Maha Dhan Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, 50 ವರ್ಷಗಳ ಸುದೀರ್ಘ ಅವಧಿಯ ಬಳಿಕ ಒಂದು ಅತ್ಯಂತ ಶುಭ ಯೋಗ ಸೃಷ್ಟಿಯಾಗುತ್ತಿದೆ. ಅದುವೇ ಮಹಾ ಧನ ರಾಜಯೋಗ. ಈ ರಾಜಯೋಗ ಹಲವು ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ಯೋಗದಿಂದ ತಾಯಿ ಲಕ್ಷ್ಮಿ ಹಾಗೂ ಕರ್ಮ ಫಲದಾತ ಶನಿಯ ಕೃಪೆಯಿಂದ ಹಲವು ರಾಶಿಗಳಿಗೆ ಕೋಟ್ಯಾಧಿಪತಿಯಾಗುವ ಯೋಗ ರೂಪುಗೊಳ್ಳುತ್ತಲಿದೆ. ಬನ್ನಿ ತಿಳಿದುಕೊಳ್ಳೋಣ.
Maha Dhana Rajyog: ವೈದಿಕ ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕಾಲಕಾಲಕ್ಕೆ ಸಂಭವಿಸುವ ಗ್ರಹಗಳ ಗೋಚರ ಹಲವು ಶುಭ ಹಾಗೂ ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಈ ಯೋಗಗಳು ಕೆಲವರ ಪಾಲಿಗೆ ಶುಭ ಸಾಬೀತಾದರೆ, ಕೆಲವರ ಪಾಲಿಗೆ ಅಶುಭ ಸಾಬೀತಾಗುತ್ತವೆ. ಗ್ರಹಗಳ ಈ ಸಾಗಣೆಯಿಂದ ನಿರ್ಮಾಣಗೊಳ್ಳುವ ಮೈತ್ರಿಗಳು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ. ಇಂತಹುದೇ ಒಂದು ಮೈತ್ರಿ ಕೆಲವೇ ದಿನಗಳಲ್ಲಿ ವೃಷಭ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಮತ್ತು ಅದರಿಂದ ಮಹಾ ಧನ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. 50 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶುಕ್ರನ ವೃಷಭ ರಾಶಿ ಗೋಚರದಿಂದ ಈ ಮಹಾ ಧನ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ಹಲವು ರಾಶಿಗಳ ಜನರಿಗೆ ಲಾಭಕಾರಿ ಸಾಬೀತಾಗಲಿದೆ. ಬನ್ನಿ ಅವು ಯಾವುವು ತಿಳಿದುಕೊಳ್ಳೋಣ,
ಇದನ್ನೂ ಓದಿ-Shubh Navpancham Yog: 30 ವರ್ಷಗಳ ಬಳಿಕ ಶನಿ-ಶುಕ್ರರ ಯುತಿಯಿಂದ ನವಪಂಚಮ ರಾಜ ಯೋಗ, ಈ ರಾಶಿಗಳ ಭಾಗ್ಯೋದಯ ಪಕ್ಕಾ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ವೃಷಭ ರಾಶಿ: ನಿಮ್ಮ ರಾಶಿಯಲ್ಲಿಯೇ ಈ ಮಹಾ ಧನ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ನಿಮ್ಮ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ನಿಮ್ಮ ರಾಶಿಯ ಅಧಿಪತಿ ನಿಮ್ಮ ಗೋಚರ ಜಾತಕದ ನವಮೇಷ ಹಾಗೂ ದಶಮೇಶ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದಲ್ಲದೆ ಶುಕ್ರ ಕೂಡ ಲಗ್ನ ಭಾವದಲ್ಲಿ ವಿರಾಜಮಾನ ನಾಗಿರಲಿದ್ದಾನೆ. ಹೀಗಿರುವಾಗ ಕೆಲವೇ ದಿನಗಳಲ್ಲಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ನೀವು ಕಾಣುವಿರಿ. ನಿಮ್ಮ ಗೋಧರ ಜಾತಕದಲ್ಲಿ ಶಶ, ಮಾಲವ್ಯ ಹಾಗೂ ಲಕ್ಷ್ಮಿ ನಾರಾಯಣ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಧನ ಲಕ್ಷ್ಮಿ ನಿಮ್ಮ ಮೇಲೆ ಅಪಾರ ಕೃಪೆ ತೋರಲಿದ್ದಾಳೆ. ಈ ಅವಧಿಯಲ್ಲಿ ನಿಮಗೆ ಕೌಟುಂಬಿಕ ಸುಖ ಪ್ರಾಪ್ತಿಯಾಗಲಿದೆ. ನೌಕರವರ್ಗದ ಜನರಿಗೆ ಪ್ರಮೋಷನ್ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.
ಮಕರ ರಾಶಿ: ಮಕರ ರಾಶಿಯ ಜಾತಕದವರ ಪಾಲಿಗೆ ಈ ಮಹಾ ಧನ ರಾಜಯೋಗ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಭಾಗ್ಯ ಸ್ಥಾನದಲ್ಲಿ ಗುರು ಹಾಗೂ ಬುಧರು ವಿರಾಜಮಾನರಾಗಿದ್ದಾರೆ. ಅವರು ನಿಮ್ಮ ಗೋಚರ ಜಾತಕದ ಮಧ್ಯ ಭಾಗದಲ್ಲಿ ವಿರಾಜಮಾನನಾಗಿದ್ದಾರೆ. ಇದಲ್ಲದೆ ಏಪ್ರಿಲ್ 6 ರಂದು ಶುಕ್ರ ಕೂಡ ನಿಮ್ಮ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ನಿರ್ಮಾಣಗೊಳ್ಳುವ ಶುಭಯೋಗ ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿದೆ. ಶನಿ ನಿಮ್ಮ ರಾಶಿಯ ಧನಭಾವದಲ್ಲಿದ್ದಾನೆ. ಹೀಗಿರುವಾಗ ಶನಿಯ ಪ್ರಭಾವ ಪ್ರಬಲ ಎಂದು ಭಾವಿಸಲಾಗುತ್ತದೆ. ಹೀಗಾಗಿ ಲಕ್ಷ್ಮಿಯ ಕೃಪೆ ಹಾಗೂ ಶನಿಯ ಯುತಿಯ ಕಾರಣ ನಿಮಗೆ ಅಪಾರ ಧನಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ಆರ್ಥಿಕ ವೇದಿಕೆಯಲ್ಲಿ ನಿಮ್ಮ ಸ್ಥಿತಿ ತುಂಬಾ ಗಟ್ಟಿಯಾಗಲಿದೆ.
ಕುಂಭ ರಾಶಿ: ಕುಂಭ ರಾಶಿಯ ಜಾತಕದವರ ಮೇಲೆ ಧನರಾಜ ಯೋಗಾದ ಪ್ರಭಾವ ಸಕಾರಾತ್ಮಕವಾಗಿರಲಿದೆ. ಶುಕ್ರ ನಿಮ್ಮ ರಾಶಿಯ ಅದೃಷ್ಟ ಸ್ಥಾನದಲ್ಲಿದ್ದು, ಇದು ನಿಮ್ಮ ಗೋಚರ ಜಾತಕದ ಚತುರ್ಥ ಭಾವಗಾಗಿದೆ. ಹೀಗಿರುವಾಗ ನಿಮ್ಮ ರಾಶಿಯಲ್ಲಿ ಕೇಂದ್ರ ತ್ರಿಕೋನ ಹಾಗೂ ಮಾಲವ್ಯ ರಾಜಯೋಗಗಳೂ ಕೂಡ ನಿರ್ಮಾಣಗೊಳ್ಳುತ್ತಿವೆ. ಇದರಿಂದ ನಿಕಟ ಭವಿಷ್ಯದಲ್ಲಿ ನಿಮಗೆ ಅಪಾರ ಧನಪ್ರಾಪ್ತಿಯಾಗಲಿದೆ ಎಂದರ್ಥ, ಈ ಅವಧಿಯಲ್ಲಿ ನಿಮಗೆ ಲಕ್ಷ್ಮೀದೇವಿಯ ಅಪಾರ ಸೌಭಾಗ್ಯ ಪ್ರಾಪ್ತಿಯಾಗಲಿದೆ. ವ್ಯಾಪಾರದ ದೃಷ್ಟಿಯಿಂದ ನೀವು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಹೊಸ ಅವಕಾಶಗಳ ಪ್ರಾಪ್ತಿಯಿಂದ ನಿಮಗೆ ಉತ್ತಮ ಫಲಿತಾಂಶಗಳು ಕಾಣಸಿಗಲಿವೆ. ನೌಕರಿಯಲ್ಲಿ ಸ್ಥಾನ ಮಾನ ಪ್ರತಿಷ್ಠೆಯಲ್ಲಿ ಹೆಚ್ಚಳವಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)