ನವದೆಹಲಿ : ರಾತ್ರಿ ನಿದ್ರೆಯಲ್ಲಿ ಕಾಣುವ ಕನಸುಗಳು  (Dreams) ಭವಿಷ್ಯದ ಘಟನೆಗಳ ಸೂಚನೆಗಳನ್ನು (Future indications) ನೀಡುತ್ತವೆ ಎನ್ನಲಾಗುತ್ತದೆ. ಹೀಗಾಗಿಯೇ ಯಾವುದೇ ಕನಸು ಬಿದ್ದ ನಂತರ ಆ ಕನಸು ಯಾಕೆ ಬಿಟ್ಟು ಎಂಬ ಯೋಚನೆ ಮನಸಿನಲ್ಲಿ ಬರು ತ್ತದೆ. ಆ ಕನಸಿನ ಅರ್ಥ ತಿಳಿದುಕೊಳ್ಳುವ  ಬಯಕೆಯೂ ಇರುತ್ತದೆ. ಪ್ರತಿ ಕನಸಿನ ಅರ್ಥವನ್ನು ಸ್ವಪ್ನ ಶಾಸ್ತ್ರದಲ್ಲಿ (Swapna Shaastra) ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಕನಸಿನಲ್ಲಿ ಆಹಾರವನ್ನು ನೋಡುವುದು :  
ಕನಸಿನಲ್ಲಿ (Dreams) ಆಹಾರ ತಿನ್ನುವುದನ್ನು ನೋಡಿದರೆ ಆ ವ್ಯಕ್ತಿಯ ಯಾವುದೇ ದೈಹಿಕ ಸಮಸ್ಯೆ ಬೇಗನೆ ಗುಣವಾಗುತ್ತದೆ ಎಂದರ್ಥ. ಹಾಗಾಗಿ ಆಹಾರ ತಿನ್ನುವ ಕನಸು ಬಿದ್ದರೆ ಅದು ಶುಭ ಎಂದು ಹೇಳಲಾಗುತ್ತದೆ. . 


ಕನಸಿನಲ್ಲಿ ಆಹಾರವನ್ನು (Food)  ಬೇಯಿಸುತ್ತಿರುವುದನ್ನು ನೋಡಿದರೆ ಆ ಕೂಡಾ ಶಭ ಸಂಕೇತವನ್ನು ಸೂಚಿಸುತ್ತದೆ. ಅಂದರೆ ಶೀಘ್ರವೇ  ಒಳ್ಳೆಯ ಸುದ್ದಿಯನ್ನು ಪಡೆಯಲಿದ್ದೀರಿ ಎಂಬುದರ ಮುನ್ಸೂಚನೆಯಾಗಿರುತ್ತದೆ ಈ ಕನಸು. 


ಇದನ್ನೂ ಓದಿ : Monday Remedies: ಜಾತಕದಲ್ಲಿ ಅಶುಭ ಚಂದ್ರ ಒತ್ತಡ ಹಾಗೂ ಕಾಯಿಲೆಯ ಕಾರಕ, ಸೋಮವಾರ ಈ ಉಪಾಯಗಳನ್ನು ಅನುಸರಿಸಿ


ಕನಸಿನಲ್ಲಿ ಬಹಳಷ್ಟು ಆಹಾರವನ್ನು (food in dreams) ನೋಡಿದರೆ ಏನರ್ಥ ? ನಿಮ್ಮ ಕನಸಿನಲ್ಲಿ ಅಪಾರ ಪ್ರಮಾಣದಲ್ಲಿ ಆಹಾರವನ್ನು ಕಂಡರೆ, ಅಥವಾ ನೀವು ಅ ಆಹಾರವನ್ನು ಸೇವಿಸುತ್ತಿರುವುದನ್ನು ಕಂಡರೆ, ಶೀಘ್ರದಲ್ಲೇ ಸಾಕಷ್ಟು ಹಣವನ್ನು ಪಡೆಯಲಿದ್ದೀರಿ ಎನ್ನುವುದನ್ನು ಅದು ಸೂಚಿಸುತ್ತದೆ.  


ಇನ್ನು ನಿಮ್ಮ ಕನಸಿನಲ್ಲಿ ನೀವು ಯಾರಿಗಾದರೂ ಆಹಾರವನ್ನು ನೀಡುತ್ತಿರುವುದನ್ನು ನೋಡಿದರೆ, ಶೀಘ್ರದಲ್ಲೇ ನಿಮ್ಮ ಕೈಯಲ್ಲಿ ಕೆಲವು ಸೇವಾ ಕೆಲಸಗಳು ಆಗಲಿವೆ ಎಂದರ್ಥ. ಇದರೊಂದಿಗೆ, ಈ ಕೆಲಸವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿಯೂ ಮಾರ್ಪಾಡಾಗಬಹುದು.  


ಇದನ್ನೂ ಓದಿ : Palmistry: ನಿಮ್ಮ ಮಣಿಕಟ್ಟಿನ ಈ ರೇಖೆ ನೀವೆಷ್ಟು ಭಾಗ್ಯಶಾಲಿಗಳು ಎನ್ನುವುದರ ಸೂಚಕ


ಕನಸಿನಲ್ಲಿ ಅನ್ನ (Rice) ತಿನ್ನುವುದನ್ನು ನೋಡಿದರೆ ಅದು ಕೂಡಾ ಶುಭವೇ. ಕನಸಿನಲ್ಲಿ ನೀವು ಅನ್ನ ತಿನ್ನುವುದನ್ನು ನೋಡುವುದು ಕೂಡ ಒಳ್ಳೆಯ ಸುದ್ದಿಯನ್ನು ಪಡೆಯುವ ಸಂಕೇತವಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.