ಬೆಂಗಳೂರು : ಪ್ರತಿಯೊಂದು ರತ್ನವು ಕೆಲವು ಗ್ರಹಗಳಿಗೆ ಸಂಬಂಧಿಸಿದ್ದಾಗಿದೆ.   ಜಾತಕದಲ್ಲಿ ಯಾವ ಗ್ರಹವು ದುರ್ಬಲವಾಗಿರುತ್ತದೆಯೋ, ಅದಕ್ಕನುಗುಣವಾಗಿ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ ಗ್ರಹಗಳಿಗೂ ಮರಗಳಿಗೂ ಸಂಬಂಧವಿದೆ. ಹೌದು ಶಮಿ ವೃಕ್ಷದೊಂದಿಗೆ ಶನಿ ಗ್ರಹದ ಸಂಬಂಧವಿಎ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಶನಿ ದೋಷವಿದ್ದಾಗ, ಅಥವಾ ಶನಿ ಕೃಪೆಗಾಗಿ ನೀಲಮಣಿ ದ್ಜರಿಸುವಂತೆ ಸೂಚಿಸಲಾಗುತ್ತದೆ. ಆದರೆ, ನೀಲಮಣಿ ಬಹಳ ದುಬಾರಿ ರತ್ನವಾಗಿದೆ. ಈ ಹಿನ್ನೆಲೆಯಲ್ಲಿ ನೀಲಮಣಿ ಧರಿಸಲು ಸಾಧ್ಯವಾಗದಿದ್ದರೆ, ಶಮಿ ವೃಕ್ಷದ ಬೇರನ್ನು ಕೈಗೆ ಕಟ್ಟಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಶಮೀ ಮರದ ಬೇರು ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗಡ ಬೆಲೆಗೆ ದೊರೆಯುತ್ತದೆ. 


COMMERCIAL BREAK
SCROLL TO CONTINUE READING

ನೀಲಮಣಿಯ ಪ್ರಯೋಜನಗಳು :
ನೀಲಮಣಿಯನ್ನು ಶನಿದೇವನ ನೆಚ್ಚಿನ ರತ್ನವೆಂದು ಪರಿಗಣಿಸಲಾಗಿದೆ. ಈ  ಹರಳನ್ನು ಧರಿಸುವುದರಿಂದ ವ್ಯಕ್ತಿಯ ಮನಸ್ಸಿನಿಂದ ದುರಾಸೆ ಮತ್ತು ಅಪ್ರಾಮಾಣಿಕತೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಹರಳನ್ನು  ಧರಿಸುವುದರಿಂದ ವ್ಯಕ್ತಿಯ ದಕ್ಷತೆ ಹೆಚ್ಚುತ್ತದೆ ಮತ್ತು ವ್ಯಕ್ತಿಯು ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಸಹ ಸುಲಭವಾಗಿ ಮಾಡುವುದು  ಸಾಧ್ಯವಾಗುತ್ತದೆ. ಈ ರತ್ನವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ವ್ಯಕ್ತಿಯನ್ನು ಶಕ್ತಗೊಳಿಸುತ್ತದೆ.


ಇದನ್ನೂ ಓದಿ : Dhanatrayodashi 2022: ಅಕ್ಟೋಬರ್ 22-23 ರಂದು ಈ ಚಿಕ್ಕ ಕೆಲಸ ಮಾಡಿ, ಧನ ಕುಬೇರ ಹಾಗೂ ಶನಿ ದೇವರ ಕೃಪೆಯಿಂದ ಭಾರಿ ಧನಲಾಭ


ಶಮಿ ವೃಕ್ಷದ ಪ್ರಯೋಜನಗಳು :
ಶಮಿ ಸಸ್ಯವು ತೇಜಸ್ಸು ಮತ್ತು ಪರಿಶ್ರಮದ ಸಂಕೇತವಾಗಿದೆ. ಇದು ನೈಸರ್ಗಿಕವಾಗಿ ಬೆಂಕಿಯ ಅಂಶವನ್ನು ಹೊಂದಿದೆ. ಜಾತಕದಲ್ಲಿ ಶನಿಗೆ ಸಂಬಂಧಿಸಿದ ದೋಷವಿದ್ದರೆ ಮನೆಯಲ್ಲಿ ಶಮಿ ಗಿಡ ನೆಟ್ಟು ಪ್ರತಿನಿತ್ಯ ಪೂಜಿಸುವುದರಿಂದ ಶನ ಕೃಪೆಗೆ ಪಾತ್ರರಾಗಬಹುದು. ಶನಿವಾರದಂದು ಶಮಿ ವೃಕ್ಷದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಶಮಿ ವೃಕ್ಷದ  ಹೂವುಗಳು ಮತ್ತು ಎಲೆಗಳನ್ನು ಬಳಸುವುದರಿಂದ ಶನಿಗ್ರಹದ ದುಷ್ಪರಿಣಾಮಗಳು ಶಮನವಾಗುತ್ತವೆ. 


 ಶಮಿ ವೃಕ್ಷದ ಬೇರನ್ನು ಕಟ್ಟುವ ವಿಧಿ : 
ಮೊದಲನೆಯದಾಗಿ ಮನೆಯಲ್ಲಿ ಶಮಿಯ ಬೇರನ್ನು ತಂದ ನಂತರ ಅದನ್ನು ಗಂಗಾಜಲದಿಂದ ಶುದ್ಧಿ ಮಾಡಿ. ನಂತರ, ಅದನ್ನು ಕಪ್ಪು ಅಥವಾ ನೀಲಿ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಅಲ್ಲದೆ, ಶಮಿ ವೃಕ್ಷದ ಬೇರನ್ನು ಶನಿವಾರದಂದು ಸಂಜೆ ಅಥವಾ ಶನಿ ನಕ್ಷತ್ರದಲ್ಲಿ ಕೈಯಲ್ಲಿ ಕಟ್ಟಿಕೊಳ್ಳಬಹುದು.  ಅದನ್ನು ಕಟ್ಟಿದ ನಂತರ, ಶನಿ ಓಂ ಪ್ರಾಂ ಪ್ರೀಂ ಪ್ರೌನ್ಸ್: ಶನಿಶ್ಚರಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ. 


ಇದನ್ನೂ ಓದಿ : ದೀಪಾವಳಿ ಲಕ್ಷ್ಮೀ ಪೂಜೆ ಸಂಪೂರ್ಣವಾಗಬೇಕಾದರೆ ಆಕೆಯ ಸಹೋದರ ಅಲ್ಲಿರಲೇ ಬೇಕು.! ಯಾರು ಗೊತ್ತಾ ಮಹಾಲಕ್ಷ್ಮೀಯ ಸಹೋದರ ?


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ