Guru Gochar 2023: ಅಶ್ವಿನಿ ನಕ್ಷತ್ರದಲ್ಲಿ ಗುರು ಪ್ರವೇಶ, ಯಾವ ರಾಶಿಗಳ ಜನರ ಮೇಲೆ ಇದರ ಪ್ರಭಾವ ಹೇಗಿರಲಿದೆ?
Bruhaspati Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಿದಂತೆ ತನ್ನ ನಕ್ಷತ್ರವನ್ನು ಕೂಡ ಪರಿವರ್ತಿಸುತ್ತವೆ. ಪ್ರಸ್ತುತ ದೇವಾಧಿದೇವತೆಗಳ ಗುರು ಆಗಿರುವ ಬೃಹಸ್ಪತಿ ಮಂಗಳನ ನಕ್ಷತ್ರವಾಗಿರುವ ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಗುರುವಿನ ಈ ಅಶ್ವಿನಿ ನಕ್ಷತ್ರ ಪ್ರವೇಶ ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ತನ್ನ ಪ್ರಭಾವ ಬೀರಲಿದೆ.
Jupiter Transit In Mangal's Nakshatra: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲ-ಕಾಲಕ್ಕೆ ತನ್ನ ರಾಶಿಯನ್ನು ಪರಿವರ್ತಿಸುತ್ತವೆ. ಇದೇ ರೀತಿ ಅವು ತನ್ನ ನಕ್ಷತ್ರಗಳನ್ನು ಕೂಡ ಪರಿವರ್ತಿಸುತ್ತವೆ. ಗ್ರಹಗಳ ಈ ಚಾಲನೆ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಪ್ರಸ್ತುತ 22 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇವಾಧಿದೇವತೆಗಳ ಗುರು ಎಂದೇ ಭಾವಿಸಲಾಗುವ ಬೃಹಸ್ಪತಿ ಅಶ್ವಿನಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಅಶ್ವಿನಿ ನಕ್ಷತ್ರದ ಮೇಲೆ ಮಂಗಳನ ಅಧಿಪತ್ಯವಿದ್ದು. ಕೇತು ಅಶ್ವಿನಿ ನಕ್ಷತ್ರದ ಸ್ವಾಮಿ, ಪ್ರಸ್ತುತ ಅಶ್ವಿನಿ ನಕ್ಷತ್ರದ ಪ್ರಥಮ ಚರಣ ನಡೆಯುತ್ತಿದೆ. ಒಟ್ಟು ನಾಲ್ಕು ಚರಣಗಳಿರುತ್ತವೆ. ಹೀಗಾಗಿ ಗುರು ಗ್ರಹದ ಅಶ್ವಿನಿ ನಕ್ಷತ್ರ ಪ್ರವೇಶದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ನೋಡಲು ಸಿಗಲಿದೆ. ಹೀಗಿರುವಾಗ 12 ರಾಶಿಗಳ ಜನರ ಮೇಲೆ ಇದರ ಪ್ರಭಾವ ಹೇಗಿರಲಿದೆ ತಿಳಿದುಕೊಳ್ಳೋನ ಬನ್ನಿ,
ಪ್ರಥಮ ಚರಣ (ಏಪ್ರಿಲ್ 22, 2023 ರಿಂದ ಮೇ 6, 2023 ರವರೆಗೆ) ಗುರುವಿನ ಈ ಅಶ್ವಿನಿ ನಕ್ಷತ್ರ ಗೋಚರ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಪ್ರಭಾವ ಸಾಮಾನ್ಯವಾಗಿ ಎಲ್ಲಾ ರಾಶಿಗಳ ಮೇಲೆ ಒಂದೇ ರೀತಿಯದ್ದಾಗಿರಲಿದೆ. ಹೀಗಾಗಿ ಪ್ರಥಮ ಚರಣದಲ್ಲಿ ಎಲ್ಲಾ ರಾಶಿಗಳ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗಲಿದೆ. ತಪ್ಪು ಕೆಲಸ ಮಾಡಬೇಡಿ. ಅಪಕೀರ್ತಿಗೆ ಕಾರಣವಾಗಬಹುದು. ಮಾತಿನ ಮೇಲೆ ನಿಯಂತ್ರಣ ಇರಲಿದೆ. ಅಜ್ಞಾತ ಭಯ ಕಾಡುವ ಸಾಧ್ಯತೆ ಇದೆ. ಧನ ಧಾನ್ಯದಲ್ಲಿ ವೃದ್ಧಿ, ಘನತೆಗೌರವ ಪ್ರಾಪ್ತಿಯಾಗಲಿದೆ. ಆಡಳಿತಾತ್ಮಕ ಕೆಲಸಗಳಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಅದ್ಭುತವಾಗಿದೆ. ನಿಮಗೆ ಸ್ಥಾನಮಾನ ಪ್ರಾಪ್ತಿಯಾಗಲಿದೆ. ರಾಜಕೀಯಕ್ಕೆ ಸಂಬಂಧಿಸಿದ ಜನರಿಗೂ ಕೂಡ ಸ್ಥಾನಮಾನ ಪ್ರಾಪ್ತಿಯಾಗಲಿದೆ.
ದ್ವಿತೀಯ ಚರಣ (ಮೇ 6, 2023 ರಿಂದ ಮೇ 20, 2023ರ ವರೆಗೆ) - ಎರಡನೇ ಚರಣದಲ್ಲಿ ಎಲ್ಲಾ 12 ರಾಶಿಗಳ ಜನರ ಆರೋಗ್ಯ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಮುಖದಲ್ಲಿ ಒಂದು ವಿಶೇಷವಾದ ಕಾಂತಿ ಇರಲಿದೆ. ಆಸೆ-ಆಕಾಂಕ್ಷೆಗಳು ಈಡೇರಲಿವೆ, ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯಕ್ತಿತ್ವದಲ್ಲಿಯೂ ಕೂಡ ಹೊಸ ಚೈತನ್ಯ ಇರಲಿದೆ. ವಾಹನ, ಆಸ್ತಿಪಾಸ್ತಿ ಖರೀದಿಗೆ ಯೋಜನೆ ರೂಪಿಸಬಹುದು, ಧಾರ್ಮಿಕ ಕಾರ್ಯಗಳಲ್ಲಿ ಅಭಿರುಚಿ ಹೆಚ್ಚಾಗುವ ಸಾಧ್ಯತೆ ಇದೆ. ಕೃಷಿ ಕೆಲಸಗಳಿದ್ನ ಧನಲಾಭವಾಗಲಿದೆ. ಉನ್ನತ ವ್ಯಕ್ತಿಗಳ ಜೊತೆಗೆ ಒಡನಾಟ ಹೆಚ್ಚಾಗಲಿದೆ. ಆದರೆ ಎಚ್ಚರ ಸಾಲ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಚರಿತ್ರೆಗೆ ಸಂಬಂಧಿಸಿದಂತೆ ಸ್ವಲ್ಪ ಜಾಗ್ರತೆವಹಿಸಿ.
ತೃತೀಯ ಚರಣ (ಮೇ 202,2023 ರಿಂದ ಜೂನ್ 4, 2023 ರವರೆಗೆ) - ಈ ಹಂತದಲ್ಲಿ ನಿಮಗೆ ಮಂಗಳ, ಕೇತು ಹಾಗೂ ಬುಧರ ಪ್ರಭಾವ ಕಂಡು ಬರಲಿದೆ. ಇದರಿಂದ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಭಾರಿ ಹೊಳಪು ಕಾಣಿಸಿಕೊಳ್ಳಲಿದೆ. ಜನ ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ಹೊಸ ಬಟ್ಟೆ, ಐಷಾರಾಮಿ ವಸ್ತುಗಳನ್ನು ನೀವು ಖರೀದಿಸುವ ಸಾಧ್ಯತೆ ಇದೆ. ಒಳ್ಳೆಯ ಧನಲಾಭದ ಜೊತೆಗೆ ಯಾತ್ರೆಯ ಯೋಗವಿದೆ.
ಚತುರ್ಥ ಚರಣ (ಜೂನ್ 04, 2023 ರಿಂದ ಜೂನ್ 21, 2023 ರವರೆಗೆ) - ನಾಲ್ಕನೇ ಹಂತದಲ್ಲಿ ನಿಮಗೆ ನಿಮ್ಮ ಅದೃಷ್ಟದ ಭಾರಿ ಬೆಂಬಲ ಸಿಗಲಿದೆ. ಪ್ರಸನ್ನಚಿತ್ತರಾಗಿರುವಿರಿ. ಇಮೋಶ್ನಲ್ ನಿರ್ಧಾರಗಳನ್ನು ನೀವು ಕೈಗೊಳ್ಳುವ ಸಾಧ್ಯತೆ ಇದೆ. ಸೇನೆ, ಪೊಲೀಸ್ ಹಾಗೂ ಎಲೆಕ್ಟ್ರಾನಿಕ್ ಕ್ಷೇದ್ರದಲ್ಲಿ ಕಾರ್ಯನಿರತರಾದ ಜನರಿಗೆ ಈ ಸಮಯ ಅದ್ಭುತ ಸಾಬೀತಾಗಲಿದೆ. ಬರವಣಿಗೆ, ಸಿಎ, ಪಬ್ಲಿಕೇಶನ್ ಕೆಲಸಗಳಲ್ಲಿ ನಿರತರಾದವರಿಗೂ ಕೂಡ ಈ ಸಮಯ ಅದ್ಭುತವಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.