ಈ 4 ರಾಶಿಯವರು ತುಂಬಾ ಅದೃಷ್ಟವಂತರು, ಜೀವನದಲ್ಲಿ ಹಣ-ಕೀರ್ತಿ, ಯಶಸ್ಸು ಎಲ್ಲವನ್ನು ಪಡೆಯುತ್ತಾರೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, 4 ರಾಶಿಯ ಜನರು ಬಹಳ ಅದೃಷ್ಟವಂತರಾಗಿರುತ್ತಾರೆ.  ಅವರು ತಮ್ಮ ಜೀವನದಲ್ಲಿ ಹಣ, ಖ್ಯಾತಿ, ಉತ್ತಮ ಜೀವನ ಸಂಗಾತಿ, ಸ್ಥಾನಮಾನ  ಎಲ್ಲವನ್ನೂ ಪಡೆಯುತ್ತಾರೆ. 

Written by - Zee Kannada News Desk | Last Updated : Feb 15, 2022, 01:36 PM IST
  • ಈ 4 ರಾಶಿಯ ಜನರು ತುಂಬಾ ಅದೃಷ್ಟವಂತರು
  • ಹೆಸರು, ಹಣ, ಕೀರ್ತಿ, ಪ್ರೀತಿ ಎಲ್ಲವೂ ಇವರಿಗೆ ಸಿಗುತ್ತದೆ
  • ಜೀವನದಲ್ಲಿ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ
ಈ 4 ರಾಶಿಯವರು ತುಂಬಾ ಅದೃಷ್ಟವಂತರು, ಜೀವನದಲ್ಲಿ ಹಣ-ಕೀರ್ತಿ, ಯಶಸ್ಸು  ಎಲ್ಲವನ್ನು ಪಡೆಯುತ್ತಾರೆ  title=
ಈ 4 ರಾಶಿಯ ಜನರು ತುಂಬಾ ಅದೃಷ್ಟವಂತರು (file photo)

ನವದೆಹಲಿ : ಕೆಲವರು ಯಾವುದೇ ಕೆಲಸ ಮಾಡಿದರೂ ಅದೃಷ್ಟ ಎನ್ನುವುದು ಅವರ ಜೊತೆಯಲ್ಲಿಯೇ ಇರುತ್ತದೆ. ಅವರು ಜೀವನದಲ್ಲಿ ಏನನ್ನು ಬಯಸುತ್ತಾರೋ ಅದು  ಈಡೇರುತ್ತದೆ. ಒಟ್ಟಾರೆಯಾಗಿ, ಅದೃಷ್ಟದ ವಿಷಯದಲ್ಲಿ ಅವರು ತುಂಬಾ ಅದೃಷ್ಟವಂತರು. ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, 4 ರಾಶಿಯ ಜನರು ಬಹಳ ಅದೃಷ್ಟವಂತರಾಗಿರುತ್ತಾರೆ.  ಅವರು ತಮ್ಮ ಜೀವನದಲ್ಲಿ ಹಣ, ಖ್ಯಾತಿ, ಉತ್ತಮ ಜೀವನ ಸಂಗಾತಿ, ಸ್ಥಾನಮಾನ  ಎಲ್ಲವನ್ನೂ ಪಡೆಯುತ್ತಾರೆ. 

ವೃಷಭ ರಾಶಿ :
ವೃಷಭ ರಾಶಿಯ (Taurus) ಜನರು ಅದೃಷ್ಟವಂತರು. ಅವರು ತಮ್ಮ ಜೀವನದಲ್ಲಿ ಸಾಕಷ್ಟು ಹಣ, ಖ್ಯಾತಿ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಆದರೆ ಇದನ್ನೆಲ್ಲಾ ಪಡೆಯಲು ಅವರು ಬಹಳ ಶ್ರಮಿಸುತ್ತಾರೆ. ಅದೃಷ್ಟ ಕೂಡಾ ಸದಾ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. 

ಇದನ್ನೂ ಓದಿ :  Chaturgrahi Yoga: ಮಕರ ರಾಶಿಯಲ್ಲಿ ಅಪರೂಪದ ಚತುರ್ಗ್ರಾಹಿ ಯೋಗ, ಈ 5 ರಾಶಿಯವರಿಗೆ ಅದೃಷ್ಟ

ಸಿಂಹ :
ಸಿಂಹ ರಾಶಿಯ (Leo) ಜನರು ಕೂಡಾ ತುಂಬಾ ಅದೃಷ್ಟವಂತರು. ಅವರು ಜೀವನದಲ್ಲಿ ಏನು ಬಯಸುತ್ತಾರೆ, ಅದನ್ನು ಪಡೆಯುತ್ತಾರೆ. ಯಶಸ್ಸು, ಹಣ, ಜೀವನದಲ್ಲಿ ಉನ್ನತ ಸ್ಥಾನಮಾನ, ಉತ್ತಮ ಸಂಬಂಧಗಳು ಇವರಿಗೆ ಜೀವದಲ್ಲಿ ಲಭಿಸುತ್ತದೆ. 

ತುಲಾ ರಾಶಿ :
ತುಲಾ ರಾಶಿಯ (Libra) ಜನರು ಉತ್ತಮ ನಾಯಕನ ಗುಣಗಳನ್ನು ಹೊಂದಿರುತ್ತಾರೆ. ಜೊತೆಗೆ ಅದೃಷ್ಟ ಕೂಡ ಅವರಿಗೆ ಅನುಕೂಲಕರವಾಗಿರುತ್ತದೆ. ಈ ಕಾರಣದಿಂದಾಗಿ, ಅವರು ತಮ್ಮ ಜೀವನದಲ್ಲಿ ಸಾಕಷ್ಟು ಹೆಸರು ಮತ್ತು ಹಣವನ್ನು ಪಡೆಯುತ್ತಾರೆ. ಅವರ ಸಕಾರಾತ್ಮಕ, ಸಮತೋಲಿತ ಚಿಂತನೆಯು ಅವರನ್ನು ಜನಪ್ರಿಯಗೊಳಿಸುತ್ತದೆ (Positive thinking) . ಕಷ್ಟಪಟ್ಟು ಕೆಲಸ ಮಾಡಲು ಇವರು ಎಂದಿಗೂ ಹಿಂಜರಿಯುವುದಿಲ್ಲ. 

ಇದನ್ನೂ ಓದಿ : ಅಸ್ತವಾಗಿದ್ದ ಶನಿ ಮತ್ತೆ ಉದಯ, ತೆರೆಯಲಿದೆ ಈ ನಾಲ್ಕು ರಾಶಿಯವರ ಭಾಗ್ಯದ ಬಾಗಿಲು

ಕುಂಭ ರಾಶಿ :
ಕುಂಭ ರಾಶಿಯವರು (Aquarius) ಏನನ್ನು ಬಯಸುತ್ತಾರೋ ಅದು ಅವರಿಗೆ ಸಿಗುತ್ತದೆ. ಕಠಿಣ ಪರಿಶ್ರಮದಿಂದ (Hard work) ಎಲ್ಲವನ್ನೂ ಸಾಧಿಸುವ ಶಕ್ತಿ ಅವರಲ್ಲಿದೆ. ಅದಕ್ಕಾಗಿಯೇ ಅವರು ಯಾವಾಗಲೂ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಜೀವನದಲ್ಲಿ ಸಂತೋಷವಾಗಿದ್ದಾರೆ.  ಇವರು ಏನೇ ಕೆಲಸ ಮಾಡಲಿ ಅದೃಷ್ಟ ಅವರ ಜೊತೆಗಿರುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News