Monday Remedies: ಜಾತಕದಲ್ಲಿ ಅಶುಭ ಚಂದ್ರ ಒತ್ತಡ ಹಾಗೂ ಕಾಯಿಲೆಯ ಕಾರಕ, ಸೋಮವಾರ ಈ ಉಪಾಯಗಳನ್ನು ಅನುಸರಿಸಿ

Moon Negative Impact - ಜಾತಕದಲ್ಲಿ ಚಂದ್ರನ ಅಶುಭ ಸ್ಥಿತಿ ಜೀವನದಲ್ಲಿ ಹಲವು ಸಂಕಷ್ಟಗಳನ್ನು ತರುತ್ತದೆ. ಈ ಸಂಕಷ್ಟಗಳಿಂದ ಪಾರಾಗಲು ಸೋಮವಾರ ಕೆಲ ಉಪಾಯಗಳನ್ನು ಮಾಡಿ ಭಾರಿ ನೆಮ್ಮದಿ ಪಡೆಯಬಹುದು.

Written by - Nitin Tabib | Last Updated : Sep 13, 2021, 11:58 AM IST
  • ಚಂದ್ರನ ಅಶುಭ ಸ್ಥಿತಿಯಿಂದ ಪಾರಾಗಲು ಈ ಉಪಾಯಗಳನ್ನು ಅನುಸರಿಸಿ
  • ಸೋಮವಾರ ಈ ವಸ್ತುಗಳ ದಾನ ಮಾಡಿ.
  • ಬಿಳಿಬಣ್ಣದ ಬಟ್ಟೆಯನ್ನು ತೊಟ್ಟುಕೊಳ್ಳಬೇಡಿ.
Monday Remedies: ಜಾತಕದಲ್ಲಿ ಅಶುಭ ಚಂದ್ರ ಒತ್ತಡ ಹಾಗೂ ಕಾಯಿಲೆಯ ಕಾರಕ, ಸೋಮವಾರ ಈ ಉಪಾಯಗಳನ್ನು ಅನುಸರಿಸಿ  title=
Moon Negative Impact (File Photo)

Moon Negative Impact - ನವಗ್ರಹಗಳಲ್ಲಿ (Navagraha) ಸೂರ್ಯನ (Sun) ನಂತರ ಚಂದ್ರನನ್ನು(Moon) ಅತ್ಯಂತ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ  (Astrology) ಬಹುತೇಕ ಲೆಕ್ಕಾಚಾರಗಳನ್ನು ಚಂದ್ರನ (Chandra Dev) ಸ್ಥಾನದ ಆಧಾರದ ಮೇಲೆ ಮಾಡಲಾಗುತ್ತದೆ. ಚಂದ್ರನು ಮನಸ್ಸಿನ ಕಾರಕ ಗ್ರಹ, ಕುಂಡಲಿಯಲ್ಲಿ ಆತನ ಸ್ಥಾನವು ಸರಿಯಾಗಿಲ್ಲದಿದ್ದರೆ, ವ್ಯಕ್ತಿಯು ಯಾವಾಗಲೂ ಗೊಂದಲಕ್ಕೊಳಗಾಗುತ್ತಾನೆ. ಅಲ್ಲದೆ, ಅದರ ಅಶುಭ ಪರಿಣಾಮದಿಂದಾಗಿ, ಒಬ್ಬ ವ್ಯಕ್ತಿಗೆ ಹಲವು ರೀತಿಯ ಮಾನಸಿಕ (Health Problems) ಸಮಸ್ಯೆಗಳು, ನಿದ್ರಾಹೀನತೆ, ಆಸ್ತಮಾ, ಶೀತಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಈ ಎಲ್ಲಾ ಸನ್ನಿವೇಶಗಳನ್ನು ತಪ್ಪಿಸಲು, ಚಂದ್ರ ದೇವರನ್ನು ಮೆಚ್ಚಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಸೋಮವಾರ ಈ ಪರಿಹಾರಗಳನ್ನು ಮಾಡುವುದು ಸರ್ವಶ್ರೇಷ್ಠ ಎನ್ನಲಾಗುತ್ತದೆ. ಏಕೆಂದರೆ ಸೋಮವಾರ ಚಂದ್ರನವಾರವಾಗಿದೆ.

ಚಂದ್ರನಿಂದ ಸಕಾರಾತ್ಮಕ ಫಲ ಪ್ರಾಪ್ತಿಯ ಉಪಾಯಗಳು
ಸೋಮವಾರ ಕೆಲವು ಮಂತ್ರಗಳನ್ನು ಪಠಿಸುವುದು ಒಳ್ಳೆಯದು. ಇದಕ್ಕಾಗಿ, ಏಕಾಕ್ಷರಿ ಬೀಜ್ ಮಂತ್ರ- 'ಓಂ ಸೋಮಾಯ ನಮಃ' ಎಂದು ಕನಿಷ್ಠ 108 ಬಾರಿ ಜಪಿಸಿ. ಇದರ ಹೊರತಾಗಿ, ಚಂದ್ರನ ಕೆಟ್ಟ ಪರಿಣಾಮಗಳನ್ನು ತೊಡೆದುಹಾಕಲು ದಾನಗಳನ್ನು ಸಹ ಮಾಡಬಹುದು. ಇದಕ್ಕಾಗಿ, ದಾನ ಸಾಮಗ್ರಿಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಶಿವ ದೇವಾಲಯಕ್ಕೆ ಅರ್ಪಿಸಿ ಅಥವಾ ಹರಿಯುವ ನೀರಿನಲ್ಲಿ ಎಸೆಯಿರಿ. ನೀವು ಬಿಳಿ ಬಟ್ಟೆಗಳಲ್ಲಿ ಅಕ್ಕಿ, ಬಿಳಿ ಹೂವುಗಳು, ಸಕ್ಕರೆ, ಕರ್ಪೂರ, ಮುತ್ತುಗಳು, ಬೆಳ್ಳಿ, ಶಂಖ, ತುಪ್ಪ, ಕುಂಭ, ಕಲ್ಲು ಸಕ್ಕರೆ, ಹಾಲು-ಮೊಸರು, ಹರಳು ಇತ್ಯಾದಿಗಳನ್ನು ಇಡಬಹುದು. ಈ ದಾನವನ್ನು ಸಂಜೆ ಮಾಡುವುದು ಉತ್ತಮ.

ಇದನ್ನೂ ಓದಿ-Palmistry: ನಿಮ್ಮ ಮಣಿಕಟ್ಟಿನ ಈ ರೇಖೆ ನೀವೆಷ್ಟು ಭಾಗ್ಯಶಾಲಿಗಳು ಎನ್ನುವುದರ ಸೂಚಕ

ಚಂದ್ರನ ಕೆಟ್ಟ ಪ್ರಭಾವವನ್ನು ಈ ರೀತಿ ಕೂಡ ಕಡಿಮೆ ಮಾಡಬಹುದು
ಲಾಲ್ ಕಿತಾಬ್ (Lal Kitab Upay) ಮತ್ತು ಜ್ಯೋತಿಷ್ಯದಲ್ಲಿ, ಚಂದ್ರನ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ

>> ಭಾನುವಾರ, ನಿಮ್ಮ ತಲೆದಿಂಬಿನ ಬಳಿ ಹಸಿ ಹಾಲು ಇತ್ತು ಮಲಗಿ  ಮತ್ತು ಸೋಮವಾರ ಬೆಳಗ್ಗೆ ಅದನ್ನು ಕರಿ ಜಾಲಿ ಮರದಲ್ಲಿ ಇರಿಸಿ.
>> ಸೋಮವಾರ ಅಕ್ಕಿಯನ್ನು ದಾನ ಮಾಡಿ.
>> ತಮ್ಮ ಜಾತಕದಲ್ಲಿ ಚಂದ್ರನು ಅಶುಭ ಸ್ಥಿತಿಯಲ್ಲಿರುವ ಜನರು ಬಿಳಿ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು.

ಇದನ್ನೂ ಓದಿ-Vastu Tips: ಯಾವುದೇ ರೀತಿಯ ರಿಪೇರಿ ಇಲ್ಲದೆ ಮನೆಯ ವಾಸ್ತುದೋಷವನ್ನು ಈ ರೀತಿ ನಿವಾರಿಸಿ

(ಸೂಚನೆ -  ಈ ಲೇಖನದಲ್ಲಿ ನೀಡಲಾಗಿರುವ ಸೂಚನೆಗಳು ಸಾಮಾನ್ಯ ಮಾಹಿತಿ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Guru Gochar September 2021: ಮಕರ ರಾಶಿಗೆ ಗುರುವಿನ ಪ್ರವೇಶ, ನೀಚಭಂಗ ರಾಜಯೋಗದಿಂದ ಈ ನಾಲ್ಕು ರಾಶಿಗಳ ಪರಿಸ್ಥಿತಿಯಲ್ಲಿ ಬದಲಾವಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News