡಿದ ಖಡವನ್ನು ಕೈಗೆ ಧರಿಸುವುದರಿಂದ ಕಫ, ಪಿತ್ತ ಮತ್ತು ವಾತಡ ಸಮಸ್ಯೆಯನ್ನು ನಿಯಂತ್ರಿಸಬಹುದು. ಇದರಿಂದಾಗಿ ದೇಹವು ಆರೋಗ್ಯಕರವಾಗಿರುತ್ತದೆ ಮತ್ತು ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. 


ದುಷ್ಟ ಗ್ರಹಗಳ ಪ್ರಭಾವ ಕಡಿಮೆಯಾಗುತ್ತದೆ : 
ಶುದ್ಧ ಬೆಳ್ಳಿಯ ಸರವನ್ನು (Silver chain benefits) ಗಂಗಾಜಲದಿಂದ ಶುದ್ಧೀಕರಿಸಿ ಕೊರಳಲ್ಲಿ ಧರಿಸಿದರೆ ಮಾತಿನಲ್ಲಿ ಪ್ರಖರತೆ ಇರುತ್ತದೆ. ಜೊತೆಗೆ, ಹಾರ್ಮೋನುಗಳು ಸಹ ಸಮತೋಲನದಲ್ಲಿರುತ್ತವೆ. ಇದಲ್ಲದೇ ಮನಸ್ಸು ಏಕಾಗ್ರತೆಯಿಂದ ಕೂಡಿರುತ್ತದೆ. 


ಇದನ್ನೂ ಓದಿ : Sugar Remedies: ಬೆಟ್ಟದಂತಹ ಸಮಸ್ಯೆಯನ್ನೂ ಸುಲಭವಾಗಿ ಪರಿಹರಿಸುತ್ತೆ ಸಕ್ಕರೆಯ ಈ ಸುಲಭ ಉಪಾಯ


ಬೆಳ್ಳಿಯ ಬಳಕೆ ವೇಳೆ ಎಚ್ಚರವಿರಲಿ : 
ಬೆಳ್ಳಿ ಶುದ್ಧವಾದಷ್ಟೂ ಅದರ ಪರಿಣಾಮ ಉತ್ತಮವಾಗಿರುತ್ತದೆ. ಭಾವನಾತ್ಮಕ ಸಮಸ್ಯೆ ಇರುವವರು ಬೆಳ್ಳಿ ಧರಿಸುವುದನ್ನು ತಪ್ಪಿಸಬೇಕು. ವೃಶ್ಚಿಕ (Scorpio), ಮೀನ ಮತ್ತು ಕರ್ಕಾಟಕ ರಾಶಿಯವರು (Cancer) ಬೆಳ್ಳಿ ಧರಿಸಿದರೆ ಅವರಿಗೆ ಶುಭ ಫಲ ಸಿಗಲಿದೆ. ಆದರೆ  ಸಿಂಹ (Leo), ಧನು ರಾಶಿ (Sagitarius) ಮತ್ತು ಮೇಷ ರಾಶಿಯವರಿಗೆ (Aries) ಬೆಳ್ಳಿಯು ಸುಭ ಫಲವನ್ನು ನೀಡುವುದಿಲ್ಲ. 


(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತುನಂಬಿಕೆಯನ್ನು  ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.