ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ಯೋಗ ಮತ್ತು ಜ್ಯೋತಿಷ್ಯದ ನಡುವೆ ಪ್ರಮುಖವಾದ ಸಂಬಂಧವಿದೆ. ವಾಸ್ತವವಾಗಿ ಯೋಗವು ಸೂರ್ಯನೊಂದಿಗೆ ನೇರವಾದ ಸಂಪರ್ಕ ಹೊಂದಿದೆ ಎನ್ನಲಾಗುತ್ತದೆ. ಸೂರ್ಯನು ಎಲ್ಲಾ ಗ್ರಹಗಳ ರಾಜ. ಹೀಗಾಗಿ ನೀವು ಸೂರ್ಯದೇವನನ್ನು ಮೆಚ್ಚಿಸಲು ಈ ರೀತಿ ಯೋಗಾಸನಗಳನ್ನು ಮಾಡಿ. ಸೌರವ್ಯೂಹದ ಮುಖ್ಯ ಗ್ರಹ ಸೂರ್ಯ. ಅದರ ದಿವ್ಯ ಕಿರಣಗಳು ಎಲ್ಲಾ ಜೀವಿಗಳ ಮೇಲೆ ಪರಿಣಾಮ ಬೀರುತ್ತವೆ. 


COMMERCIAL BREAK
SCROLL TO CONTINUE READING

ಸೂರ್ಯನು ನವೀಕರಿಸಬಹುದಾದ ಶಕ್ತಿಯ ನಿಧಿ ಮತ್ತು ಸತ್ಯದ ಸಂಕೇತ. ಸೂರ್ಯನ ಆಕಾರ, ಸ್ವಭಾವ ಮತ್ತು ಶಕ್ತಿ ಇತರ ಗ್ರಹಗಳಿಗಿಂತ ಎಲ್ಲಾ ಜೀವಿಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಸೂರ್ಯನ ಸ್ಥಾನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.


ಇದನ್ನು ಓದಿ: ಅತ್ಯಂತ ಜಿಪುಣರಾಗಿರುತ್ತಾರೆ ಈ 4 ರಾಶಿಯ ಜನರು .! ಹಣ ಖರ್ಚು ಮಾಡುವುದಕ್ಕೆ ಹಿಂದೆ ಮುಂದೆ ಯೋಚಿಸುತ್ತಾರೆ


ವಿವಿಧ ಗ್ರಹಗಳೊಂದಿಗೆ ದೇಹದ ಸ್ಥೂಲ, ಸೂಕ್ಷ್ಮ, ಜಡ, ಜಾಗೃತ ಇತ್ಯಾದಿ ಘಟಕಗಳ ಸಂಬಂಧ ಸ್ಥಿರವಾಗಿರುತ್ತದೆ. ಮೊದಲನೆಯದಾಗಿ ಸೂರ್ಯನ ಸ್ವಭಾವವನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ. ಸೂರ್ಯನು ಲಕ್ಷಾಂತರ ವರ್ಷಗಳಿಂದ ಯಾವುದೇ ಬದಲಾವಣೆ ಇಲ್ಲದೆ ಈ ಪ್ರಪಂಚದ ಪ್ರತಿಯೊಂದು ಜೀವಿಗಳಿಗೆ ತನ್ನ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾನೆ. 


ಆಧುನಿಕ ಕಾಲದಲ್ಲಿ, ಜನರು ಯಾವಾಗ ಬೇಕಾದರೂ ಯೋಗ ಮಾಡುತ್ತಾರೆ. ಆದರೆ ವಾಸ್ತವದಲ್ಲಿ, ಸೂರ್ಯನ ಕಿರಣಗಳು ಜನರಿಗೆ ಶಕ್ತಿ ತುಂಬಿದಾಗ ಮಾತ್ರ ಯೋಗ ಮಾಡಬೇಕು. ಅದು ನಿಯಮ. ಸೂರ್ಯನ ಬೆಳಗಿನ ಕಿರಣಗಳಿಂದ ನೈಸರ್ಗಿಕವಾಗಿ ವಿಟಮಿನ್ ಡಿ 3 ಅನ್ನು ಪಡೆಯುತ್ತೇವೆ. ಅದು ದೇಹದಲ್ಲಿ ಎಂದಿಗೂ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ಅನೇಕ ಜನರ ದೇಹದಲ್ಲಿ ವಿಟಮಿನ್ ಡಿ 3 ಕೊರತೆ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಸೂರ್ಯೋದಯದ ಸಂದರ್ಭದಲ್ಲಿ ಯೋಗ ಮಾಡಿದರೆ ಒಳಿತು. ಈ ಕಿರಣಗಳ ಪ್ರಾಮುಖ್ಯತೆ ಎಷ್ಟು ಎಂದರೆ ವೈದ್ಯರು ಕೂಡ ನವಜಾತ ಶಿಶುವನ್ನು ಬೆಳಿಗ್ಗೆ ಸ್ವಲ್ಪ ಸಮಯದವರೆಗೆ ಸೂರ್ಯನ ಬೆಳಕಿಗೆ ಕರೆದೊಯ್ಯಲು ಸಲಹೆ ನೀಡುತ್ತಾರೆ.
 
ಆರೋಗ್ಯಕರ ದೇಹ-ಆರೋಗ್ಯಕರ ಮನಸ್ಸು: 
ಜಗತ್ತಿನಲ್ಲಿ ಹಲವು ರೀತಿಯ ದಿನಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟು ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ವಾಸ್ತವವಾಗಿ, ಜೂನ್ 21 ಅನ್ನು ದೀರ್ಘವಾದ ದಿನವೆಂದು ಪರಿಗಣಿಸಲಾಗುತ್ತದೆ. ಇನ್ನು ಯೋಗವು ಮಾನವನ ಆರೋಗ್ಯವನ್ನು ವೃದ್ಧಿಸುತ್ತದೆ. ಜೂನ್ 21 ರಂದು ಪ್ರಪಂಚದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತದೆ. ಸೂರ್ಯೋದಯದ ಸಮಯದಲ್ಲಿ, ಯೋಗ ಮ್ಯಾಟ್‌ ಬಳಸಿ ಯೋಗವನ್ನು ಮಾಡಿ. ಮಗುವಿಗೆ ತಂದೆ-ತಾಯಿಗಿಂತ ಉತ್ತಮ ಗುರುವಿಲ್ಲ. ಆದ್ದರಿಂದ ಪ್ರತಿದಿನ ಯೋಗ ಮಾಡಿ ಮತ್ತು ನಿಮ್ಮ ಮಕ್ಕಳನ್ನು ಯೋಗ ಮಾಡುವಂತೆ ಪ್ರೇರೇಪಿಸಿ. 


ದಿನದ 24 ಗಂಟೆಗಳಲ್ಲಿ ಕನಿಷ್ಠ 24 ನಿಮಿಷಗಳನ್ನು ಮನುಷ್ಯ ತನಗಾಗಿ ನೀಡಬೇಕು. ಇದರಿಂದ ನೀವು ತಾಳ್ಮೆಯಿಂದ ಜೀವಿಸುವುದನ್ನು ಕಲಿತುಕೊಳ್ಳುತ್ತೀರಿ. ನೀವು 24 ನಿಮಿಷಗಳ ಕಾಲ ಕಣ್ಣು ಮುಚ್ಚಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿದ್ದರೆ, ನೀವು ಜೀವನದಲ್ಲಿ ತಾಳ್ಮೆಯಿಂದ ಇರಲು ಕಲಿತಿದ್ದೀರಿ ಎಂದರ್ಥ. ಈ ಮಧ್ಯೆ ನಿಮ್ಮ ಮನದಲ್ಲಿ ಬರುವ ಯೋಚನೆಗಳನ್ನು ಸುಮ್ಮನೆ ಕಣ್ಣುಮುಚ್ಚಿ ಕುಳಿತುಕೊಂಡು ಯೋಚಿಸಿ. ಬರುವ ಯೋಚನೆಗಳು ಬರಲಿ, ಅವುಗಳಿಗೆ ಒತ್ತು ಕೊಡಬೇಡಿ. ಹೀಗೆ ಮಾಡಿದರೆ, ಎಂತಹ ಸಮಸ್ಯೆಗಳಿಗೂ ತಾಳ್ಮೆಯಿಂದ ಉತ್ತರಗಳನ್ನು ಕಂಡುಕೊಳ್ಳಬಹುದು. 


ಇದನ್ನು ಓದಿ: Nail Tips: ಉಗುರಿನ ಆರೋಗ್ಯ-ಸೌಂದರ್ಯಕ್ಕೆ ಇಲ್ಲಿದೆ ಟಿಪ್ಸ್‌


ಒಂದು ಮೊಬೈಲ್‌ ಚಾಲೂ ಆಗಬೇಕೆಂದರೆ ಚಾರ್ಜ್‌ ಅಗತ್ಯ. ಅದೇ ರೀತಿ ಮನುಷ್ಯನಿಗೆ ಬೆಳಿಗ್ಗೆ ಮಾಡುವ ಯೋಗವು ಆತನ ದೇಹವನ್ನು ಚಾರ್ಜ್ ಮಾಡುತ್ತದೆ. ಮೊಬೈಲ್‌ನಲ್ಲಿ ಎಲ್ಲಾ ರೀತಿಯ ಒಳ್ಳೆಯ ಮತ್ತು ಕೆಟ್ಟ ಸಂದೇಶಗಳು ಬರುವಂತೆ, ದೇವರಿಂದ ಧಾರ್ಮಿಕ, ಆಧ್ಯಾತ್ಮಿಕ, ತಾತ್ವಿಕ ಸಂದೇಶಗಳು ಮೆದುಳಿನಲ್ಲಿ ಬರುತ್ತವೆ. ಹೀಗಿರುವಾಗ ಶಾಂತ ಮನಸ್ಸಿನಿಂದ ಕುಳಿತಾಗ ಮಾತ್ರ ಒಳ್ಳೆಯ ಮತ್ತು ಕೆಟ್ಟ ಸಂದೇಶಗಳ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.