ನವದೆಹಲಿ: Kundli Auspicious Yoga - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಗ್ರಹಗಳ ಸ್ಥಾನವು ಉತ್ತಮವಾಗಿದ್ದಾಗ, ಒಬ್ಬ ವ್ಯಕ್ತಿಯು ಸಾಲವನ್ನು ತೆಗೆದುಕೊಂಡು ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುತ್ತಾನೆ. ಮತ್ತೊಂದೆಡೆ, ಜಾತಕದಲ್ಲಿ ಗ್ರಹಗಳ ಸ್ಥಾನವು ಉತ್ತಮವಾಗಿಲ್ಲದಿದ್ದರೆ ((Inauspicious Kundli Yoga)), ವ್ಯಕ್ತಿ ತೆಗೆದುಕೊಂಡ ಸಾಲ ಜೀವನಕ್ಕೆ ಹೊರೆಯಾಗುತ್ತದೆ. ಇದರಿಂದಾಗಿ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದೇ ವೇಳೆ ವ್ಯಕ್ತಿಯು ಸಾಲದ ಹೊರೆಯ ಅಡಿಯಲ್ಲಿ ಸಿಕ್ಕಿಬೀಳುತ್ತಾನೆ. ಜಾತಕದಲ್ಲಿ ಯಾವ ಗ್ರಹಗಳಿಂದ ಇಂತಹ ಪರಿಸ್ಥಿತಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಜಾತಕದಲ್ಲಿ ಗ್ರಹಗಳ ಈ ಸ್ಥಿತಿಯ ಕಾರಣ ಸಾಲಭಾಧೆ ಎದುರಾಗುತ್ತದೆ
>>  ಯಾರ ಜನ್ಮ ಕುಂಡಲಿಯ (Kundli) 11ನೇ ಭಾವ ಅಂದರೆ ಲಾಭದ ಸ್ಥಾನದ ಅಧಿಪತಿ 6, 8 ಮತ್ತು 12 ನೇ ಭಾವದಲ್ಲಿ ವಿರಾಜಮಾನನಾಗಿರುತ್ತಾನೆಯೋ, ಆ ವ್ಯಕ್ತಿ ಯಾವಾಗಲು ಕೂಡ ಸಾಲಬಾಧೆಯಿಂದ ಪೀಡಿತನಾಗಿರುತ್ತಾನೆ. ಇಂತಹ ಜಾತಕದವರು ಜೀವನದಲ್ಲಿ ಭೀಕರ ಆರ್ಥಿಕ ಸಂಕಷ್ಟ ಎದುರಿಸುತ್ತಾರೆ.


>> ಜನ್ಮ ಕುಂಡಲಿಯ 10ನೇ ಭಾವದ ಅಧಿಪತಿ ಗ್ರಹ 6, 8 ಮತ್ತು 12 ನೇ ಮನೆಯಲ್ಲಿ ಇರುತ್ತದೆಯೋ ಅವರಿಗೆ ಸ್ವಂತ ಸಂಬಂಧಿಕರಿಂದಲೇ ಘನತೆ ಗೌರವ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಜೀವನದಲ್ಲಿ ಸಾಕಷ್ಟು ಹಣ ಕೂಡಿ ಹಾಕಿ. ಇಲ್ಲದಿದ್ದರೆ ಜೀವನದಲ್ಲಿ ವ್ಯತಿರಿಕ್ತ ಪರೀಸ್ಥಿತಿಗಳು ಎದುರಾಗುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ-Money Remedies: ಅತ್ಯಂತ ಪ್ರಭಾವಶಾಲಿಯಾಗಿದೆ ಈ ಯಂತ್ರ! ಮನೆಯಲ್ಲಿಟ್ಟರೆ ಧನವೃಷ್ಟಿಯ ಜೊತೆಗೆ ಸಫಲತೆ ನಿಮ್ಮದಾಗಲಿದೆ


>> ಯಾರ ಜಾತಕದಲ್ಲಿ ಎರಡನೇ ಹಾಗೂ 11ನೇ ಭಾವದ ಅಧಿಪತಿ ಗ್ರಹ 6, 8, ಮತ್ತು 12ನೇ ಮನೆಯಲ್ಲಿ ಹೋಗಿ ಕುಳಿತಿದ್ದು, ಮಂಗಳ-ರಾಹು ಧನ ಸ್ಥಾನದಲ್ಲಿದ್ದರೆ, ಅಂತಹ ಜನರು ಅಡ್ಡದಾರಿಯ ಮೂಲಕ ಧನ ಸಂಗ್ರಹ ಮಾಡುವುದರಿಂದ ದೂರ ಉಳಿಯಬೇಕು. ಏಕೆಂದರೆ ಈ ರೀತಿ ಸಂಗ್ರಹಿಸಿಡ ಧನ ಬೇಗ ಹಾಳಾಗುತ್ತದೆ.


ಇದನ್ನೂ ಓದಿ-ಈ 4 ರಾಶಿಯವರು ತುಂಬಾ ಅದೃಷ್ಟವಂತರು, ಜೀವನದಲ್ಲಿ ಹಣ-ಕೀರ್ತಿ, ಯಶಸ್ಸು ಎಲ್ಲವನ್ನು ಪಡೆಯುತ್ತಾರೆ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Chaturgrahi Yoga: ಮಕರ ರಾಶಿಯಲ್ಲಿ ಅಪರೂಪದ ಚತುರ್ಗ್ರಾಹಿ ಯೋಗ, ಈ 5 ರಾಶಿಯವರಿಗೆ ಅದೃಷ್ಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.