ರಾತ್ರಿ ಅನ್ನ ಸೇವನೆ ಆರೋಗ್ಯಕ್ಕೆ ಹಾನಿಕಾರಕವೇ ? ಏನು ಹೇಳುತ್ತಾರೆ ತಜ್ಞರು ?
ರಾತ್ರಿ ಅನ್ನ ತಿನ್ನಬೇಕೋ ಬೇಡವೋ ಎಂಬ ಪ್ರಶ್ನೆ ಅನೇಕರ ಮನದಲ್ಲಿದೆ. ಕೆಲವರು ರಾತ್ರಿ ವೇಳೆ ಅನ್ನ ತಿನ್ನಬಾರದು ಎನ್ನುತ್ತಾರೆ . ಹಾಗಿದ್ದರೆ ನಿಜವಾಗಿಯೂ ರಾತ್ರಿ ವೇಳೆ ಅನ್ನ ತಿನ್ನಬಾರದೇ ಎನ್ನುವುದಕ್ಕೆ ಉತ್ತರ ಇಲ್ಲಿದೆ.
ಬೆಂಗಳೂರು : ಅನ್ನ ಭಾರತದ ಜನರ ಮುಖ್ಯ ಆಹಾರವಾಗಿದೆ. ಅನ್ನ ಮಾಡುವುದು ಕಷ್ಟದ ಕೆಲಸವಲ್ಲ, ಇದನ್ನು ಸುಲಭವಾಗಿ ಮಾಡಬಹುದು. ಮಾತ್ರವಲ್ಲ ಅನ್ನ ಸೇವನೆಯನ್ನು ಬಹಳಷ್ಟು ಜನ ಇಷ್ಟಪಡುತ್ತಾರೆ. ಜನರು ಅನ್ನವನ್ನು ಬೇರೆ ಬೇರೆ ತೀತಿಯಲ್ಲಿ ಬಳಸುತ್ತಾರೆ. ಕೆಲವರು ಅಣ್ಣ ಸಾಂಬಾರ್ ತಿಂದರೆ ಇನ್ನು ಕೆಲವರು ಚಿತ್ರಾನ್ನ, ಪುಳಿಒಗರೆ, ಮೊಸರನ್ನ, ಪಲಾವ್, ಫ್ರೈಡ್ ರೈಸ್, ಹೀಗೆ ಬೇರೆ ಬೇರೆ ರೀತಿಯಲ್ಲಿ ತಮಗಿಷ್ಟವಾಗುವ ರೀತಿಯಲ್ಲಿ ಬಳಸುತ್ತಾರೆ. ಕಾರ್ಬೋಹೈಡ್ರೇಟ್ ಅಕ್ಕಿಯಲ್ಲಿ ಕಂಡುಬರುತ್ತವೆ. ಇದರೊಂದಿಗೆ, ಇದು ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಅನ್ನು ಸಹ ಒಳಗೊಂಡಿದೆ. ಹೀಗಿದ್ದರೂ ರಾತ್ರಿ ಅನ್ನ ತಿನ್ನಬೇಕೋ ಬೇಡವೋ ಎಂಬ ಪ್ರಶ್ನೆ ಅನೇಕರ ಮನದಲ್ಲಿದೆ. ಕೆಲವರು ರಾತ್ರಿ ವೇಳೆ ಅನ್ನ ತಿನ್ನಬಾರದು ಎನ್ನುತ್ತಾರೆ . ಹಾಗಿದ್ದರೆ ನಿಜವಾಗಿಯೂ ರಾತ್ರಿ ವೇಳೆ ಅನ್ನ ತಿನ್ನಬಾರದೇ ಎನ್ನುವುದಕ್ಕೆ ಉತ್ತರ ಇಲ್ಲಿದೆ.
ರಾತ್ರಿ ಅನ್ನ ತಿನ್ನುವುದರಿಂದ ಆಗುವ ಪ್ರಯೋಜನಗಳು :
ಕಾರ್ಬೋಹೈಡ್ರೇಟ್ ನ ಮುಖ್ಯ ಮೂಲ :
ಅಕ್ಕಿಯು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಕಾರ್ಬೋಹೈಡ್ರೇಟ್‌ಗಳಿಂದ ಪಡೆದ ಶಕ್ತಿಯಿಂದ, ನಾವು ನಮ್ಮ ದೈನಂದಿನ ಜೀವನ ಕಾರ್ಯಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಹೀಗೆ ನೋಡಿದರೆ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಬಹಳ ಮುಖ್ಯವಾಗಿರುತ್ತದೆ. ಕಾರ್ಬೋಹೈಡ್ರೇಟ್‌ಗಳು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸಿಕ್ಕಿದರೆ ನಾವು ನಮ್ಮ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : Green Leaves For Diabetes: ಮಧುಮೇಹಿಗಳಿಗೆ ಪರಿಹಾರ ನೀಡಲಿವೆ ಈ ಮೂರು ಹಸಿರು ಎಲೆಗಳು
ಹೊಟ್ಟೆಯ ಸಮಸ್ಯೆ ಪರಿಹಾರ :
ಅನ್ನ ಸುಲಭವಾಗಿ ಜೀರ್ಣವಾಗುತ್ತದೆ. ಇದರೊಂದಿಗೆ ಹೊಟ್ಟೆನೋವು ಮತ್ತು ಅಜೀರ್ಣ ಸಮಸ್ಯೆಯಲ್ಲೂ ಪ್ರಯೋಜನ ಸಿಗುತ್ತದೆ. ಅದಕ್ಕಾಗಿಯೇ ಹೊಟ್ಟೆ ಸರಿಯಿಲ್ಲ ಎಂದಾದಾಗ ಅಥವಾ ಅಜೀರ್ಣದ ಸಮಸ್ಯೆ ತಲೆದೋರಿದಾಗ ವೈದ್ಯರು ಮೊಸರನ್ನ ತಿನ್ನುವಂತೆ ಸೂಚಿಸುತ್ತಾರೆ.
ರಾತ್ರಿ ಅನ್ನ ತಿನ್ನುವುದು ಸರಿಯೇ?
ಪ್ರತಿಯೊಂದೂ ವಸ್ತುವು ಹೇಗೆ ಪ್ರಯೋಜನಗಳನ್ನು ಹೊಂದಿದೆಯೋ , ಅದೇ ರೀತಿ ಕೆಲವೊಂದು ಅನಾನುಕೂಲಗಳನ್ನು ಸಹ ಹೊಂದಿದೆ. ಮೇಲೆ ನಾವು ಅಣ್ಣ ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದ್ದೇವೆ. ಆದರೆ ರಾತ್ರಿ ಹೊತ್ತು ಅನ್ನ ಸೇವನೆ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎನ್ನಲಾಗಿದೆ. ಅದರಲ್ಲೂ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ರಾತ್ರಿ ಹೊತ್ತು ಅನ್ನ ಸೇವಿಸದೆ ಇರುವುದು ಒಳ್ಳೆಯದು. ಇದರ ಹೊರತಾಗಿಯೂ ಅಣ್ಣ ತಿನ್ನದೇ ಭೋಜನ ಪೂರ್ಣವಾಗುವುದಿಲ್ಲ ಎಂದಾದರೆ ಬ್ರೌನ್ ರೈಸ್ ಬಳಸುವುದು ಒಳ್ಳೆಯದು. ಇದರಿಂದ ಕಾರ್ಬೋಹೈಡ್ರೇಟ್‌ಗಳ ಬದಲಿಗೆ ಫೈಬರ್ ದೇಹಕ್ಕೆ ಸಿಗುತ್ತದೆ.
ಇದನ್ನೂ ಓದಿ : ಹೈ BP ನಿಯಂತ್ರಣಕ್ಕೆ ತಪ್ಪದೆ ಕುಡಿಯಿರಿ ಈ 4 ಹರ್ಬಲ್ ಚಹಾ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.